ಮತಗಟ್ಟೆ ಸಿಬ್ಬಂದಿಗಳಿಗೆ ಬಸ್ ಪೂರೈಕೆ ಹಿನ್ನೆಲೆ: ಮೇ 6 ಹಾಗೂ 7 ರಂದು ಬಸ್ ಸಂಚಾರದಲ್ಲಿ ವ್ಯತ್ಯಯ

0
41

ಕಲಬುರಗಿ; ಗುಲಬರ್ಗಾ ಲೋಕಸಭಾ ಚುನಾವಾಣೆಯ ಮತದಾನ ಮೇ 7 ರಂದು ಮಂಗಳವಾರ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ/ಸಿಬ್ಬಂದಿಗಳನ್ನು ಕರೆದೊಯ್ಯಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1 ರಿಂದ ಒಟ್ಟು 127 ಬಸ್‍ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಿದ್ದರಿಂದ ಮೇ 6 ಹಾಗೂ 7 ರಂದು ಎರಡು ದಿನಗಳ ಕಾಲ ಬಸ್ ಸಂಚಾರ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಂಸ್ಥೆಯ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಮೇಲ್ಕಂಡ ದಿನದಂದು ಕಲಬುರಗಿ, ಕಮಲಾಪೂರ, ಸೇಡಂ, ಮುಧೋಳ, ಚಿತ್ತಾಪುರ, ಕಾಳಗಿ, ಚಿಂಚೋಳಿ, ಶಹಾಬಾದ ಹಾಗೂ ಕಲಬುರಗಿ ನಗರ ಸಾರಿಗೆ (ಸುಪರ್ ಮಾರ್ಕೇಟ್) ಬಸ್ ನಿಲ್ದಾಣಗಳಿಂದ ವಿವಿಧಡೆ ತೆರಳುವ ದೈನಂದಿನ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕ ಪ್ರಯಾಣಿಕರು ನಿಗಮದೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here