ಮೇ 18 ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತೋತ್ಸವ

0
12

ಕಲಬುರಗಿ: ಜೈ ಕನ್ನಡಿಗರ ರಕ್ಷಣಾ ವೇದಿಕೆ ಹಾಗೂ ಸನರೈಸ್ ಆಸ್ಪತ್ರೆ ವತಿಯಿಂದ ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತೋತ್ಸವ ಕಾರ್ಯಕ್ರಮವನ್ನು ಮೇ 18 ರಂದು ಸಾಯಂಕಾಲ 5:00 ಗಂಟೆಗೆ ನಗರದ ಕನ್ನಡ ಭವನದಲ್ಲಿ ಹಮ್ಮಿಕೋಳಲಾಗಿದೆ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಚೀನ್ ಫರಹತಾಬಾದ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಬುದ್ಧ ಬಸವ. ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಹಾಗೂ ಕರ್ನಾಟಕ ಸರಕಾರದ 5 ಗ್ಯಾರಂಟಿಗಳ ಅನುಷ್ಠಾನ ಸಮಿತಿ ಸದಸ್ಯರಿಗೆ ಗೌರವ ಸನ್ಮಾನ ಮಾಡಲಾಗುವುದು, ಪೂಜ್ಯ ಶ್ರೀ ಷ.ಪೂ. ಗುರುರಾಜೇಂದ್ರ ಶಿವಯೋಗಿಗಳು ಮಹಾಲಕ್ಷ್ಮೀ ಶಕ್ತಿಪೀಠ ನದಿಸಿನೂರ, ಶಾಸಕ ಅಲ್ಲಮಪ್ರಭು ಪಾಟೀಲ ಇವರು ಉದ್ಘಾಟಿಸುವರು.

Contact Your\'s Advertisement; 9902492681

ಸನರೈಸ್ ಆಸ್ಪತ್ರೆ ಮುಖ್ಯಸ್ಥ ಡಾ. ಸಲ್ಮಾನ್ ಪಟೇಲ್ ಅಧ್ಯಕ್ಷತೆ ವಹಿಸುವರು, ಅಧೀಕ್ಷಕ ಅಭಿಯಂತರರು, ಲೋಕೋಪಯೋಗಿ ಇಲಾಖೆಯ ಡಾ. ಸುರೇಶ.ಎಲ್.ಶರ್ಮಾ ಅವರು ಮಹಾಪುರಷರ ಭಾವಚಿತ್ರ ಪೂಜೆ ಸಲಿಸುವರು, ಎಂಎಲ್‍ಸಿ ತಿಪ್ಪಣ್ಣಪ್ಪ ಕಮಕನೂರ ಹಾಗೂ ಕೆ.ಪಿ.ಸಿ.ಸಿ. ಸದಸ್ಯ ನೀಲಕಂಠರಾವ ಮೂಲಗೆ ಇವರು ರತ್ನ ಪ್ರಶಸ್ತಿ ಪ್ರಧಾನ ಮಾಡುವರು.

ಕನ್ನಡ ಅಭಿವೃದ್ಧಿ ಪ್ರಧಿಕಾರ ಮಾಜಿ ಸದಸ್ಯ ಸುರೇಸ ಬಡಿಗೇರ ಅವರು ವಿಶೇಷ ಭಾಷಣ ಮಾಡುವರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಲೋಕೋಪಯೋಗಿ ಇಲಾಖೆ ಅಭಿಯಂತರಾದ ಸುಭಾಷ ಶಿಕ್ಷಣಕರ್, ಕಾಂಗ್ರೇಸ್ ಮುಖಂಡ ಶಾಮ ನಾಟೀಕರ್, ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ ದೇಗ್ಗಾವಿ, ನಾಗರಾಜ ಗುಂಡಗುರ್ತಿ ಕಾಂಗ್ರೇಸ್ ಯುವ ಮುಖಂಡರು, ಎಮ್.ಡಿ. ಸಿದ್ದಿಕಿ, ಮುಖ್ಯಸ್ಥರು ಸಹರಾ ಐಟಿಐ ಕಾಲೇಜು ಕಲಬುರಗಿ, ಮಹಾಂತಪ್ಪ ಸಂಗಾವಿ ಅಧ್ಯಕ್ಷರು ಎಸ್.ಸಿ. ವಿಭಾಗೀಯ ಕಾಂಗ್ರೇಸ್ ಪಕ್ಷ, ಮಂಜುನಾಥ ನಾಲವಾರಕರ್ ಇವರು ಮುಖ್ಯ ಅಥಿತಿಗಳಾಗಿ ಆಗಮಿಸುವರು.

ಬುದ್ಧ, ಬಸವ, ಅಂಬೇಡ್ಕರ್ ರತ್ನ ಪ್ರಶಸ್ತಿಗೆ ಆಯ್ಕೆಯಾದ ಪುರಸ್ಕøತರರು ಶಿವರಂಜನ್ ಸತ್ಯಂಪೇಟ್ ಮಾಧ್ಯಮ ಕ್ಷೇತ್ರ, ಡಾ. ಪುಟ್ಟಮಣಿ ದೇವಿದಾಸ ಶಿಕ್ಷಣ ಕ್ಷೇತ್ರ, ಡಾ. ಅನೀಲ ಟೆಂಗಳಿ ಉನ್ನತ ಶಿಕ್ಷಣ ಕ್ಷೇತ್ರ, ಸಂತೋಷ ಭೀಮರಾವ್ ತೇಗಲತಿಪ್ಪಿ ಆರೋಗ್ಯ ಕ್ಷೇತ್ರ, ಸಿದ್ಧಾರ್ಥ ಚಿಮ್ಮಇದಲಾಯಿ ಸಂಗೀತ ಕ್ಷೇತ್ರ, ತಿಪ್ಪಮ್ಮ ಮಾನಕರ್ ಆರೋಗ್ಯ ಕ್ಷೇತ್ರ, ಗೌರವ ಸನ್ಮಾನ ಕರ್ನಾಟಕ ಸರಕಾರದ 5 ಗ್ಯಾರಂಟಿಗಳ ಅನುಷ್ಠಾನ ಸಮಿತಿ ಸದಸ್ಯರಿಗೆ ರಾಜಗೋಪಾಲ ರೆಡ್ಡಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಶ್ರೀಮತಿ ಚಂದ್ರಿಕಾ ಪರಮೇಶ್ವರ 5 ಗ್ಯಾರಂಟಿಗಳ ಅಧ್ಯಕ್ಷರು, ಧೂಳಪ್ಪ ಕಟ್ಟಿಮನಿ ಉಪಾಧ್ಯಕ್ಷರು, ವಿಜಯಕುಮಾರ ಕಟ್ಟಿಮನಿ ಸದಸ್ಯರು, ರಾಜತಿಲಕ ಉಪಾಧ್ಯಾಯ ಸದಸ್ಯರು, ಕಲ್ಯಾಣರಾವ ತೋನಸಳ್ಳಿ, ಕರ್ನಾಟಕ ಪ್ರದೇಶ ಕಾಂಗ್ರೇಶ್ ಸಮಿತಿ ಪರಿಶಿಷ್ಠ ಜಾತಿ ವಿಭಾಗದ ರಾಜ್ಯ ಸಂಚಾಲಕರು,ಮತ್ತು ಈ ಕಾರ್ಯಕ್ರಮಕ್ಕೆ  ನಗರ ಸಾರ್ವಜನಿಕರು, ಕನ್ನಡ ಅಭಿಯಾನಿಗಳು, ಸಂಘಟನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪರಹತಾಬಾದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here