ಜಗತ್ತಿಗೆ ಮಾನವತೆಯನ್ನು ತೋರಿಸಿಕೊಟ್ಟಿದ್ದೇ ಬೌದ್ಧ ಧರ್ಮ

0
17

ಶಹಾಬಾದ: ಜಗತ್ತಿಗೆ ಅಂತಃಕರಣ, ಪ್ರೀತಿ, ಮಾನವತೆಯನ್ನು ತೋರಿಸಿಕೊಟ್ಟಿದ್ದೇ ಬೌದ್ಧ ಧರ್ಮ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ಅವರು ಗುರುವಾರ ಗೋಳಾ(ಕೆ) ಗ್ರಾಮದ ಬುದ್ಧ ನಗರದ ಬೋಧಿಜ್ಞಾನ ಬುದ್ಧ ವಿಹಾರ ಧಾಮದಲ್ಲಿ ಬುದ್ಧ ಪೂರ್ಣಿಮೆ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ, ಜೀವಂತವಾಗಿರುವಾಗಲೇ ಜಯಿಸುವಂತೆ ಮಾಡುವ, ಕಲುಷಿತವಾದ ಮನಸ್ಸುಗಳನ್ನು ಪವಿತ್ರವಾಗುವಂತೆ ಮಾಡುವ ಧರ್ಮ. ಈ ಧರ್ಮದ ತತ್ವಗಳು ಅತ್ಯಂತ ಪ್ರಾಯೋಗಿಕವಾಗಿವೆ. ಪರಿಶೀಲಿಸಿ, ಪರೀಕ್ಷಿಸಿ, ವಿವೇಚಿಸಿ ಮನಃ ಪರಿವರ್ತನೆ ಮಾಡುವ ಸಾಮಥ್ರ್ಯ ಹೊಂದಿದೆ. ಬುದ್ಧ ಜಗತ್ತಿಗೆ ಬೆಳಕು ನೀಡಿದ್ದಾರೆ.

Contact Your\'s Advertisement; 9902492681

ಕರ್ನಾಟಕದ ಸಾಕಷ್ಟು ಪ್ರದೇಶಗಳಲ್ಲಿ ಹಾಗೂ ಪ್ರಪಂಚದ ನಾನಾ ದೇಶಗಳಲ್ಲಿ ಬೌದ್ಧ ಧರ್ಮ ಪ್ರಚಲಿತದಲ್ಲಿದೆ. ಬುದ್ಧನು ಬೋಧಿಸಿದ ಪಂಚಶೀಲ ತತ್ವಗಳು ಮತ್ತು ಅμÁ್ಟಂಗ ಮಾರ್ಗಗಳು ವೈಜ್ಞಾನಿಕ ತಳಹದಿಯನ್ನು ಹೊಂದಿದ್ದು, ಅಳವಡಿಸಿಕೊಳ್ಳಲು ಅತ್ಯಂತ ಸೂಕ್ತವಾಗಿವೆ.ಆದ್ದರಿಂದ ಬುದ್ಧನ ತತ್ವಾದರ್ಶಗಳು ಜಗತ್ತನ್ನೇ ಸೆಳೆದಿವೆ. ಬುದ್ಧ ಹೇಳಿಕೊಟ್ಟ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.

ಮುಖಂಡರಾದ ಮಲ್ಕಪ್ಪ ಮುದ್ದಾ,ಮಲ್ಲಿಕಾರ್ಜುನ ಪೊಲೀಸ್ ಪಾಟೀಲ,ಹರಿಶ್ಚಂದ್ರ ಕೋಬಾಳಕರ್,ಶರಣಪ್ಪ ಕಣಮೇಶ್ವರ,ಮಲ್ಲಿಕಾರ್ಜುನ ಕಟ್ಟಿ ವೇದಿಕೆಯ ಮೇಲಿದ್ದರು.
ಬಸವರಾಜ ಮಯೂರ, ಪಿ.ಎಸ್.ಮೇತ್ರೆ, ಶಿವಶಾಲಕುಮಾರ ಪಟ್ಟಣಕರ್,ಅಲ್ಲಂಪ್ರಭು ಮಸ್ಕಿ, ಮಲ್ಲಿಕಾರ್ಜುನ ಹಳ್ಳಿ,ನರಸಿಂಹಲೂ ರಾಯಚೂರಕರ್, ಮಲ್ಲಣ್ಣ ಹೊನಗುಂಟಾ, ಹಣಮಂತ ತರನಳ್ಳಿ, ಪ್ರದೀಪ ಕೋಬಾಳಕರ್, ಗುರುಕಿರಣ ಗುಜ್ಜನ್,ಮಲ್ಲಿಕಾರ್ಜುನ ತರನಳ್ಳಿ,ಭೀಮರಾಯ ನೆಲೋಗಿ,ಸುನೀಳ ಹಿರೇನೂರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here