ಚಿತ್ತಾಪುರ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಸಮಗ್ರ ಶಿಶು ಅಭಿವೃದ್ದಿ ಯೋಜನೆ ಅಡಿಯಲ್ಲಿ ಮಾತೃ ವಂದನಾ ಹಾಗು ಮಾತೋಶ್ರಿ ಅಭಿಯಾನ ಕಾರ್ಯಕ್ರಮ ಜರುಗಿತು.
ಚಿತ್ತಾಪುರ ತಾಲೂಕಿನ ಭಾಗೋಡಿ ಗ್ರಾಮದ ಅಂಗನವಾಡಿ ಕೇಂದ್ರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೇಲ್ವಿಚಾರು ಮಾತನಾಡಿ. ಭಾಗೋಡಿ ಗ್ರಾಮದಲ್ಲಿ ನಾವು ಪೋಷನ ಮಾಶ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದು, ಗಂಭೀಣಿ ಮಾಹಿಳೆಯರಿಗೆ ಮತ್ತು ಮಕ್ಕಳಿಗೆ ಆರೋಗ್ಯ ಭರಿತ ಆಹಾರ ಸೇವೆನೆ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಬಡ ಗಂಭೀಣಿ ಮಹಿಳೆಯರಿಗೆ ಒಳ್ಳೆಯ ಆರೋಗ್ಯದ ಹಿತದೃಷ್ಠಿಯಿಂದ ನಾವು ಶ್ರೀಮಂತ ಕಾರ್ಯಕ್ರಮವನ್ನು ತಾಲೂಕಿನ ಭಾಗೋಡಿ ಗ್ರಾಮದಲ್ಲಿ ಮಾತೃ ವಂದನಾ ಅಭಿಯಾನ ಕಾರ್ಯಕ್ರಮನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಆರೋಗ್ಯ ಅಧಿಕಾರಿ ಸುನಾಂದ ಅವರು ಮಾತನಾಡಿ.
ಜನರ ಆರೋಗ್ಯ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಸಾರ್ವಜನಿಕರು ಸರ್ಕಾರದ ಸೌಲಭ್ಯದ ಸದ್ದುಪಯೋಗ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಮಂಜುನಾಥ ಪೂಜಾರಿ, ಶಿವಕುಮಾರ ಕಲಬುರಗಿ, ಜಗದೇವಿ,ಶಾಂತಬಾಯಿ, ಸುಧಾರಾಣಿ, ಸಾವಿತ್ರಿ, ಗುಂಡಮ್ಮ, ಮಹಿಬೂಬಿ, ದೇವೆಂದ್ರಮ್ಮ,. ಆನಂತನಾಗ್, ದೇವೆಂದ್ರ ಕುದರಿ, ಮಲ್ಲಿಕಾರ್ಜುನ ಕುದರಿ ಸೇರಿದಂತೆ ಇತರರು ಇದ್ದರು.