ಕಲಬುರಗಿ: ಸೆ.16ರಂದು ಕಲಬುರಗಿ ವಿವಿಯ ಅರ್ಥಶಾಸ್ತ್ರ ವಿಭಾಗದ ಕೊಠಡಿ ಸಂಖ್ಯೆ 79,80 ರಲ್ಲಿ ಪತ್ರಿಕೋದ್ಯಮ ಹಾಗೂ ರಸಾಯನಶಾಸ್ತ್ರ ವಿಷಯಗಳ ಪಿಎಚ್. ಡಿ ಪ್ರವೇಶ ಪರೀಕ್ಷೆ ವೇಳೆ ಸಾಮೂಹಿಕ ನಕಲು ಮಾಡಲು ಅವಕಾಶ ನೀಡಲಾಗಿತ್ತು.
ಅಲ್ಲದೇ ಮೊಬೈಲ್ ಫೋನ್ ನಿಷೇಧವಿದ್ದರೂ ಕೆಲವರಿಗೆ ಮೊಬೈಲ್ ಫೋನ್ ಇಟ್ಟುಕೊಳ್ಳಲು ಅವಕಾಶ ನೀಡಲಾಗಿತ್ತು. ನಕಲು ಮಾಡುತ್ತಿರುವುದನ್ನು ಕೊಠಡಿ ಮೇಲ್ವಿಚಾರಕರ ಗಮನಕ್ಕೂ ತರಲಾಯಿತು. ಆದರೂ ನಕಲು ಮಾಡುತ್ತಿದ್ದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದರು.
ಇದರಿಂದ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹಾಗಾಗಿ ಮತ್ತೊಮ್ಮೆ ಮರು ಪರೀಕ್ಷೆಯನ್ನು ನಡೆಸಬೇಕು ಎಂದು ನೊಂದು ವಿದ್ಯಾರ್ಥಿಗಳು ಪ್ರಭಾರಿ ವಿಸಿ ಪ್ರೊ.ಪರಿಮಳಾ ಅಂಬೇಕರ್ ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಎಚ್.ಡಿ ಪ್ರವೇಶ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿರುವ ಬಗ್ಗೆ ಪ್ರಮುಖ ದಿನಪತ್ರಿಕೆಗಳಲ್ಲಿ ವರದಿಯಾಗಿದೆ. ಆದ್ದರಿಂದ ಪರೀಕ್ಷೆ ಕೊಠಡಿಗೆ ಸಿಸಿಟಿವಿ ಅಳವಡಿಸಿ ಮತ್ತೊಮ್ಮೆ ಪತ್ರಿಕೋದ್ಯಮ ವಿಷಯದ ಪ್ರವೇಶ ಪರೀಕ್ಷೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.