ನೂತನ ಮೋಟಾರು ವಾಹನ ಕಾಯ್ದೆ ವಿರೋಧಿಸಿ ನ್ಯಾಯವಾದಿಗಳ ಪ್ರತಿಭಟನೆ

0
98

ಕಲಬುರಗಿ: ನೂತನ ಮೋಟಾರು ವಾಹನ ಕಾಯ್ದೆ (೨೦೧೯) ಹಿಂಪಡೆಯಬೇಕು ಎಂದು ಒತ್ತಾಯಿಸಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ವಕೀಲರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಸಂಘದ ಅಧ್ಯಕ್ಷ ಅರುಣಕುಮಾರ್ ಬಿ. ಕಿಣ್ಣಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶರಣಬಸವ ಸಿ. ಪಸ್ತಾಪೂರ್, ಜಂಟಿ ಕಾರ್ಯದರ್ಶಿ ಶಿವಾನಂದ್, ಖಜಾಂಚಿ ಸಂತೋಷ್ ಪಾಟೀಲ್, ಉಪಾಧ್ಯಕ್ಷ ರಾಜಶೇಖರ್ ಡೊಂಗರಗಾಂವ್, ನ್ಯಾಯವಾದಿಗಳಾದ ವಿನೋದಕುಮಾರ್ ಜನೇವರಿ, ಮಾಲತಿ ರೇಷ್ಮಿ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ನೂತನ ಕಾಯ್ದೆಯು ಜನಸಾಮಾನ್ಯರಿಗೆ ತೊಂದರೆ ಆಗಿದೆ. ೧೯೮೮ ಕಾಯ್ದೆ ಸೆಕ್ಷನ್ ೧೪೦ ಪ್ರಕಾರ ಅಪಘಾತದಲ್ಲಿ ಗಾಯಗೊಂಡವರಿಗೆ ೨೫೦೦೦ರೂ.ಗಳ ಪರಿಹಾರ, ಅಪಘಾತದಲ್ಲಿ ಅಸುನೀಗಿದವರಿಗೆ ೫೦,೦೦೦ರೂ.ಗಳ ಪರಿಹಾರ ನೀಡಲಾಗುತ್ತಿತ್ತು. ಆದಾಗ್ಯೂ, ಈಗಿನ ಹೊಸ ಕಾಯ್ದೆಯು ಅದೆಲ್ಲವನ್ನೂ ತೆಗೆದು ಹಾಕಿದ್ದರಿಂದ ಮೃತಪಟ್ಟವರಿಗೆ ತಕ್ಷಣ ಪರಿಹಾರ ಸಿಗುವುದಿಲ್ಲ. ವಿಮೆ ಕಾಯ್ದೆ ಸಹ ಬದಲಾಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗಲಿದೆ ಎಂದು ನ್ಯಾಯವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೆಲ ಹೊತ್ತು ನ್ಯಾಯವಾದಿಗಳು ಮಾನವ ಸರಪಳಿ ರಚಿಸಿದರು. ನಂತರ ಹೊಸ ಕಾಯ್ದೆಯನ್ನು ಹಿಂಫಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here