ಜಿಲ್ಲಾ ಕಸಾಪದಿಂದ 9 ರಂದು `ಬಸವ ಉತ್ಸವ-2024’

0
231

ವಚನ ಸಾಂಸ್ಕøತಿಕ ಸಂಭ್ರಮ: ವಿಧವಾ ತಾಯಂದಿರಿಗೆ ಉಡಿತುಂಬುವ ಕಾರ್ಯಕ್ರಮ

ಕಲಬುರಗಿ: ನುಡಿದಂತೆ ನಡೆ, ನಡೆದಂತೆ ನುಡಿ ಎಂಬ ಕಾಯಕ ತತ್ವದ ಮೂಲಕ ವಿಶ್ವದೆಲ್ಲೆಡೆ ಕ್ರಾಂತಿ ಎಬ್ಬಿಸುವ ಬಸವಾದಿ ಶರಣರ ಚಿಂತನೆಗಳನ್ನು ಇಂದಿನ ಸಮಾಜಕ್ಕೆ ತಿಳಿಸಿಕೊಡುವ ದಿಸೆಯಲ್ಲಿ ಬಸವ ಜಯಂತಿ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೇ 9 ರಂದು ಬೆಳಗ್ಗೆ 11.15 ಕ್ಕೆ ನಗರದ ಕನ್ನಡ ಭವನದ ಪ್ರಾಂಗಣದಲ್ಲಿ ವಚನ ಸಾಂಸ್ಕøತಿಕ ಸಂಭ್ರಮದ ಬಸವ ಉತ್ಸವ-2024 ನ್ನು ವಿಶಿಷ್ಟ ಮತ್ತು ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಸಮಾನತೆಯ ಬೀಜ ಬಿತ್ತಿದ, ಶೋಷಣೆ, ಮೂಢನಂಬಿಕೆಗಳ ವಿರುದ್ಧ ಹೋರಾಡಿದ ವಿಶ್ವಗುರು ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣ ನವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ನಾವೆಲ್ಲರೂ ನಡೆಯಬೇಕಾಗಿದೆ.ಬಸವಾದಿ ಶರಣರು ತಮ್ಮ ವಚನಗಳ ಮೂಲಕವೇ ಕತ್ತಲೆಯಲ್ಲಿರುವ ನಮ್ಮ ಜನರ ಮ,ನಸ್ಥಿತಿಯನ್ನು ಬೆಳಕಿನೆಡೆಗೆ ತಂದ ಮಹಾನ್ ಪುರುಷ ಸರ್ವರೂ ಸಮಾನರು ಎಂದು ತೋರಿಸಿಕೊಟ್ಟಮಹಾನ್ ಚೇತನ ವಿಶ್ವಗುರು ಬಸವಣ್ಣನವರಾಗಿದ್ದಾರೆ.

Contact Your\'s Advertisement; 9902492681

ಹೀಗಾಗಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಇಂಥ ಕಾರ್ಯಕ್ರಮದ ಮೂಲಕ ಪ್ರಚುರಪಡಿಸಲಾಗುತ್ತಿದೆ. ಶರಣರು ವಚನಗಳು ಸರಳ ಭಾಷೆಯಾದ ಕನ್ನಡದಲ್ಲಿ ರಚಿಸುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಕೀರ್ತಿಯೂ ಸಹ ಬಸವಣ್ಣನವರು ಹಾಗೂ ಅವರ ಸಮಾಕಾಲೀನ ಶರಣರಿಗೆ ಸಲ್ಲುತ್ತದೆ ಎಂದು ಅವರು ವಿವರಿಸಿದ್ದಾರೆ.

ಹಿರಿಯ ಜನಪರ ಹೋರಾಟಗಾರ ಮರಿಯಪ್ಪ ಹಳ್ಳಿ ಸಮಾರಂಭ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಶರಣ ಲೇಖಕಿ ಡಾ. ಇಂದುಮತಿ ಪಾಟೀಲ ಅವರು ವೈಚಾರಿಕ ಚಿಂತನೆ ಕುರಿತು ಮಾತನಾಡಲಿದ್ದು, ವೈದ್ಯ ಡಾ. ಎಸ್ ಎಸ್ ಕಾರಬಾರಿ, ಶರಣ ಚಿಂತಕ ಬಸವರಾಜ ಮೊರಬದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಜಿಲ್ಲೆಯ ವಿವಿಧ ಕ್ಷೇತ್ರದ ಪ್ರಮುಖರಾದ ವಿದ್ಯಾಸಾಗರ ದೇಶಮುಖ, ಡಾ. ಫಾರೂಕ್ ಮಣೂರ, ಅಣಿರುದ್ರಗೌಡ ಹೊನಗುಂಟಾ, ಮಹಾಲಿಂಗಪ್ಪಗೌಡ ಬಂಡೆಪ್ಪಗೌಡರ್, ಪ್ರಭುಲಿಂಗಯ್ಯಾ ಹಿರೇಮಠ ಕೊಂಡಗುಳಿ, ಶಂಕರ ಹಿಪ್ಪರಗಿ, ಶರಣಗೌಡ ಪಾಟೀಲ ಉದನೂರ, ಚೆನ್ನಣ್ಣ ಬಾಳಿ ರಾವೂರ, ವಿಜಯಲಕ್ಷ್ಮೀ ನೆಪೆರಿ, ನವಾಬ ಖಾನ್, ಡಾ. ನೀಲಲೋಹಿತ ಹಿರೇಮಠ ಗಂವ್ಹಾರ, ನಂದಿಕುಮಾರ ಪಾಟೀಲ ಪೋಲಕಪಳ್ಳಿ, ನಾಗಪ್ಪ ಕೋಟಗಾರ ವಾಡಿ, ಜಗನ್ನಾಥ ಸೂರ್ಯವಂಶಿ ಅವರನ್ನು ಬಸವ ಗೌರವ ಪುರಸ್ಕಾರವನ್ನು ನೀಡಲಾಗುವುದು.

ನಂತರ ನಡೆಯುವ ವಚನ ವೈಭವದಲ್ಲಿ ಕು. ದಾನೇಶ್ವರಿ ಹಿರೇಮಠ, ಕು. ಅವಂತಿಕಾ ಬಿ ಘಂಟೆ, ಬಾಬುರಾವ ಪಾಟೀಲ, ಎಂ.ಎನ್. ಸುಗಂಧಿ ಸೇರಿದಂತೆ ಅನೇಕ ಕಲಾವಿದರಿಂದ ವಚನಾಧರಿತ ವಿವಿಧ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

ಇಂದಿನ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ವಿಧವಾ ತಾಯಂದಿರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಹಮ್ಮಿಕೊಂಡಿರುವುದು ಮತ್ತಷ್ಟು ವಿಶೇಷ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here