ಸ್ವೀಪ್ ಸಮಿತಿಯಿಂದ ಕ್ರಿಕೆಟ್ ಪಂದ್ಯಾವಳಿ : ಮೀಡಿಯಾ ಎಲೆವನ್ ತಂಡಕ್ಕೆ 7 ವಿಕೆಟ್‍ಗಳ ಜಯ

0
35

ಕಲಬುರಗಿ; ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ಪೀಪ್ ಸಮಿತಿ ವತಿಯಿಂದ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಲು ರವಿವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಆಫೀಸರ್-11 ಮತ್ತು ಮೀಡಿಯಾ-11 ತಂಡಗಳ ನಡುವೆ ನಡೆದ ಫ್ರೆಂಡ್ಲಿ ಮ್ಯಾಚಿನಲ್ಲಿ 7 ವಿಕೆಟ್‍ನೊಂದಿಗೆ ಮೀಡಿಯಾ-11 ತಂಡ ಜಯ ಸಾಧಿಸಿತ್ತು.

ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ 10 ಓವರ್‍ಗಳ ಪಂದ್ಯದಲ್ಲಿ ಆಫೀಸರ್-11 ತಂಡ ನೀಡಿದ 122 ರನ್ ಗುರಿಯನ್ನು ಹಿಂಬಾಲಿಸಿ 9.4 ಓವರ್ ಗಳಲ್ಲಿ 3 ವಿಕೆಟ್ ನಷ್ಠಕ್ಕೆ 123 ರನ್ ಬಾರಿಸುವುದರೊಂದಿಗೆ ಪತ್ರಕರ್ತರ ಬಳಗ ಗೆಲುವಿನ ನಗೆ ಬೀರಿತು.

Contact Your\'s Advertisement; 9902492681

ಟಾಸ್ ಗೆದ್ದ ಆಫೀಸರ್ ತಂಡದ ನಾಯಕ ಐ.ಎ.ಎಸ್. ಪ್ರೊಬೇಷನರ್ ಅಧಿಕಾರಿ ಗಜಾನನ್ ಬಾಳಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆಫೀಸರ್ ತಂಡ 10 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಮೀಡಿಯಾ ಎಲೆವನ್ ತಂಡವು 9.4 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಸ್ವೀಪ್ ಫ್ರೆಂಡ್ಲಿ ಪಂದ್ಯದ ಟ್ರೋಫಿ ತನ್ನಾದಾಗಿಸಿಕೊಂಡಿತ್ತು.
ಕಲಬುರಗಿ ನಗರ ಪೋಲೀಸ್ ಆಯುಕ್ತರಾದ ಚೇತನ ಆರ್. ಅವರು ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ನಂತರ ನಡೆದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ವಿಜೇತರಾದ ಪ್ರವೀಣ ರೆಡ್ಡಿ ನಾಯಕತ್ವದ ಮೀಡಿಯಾ ಏಲೆವನ್ ತಂಡಕ್ಕೆ ವಿನ್ನರ್ ಟ್ರೋಫಿ ಮತ್ತು ಪರಾಜಿತ ಆಫೀಸರ್ 11 ತಂಡದ ನಾಯಕ ಐ.ಎ.ಎಸ್. ಪ್ರೊಬೇಷನರ್ ಅಧಿಕಾರಿ ಗಜಾನನ್ ಬಾಳಿ ಅವರಿಗೆ ರನ್ನರ್ ಆಫ್ ಟ್ರೋಫಿ ವಿತರಿಸಿ ಮಾತನಾಡುತ್ತಾ, ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ವಿದ್ಯಾವಂತರು, ನೌಕರರು, ಯುವಕರು, ಸಾರ್ವಜನಿಕರು, ವಯಸ್ಕರು ತಪ್ಪದೇ ಮೇ 7 ರಂದು ಮತದಾನ ಮಾಡಬೇಕು. ಮತದಾನದ ಕುರಿತು ಜಾಗೃತಿ ಮೂಡಿಸಲೆಂದೆ ಈ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ ಎಂದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಸಂವಿಧಾನಬದ್ಧ ನೀಡಲಾದ ಮತದಾನ ಹಕ್ಕು ಎಲ್ಲರೂ ಚಲಾಯಿಸಬೇಕು. ಯಾರೂ ಮತದಾನದಿಂದ ವಂಚಿತರಾಗಬಾರದು. ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು ಎಂದರು.

ಗುಲಬರ್ಗಾ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ, ವೆಚ್ಚ ವೀಕ್ಷಕ ಸಿ.ಧರಿನಾಥ ವಿ.ಎಸ್. ಪಂದ್ಯಾವಳಿಗೆ ವೀಕ್ಷಣೆಗೆ ಕಾರಣರಾಗಿದ್ದರಲ್ಲದೆ ರಣಜಿ ತಂಡದ ಆಟಗಾರ ಮತ್ತು ಜಿಲ್ಲಾ ಸ್ವೀಪ್ ಜಾಗೃತಿಯ ಐಕಾನ್ ಶಶಿಕಾಂತ ಕಾಂಬಳೆ ಅವರಿಗೆ ಸನ್ಮಾನಿಸಿದರು.

ಮಹಾನಗರ ಪಾಲಿಕೆಯ ಉಪ ಆಯುಕ್ತ ಮಾಧವ ಗಿತ್ತೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಸೇರಿದಂತೆ ಇನ್ನಿತರ ಅಧಿಕಾರಿಗಳು ಕ್ರಿಕೆಟ್ ಆಡಿ ಸಂಭ್ರಮಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here