ಸಾಮಾಜಿಕ – ಧಾರ್ಮಿಕ ಕ್ಷೇತ್ರಕ್ಕೆ ಮಾರ್ಗ ತೋರಿದ ಮಹಾನ್ ಚೇತನ ಬಸವಣ್ಣ

0
20

ಶಹಾಬಾದ: ಜಗಜ್ಯೋತಿ ಬಸವೇಶ್ವರರು ಈ ನಾಡಿನ ಸಾಂಸ್ಕøತಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಬಹು ದೊಡ್ಡ ಮಾರ್ಗವನ್ನು ತೋರಿದ ಮಹಾನ್ ಚೇತನ ವಿಶ್ವಗುರು ಬಸವಣ್ಣ ಎಂದು ಕಾಂಗ್ರೆಸ್ ಮುಖಂಡ ಭೀಮುಗೌಡ ಪಾಟೀಲ ಹೊನಗುಂಟಾ ಹೇಳಿದರು.

ಅವರು ಬಸವ ಜಯಂತಿ ಅಂಗವಾಗಿ ನಗರದ ಪ್ರಜ್ಞಾ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಕಾಯಕವನ್ನೇ ತಮ್ಮ ಜೀವನದ ವೃತ್ತಿಯನ್ನಾಗಿ ಮಾಡಿಕೊಂಡು ಈ ಕಾಯಕದ ಮುಖಾಂತರ ಸಮಾಜಕ್ಕೆ ಆದರ್ಶ ಪ್ರಾಯವಾಗಿ ನಾಡಿನ ಶೋಷಿತರನ್ನು, ಮಹಿಳೆಯರನ್ನು ದೀನ ದಲಿತರನ್ನು ಅμÉ್ಟೀ ಅಲ್ಲದೆ ಇಡೀ ಮನುಕುಲವನ್ನೇ ಸಮಾನತೆಯ ಧರ್ಮದಲ್ಲಿ ಕಂಡ ಮಹಾ ಮಾನವತಾವಾದಿ ಬಸವಣ್ಣ. ಅಂತರ್ಜಾತಿ ವಿವಾಹದ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದ ಹರಿಕಾರ ಇಂಥ ಮಾನವತಾವಾದಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗೋಣ ಎಂದರು.

ಶಾಲೆಯ ಮುಖ್ಯಸ್ಥರಾದ ಪೂಜಪ್ಪ ಮೇತ್ರೆ ಮಾತನಾಡಿ, ಬಸವಣ್ಣ ಈ ನಾಡಿನ ಕ್ರಾಂತಿ ಪುರುಷ, ಸರ್ವರಲ್ಲಿ ಸಮಾನತೆ ಸಾರಿದ ಮಹಾನ್ ಜಗಜ್ಯೋತಿ. ಆ ಜ್ಯೋತಿ ವಿಶ್ವದೆತ್ತರಕ್ಕೆ ಬೆಳೆದು ವಿಶ್ವದ ಮನುಕುಲವನ್ನು ಸಮಾನತೆಯ ದಿಕ್ಕಿನಲ್ಲಿ ಕೊಂಡೊಯ್ಯಲು ನುಡಿದಂತೆ ನಡೆದು ತೋರಿದ ತನ್ನ ಬದುಕನ್ನೇ ಸಮರ್ಪಿಸಿದ ಮಹಾ ಚೇತನ ಬಸವಣ್ಣ. ಅವರ ಬದುಕು ಇಂದಿಗೂ ಪ್ರಸ್ತುತ ಎಂದರು.

ಹೊನಗುಂಟ ಗ್ರಾಮ ಪಂಚಾಯತಿ ಅಧ್ಯಕ್ಷ ಮೈಬೂಬ್ ಪಟೇಲ್ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದರು ಹೊನಗುಂಟ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ತಿಪ್ಪಣ್ಣ ಚಡಬಾ ವೇದಿಕೆಯ ಮೇಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಮುಖ್ಯ ಗುರುಗಳಾದ ಸುರೇಖಾ ಮೇತ್ರೆ ವಹಿಸಿದ್ದರು. ಶಿಕ್ಷಕಿಯಾದ ರೋಹಿಣಿ , ಮಕ್ಕಳು ಪಾಲಕರು ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here