ಬುದ್ಧನ ಸಂದೇಶಗಳು ವಿಶ್ವದಲ್ಲಿಯೇ ಸಾರ್ವಕಾಲಿಕ ಸತ್ಯ

0
17

ಶಹಾಬಾದ: ಬುದ್ಧನ ಸಂದೇಶಗಳು ವಿಶ್ವದಲ್ಲಿಯೇ ಸಾರ್ವಕಾಲಿಕ ಸತ್ಯ ಮತ್ತು ಪ್ರಸ್ತುತ ಅಗತ್ಯವಿದೆ ಎಂದು ಕುರುಬ ಸಮಾಜದ ಮಾಜಿ ಅಧ್ಯಕ್ಷ ಮಲ್ಕಣ್ಣ ಮುದ್ದಾ ಹೇಳಿದರು.

ಅವರು ಗುರುವಾರ ನಗರದ ಪ್ರಜ್ಞಾ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಜಗತ್ತಿನ ಶ್ರೇಷ್ಠರಲ್ಲಿ ಗೌತಮ ಬುದ್ಧ ಕೂಡ ಒಬ್ಬ. ಬದುಕಿನಲ್ಲಿದ್ದ ಎಲ್ಲವನ್ನೂ ಬಿಟ್ಟು ವೈರಾಗಿಯಾದವನು ಮಹಾನ್ ಬುದ್ಧ. ಜ್ಞಾನೋದಯ ಗಳಿಸಿದ ನಂತರ, ಹಲವರು ಇವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ಅಲ್ಲದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಆ ಕಾಲದಲ್ಲಿ, ಈಗಿನ ನೇಪಾಳದಲ್ಲಿರುವ ಲುಂಬಿನಿಯಲ್ಲಿ ಬುದ್ಧನ ಧರ್ಮೋಪದೇಶಗಳನ್ನು ಕೇಳಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಗೌತಮ ಬುದ್ಧ ಜೀವನ, ವೃತ್ತಿ, ವೈವಾಹಿಕ ಜೀವನ, ಪ್ರಯಾಣ, ಜನನ, ಸಾವು, ಸ್ವರ್ಗ ಮತ್ತು ನರಕದ ಬಗ್ಗೆ ಜನರಿಗೆ ತಿಳಿಸಿ ಪ್ರೇರೇಪಿಸುತ್ತಿದ್ದರು. ಇದು ಜನರಿಗೆ ಹೊಸ ಮಾಹಿತಿಯ ಜೊತೆಗೆ ಜ್ಞಾನವನ್ನು ಗಳಿಸಲು ಅವಕಾಶ ಮಾಡಿಕೊಟ್ಟಿತ್ತು ಎಂದು ಹೇಳಿದರು.

ಮುಖಂಡ ಬಸವರಾಜ ಮಯೂರ ಮಾತನಾಡಿ, ಬುದ್ಧ ವಿಶ್ವಕ್ಕೆ ಶಾಂತಿಯ ಮಂತ್ರ ಹೇಳಿದ ಮಹಾನ್ ಆದರ್ಶ ಪುರುಷ. ಯಾರಿಗೂ ಆಸೆಯ ಮಂತ್ರ, ಇಷ್ಟಾರ್ಥಗಳನ್ನು ನೀಡುವ ಮಂತ್ರಗಳನ್ನು ಹೇಳಲಿಲ್ಲ.ಜನರಿಗೆ ಮೂಢಾಚಾರದ ತಂತ್ರವನ್ನು ಬಳಸಲಿಲ್ಲ.ಬದುಕಿನಲ್ಲಿ ನೆಮ್ಮದಿಯ ಜೀವನ ನಡೆಸಬೇಕಾದರೆ ಅನುಸರಿಸುವ ಮಾರ್ಗವನ್ನು ಹೇಳಿಕೊಟ್ಟರು.ಅದರಲ್ಲಿ ಶಾಂತಿಯ ಮಂತ್ರ ಒಂದಾಗಿದೆ ಎಂದು ಹೇಳಿದರು.

ಮುಖಂಡ ಮಲ್ಲಿಕಾರ್ಜುನ ಕಟ್ಟಿ ಮಾತನಾಡಿ, ಬದುಕಿನಲ್ಲಿ ಏನೋ ಘಟನೆಗಳು ಗೊತ್ತಿಲ್ಲದೇ ನಡೆಯುತ್ತವೆ.ಅದರ ಅರಿವು ಆದ ಮೇಲೆ ನಿಜವಾದ ಜೀವನ ಮಾರ್ಗವನ್ನು ನಾವು ಬುದ್ಧನ ತತ್ವಗಳಲ್ಲಿ ಕಾಣುತ್ತೆವೆ.ಅವರ ತತ್ವಗಳನ್ನು ಅಳವಡಿಕೊಂಡಿದ್ದೆ ಆದರೆ ಜೀವನ ಶ್ರೇಷ್ಠತೆಯಿಂದ ಕೂಡಿರುತ್ತದೆ ಎಂದರು.

ಉಪನ್ಯಾಸಕ ಪಿ.ಎಸ್.ಮೇತ್ರೆ ಮಾತನಾಡಿ,ಬದುಕಿನಲ್ಲಿ ಸಲಹೆ ನೀಡಬೇಕಾದರೆ ಮೊದಲು ಜ್ಞಾನವನ್ನು ಪಡೆಯುವುದು ಅವಶ್ಯಕ.ಅದು ಸಮಾಜದ ಉತ್ತಮ ಬೆಳವಣಿಗೆಗೆ ಸ್ಪೂರ್ತಿದಾಯಕದಿಂದ ಕೂಡಿರಬೇಕು. ಒಬ್ಬ ವ್ಯಕ್ತಿಯನ್ನು ಅಹಂಕಾರಿಯನ್ನಾಗಿಸುವ ಮತ್ತು ತನ್ನ ಸ್ವಾರ್ಥಿಯನ್ನಾಗಿಸುವ ಜ್ಞಾನದಿಂದ ಯಾವುದೇ ಪ್ರಯೋಜನವಿಲ್ಲ. ಅಂತಹವರ ಎದುರು ಜ್ಞಾನವಿಲ್ಲದೇ ಇರುವ ವ್ಯಕ್ತಿಗಳೇ ಉತ್ತಮರು ಎನ್ನಿಸಿಕೊಳ್ಳುತ್ತಾರೆ.

ಆ ಕಾರಣದಿಂದಲೇ ಬುದ್ಧ ಜನರಿಗೆ ಪ್ರಯೋಜನವನ್ನು ನೀಡಬೇಕಾದರೆ ಜ್ಞಾನವನ್ನು ಪಡೆಯುವುದು ಬಹಳ ಅವಶ್ಯಕ ಎಂದು ಹೇಳುತ್ತಿದ್ದರು ಎಂದು ಹೇಳಿದರು.

ಶಾಲೆಯ ಮುಖ್ಯ ಗುರುಗಳಾದ ಸುರೇಖಾ.ಪಿ. ಮೇತ್ರಿ, ಶಾಲೆಯ ಶಿಕ್ಷಕಿ ಪ್ರೀತಾ. ವಿ .ಎಮ್. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here