ಸವಿತಾ ಸಮಾಜ ಸರಕಾರಿ/ಅರೆ ಸರಕಾರಿ ನೌಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

0
87

ಕಲಬುರಗಿ: ನಗರದ ಜಿಲ್ಲಾ ಸವಿತಾ ಸಮಾಜ ಸರಕಾರಿ/ಅರೆ ಸರಕಾರಿ ನೌಕರ ಸಂಘದ ಕಚೇರಿಯಲ್ಲಿ ಸಂಘದ ಸಭೆ ನಡೆಸಿ ಈ ಸಭೆಯಲ್ಲಿ ಸವಿತಾ ಸಮಾಜ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸವಿತಾ ಸಮಾಜದ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ 2023-24 ಸಾಲಿನಲ್ಲಿ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಕಾರಣ ಸವಿತಾ ಸಮಾಜದ ವಿಧ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಯಲ್ಲಿ 70% ಪಿಯುಸಿ 70% ಹಾಗೂ 2023ರಲ್ಲಿ ಉತ್ತೀರ್ಣರಾದ ಪದವಿಯಲ್ಲಿ 70% ಮತ್ತು ಸ್ನಾತಕೋತ್ತರ 70% ಮೇಲ್ಪಟ್ಟ ಅಂಕಪಡೆದ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು, ಕ್ರೀಡೆ ಮತ್ತು ಸಮಾಜದಲ್ಲಿ ಉತ್ತಮ ಸೇವೆಸಲ್ಲಿಸಿರುವ ಸರಕಾರಿ-ಅರೆಸರಕಾರಿ ನಿವೃತಿ ನೌಕರರಿಗೆ ಸನ್ಮಾನಿಸಿಲಾಗುವುದು.

Contact Your\'s Advertisement; 9902492681

ಶೇ 70% ಮೇಲ್ಪಟು ಅಂಕಗಳನ್ನು ಪಡೆದಿರುವ ಮಕ್ಕಳು ತಮ್ಮ ಅಂಕಪಟ್ಟಿಯ ಜೆರಾಕ್ಸ ಪ್ರತಿಯನ್ನು ಮೇ 30 ರವರಿಗೆ ಶ್ರೀ ಮಹೇಶ ಉಜ್ಜೆಲೀಕರ್ 9591022261, ರಾಜೇಂದ್ರ ಅಷ್ಠಿಗೀಕರ 9945731258 ಹಾಗೂ ಅನೀಲಕುಮಾರ ಹಜ್ಜರಿಗಿ 9060011985 ಇವರಿಗೆ ಅಲ್ಲಿಸಬೇಕು ಎಂದು ಜಿಲ್ಲಾ ಸವಿತಾ ಸಮಾಜ ಸರಕಾರಿ ಅರೆಸರಕಾರಿ ನೌಕರ ಸಂಘದ ಗೌರವಧ್ಯಕ್ಷರಾದ ರಾಜೇಂದ್ರ ಅಷ್ಠಿಗೀಕರ ಅವರು ತಿಳಿಸಿದ್ದಾರೆ.

ನೂತನ ಅಧಕ್ಷರಾಗಿ ಆಯ್ಕೆಯಾದ ಮಹೇಶ ಉಜ್ಜೆಲೀಕರ್ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ವಹಿಸಿಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕರಾದ ಗಣೇಶ ಚಿನ್ನಾಕಾರ, ದತ್ತಪ್ಪ ಶಾಹಪುರ, ಬಸಪ್ಪ ಹಾಬಳಕರ, ರಾಜಶೇಖರ ಮಾನೆ, ಶ್ರೀನಿವಾಸಲು ಗಸ್ತಿ, ಗಿರಿಜಾಶಂಕರ ಗೋಗಿ, ಶ್ರೀನಾಥ ಕಾನಾಗಡ್ಡಿ, ದತ್ತಾತ್ರೇಯ ಸೂರ್ಯವಂಶಿ, ಸೀಮಾ ವಿಭೂತಿ, ಪ್ರೇಮಿಳಾಬಾಯಿ ಶಿರಿಯಾಳ, ಸರಸ್ಕøತಿ ಮಾನೆ, ನರಹರಿ ಸೂರ್ಯವಂಶಿ, ಉಮಾಕಾಂತ ಗದ್ಯಾಲ, ಶರಣಬಸಪ್ಪ ವೈದ್ಯ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಡಾ ನಾಗಪ್ಪ ಗೋಗಿರವರು ಸ್ವಾಗತಿಸಿದರು. ಶ್ರೀನಿವಾಸ ನಾಲವಾರ ರವರು ನಿರೂಪಣೆ ಮಾಡಿದರು ಹಾಗೂ ಮಲ್ಲಣ್ಣ ಆರ್ ಗೋಗಿರವರು ವಂದನೆಯನ್ನು ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here