ಚಿತ್ತಾಪುರ ಲಾಡ್ಜೀಂಗ್ ಕ್ರಾಸ್’ನಲ್ಲಿ ನಾಲ್ಕು ಅಂಗಡಿಗಳ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

0
201
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ; ಪಟ್ಟಣದ ಲಾಡ್ಜೀಂಗ್ ಕ್ರಾಸ್’ನಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ನಾಲ್ಕು ಅಂಗಡಿಗಳು ಕಳ್ಳತನವಾಗಿರುವ ಘಟನೆ ಜರುಗಿದ್ದು, ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಲಾಡ್ಜೀಂಗ್ ಹತ್ತಿರದ ಆನಂದ ವೈನ್ಸ್, ನ್ಯೂ ಸ್ಟ್ಯಾಂಡರ್ಡ್ ಹಾರ್ಡ್’ವೆರ್, ಲಕ್ಷ್ಮೀ ಹಾರ್ಡ್’ವೇರ್ ಶಾಪ್ ಹಾಗೂ ಭಾಗ್ಯ ಎಂಟರ್’ಪ್ರೇಸ್ ಮತ್ತು ಹಾರ್ಡ್’ವೇರ್ ಶಾಪ್ ಕಳ್ಳತನವಾಗಿವೆ.

Contact Your\'s Advertisement; 9902492681

ಮೂವರು ಕಳ್ಳರು ಅಂಗಡಿಯ ಶೇಟರ್ ಮುರಿದು ಒಳಗಡೆ ಹೋಗುವ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿತ್ತಾಪುರ ಪೊಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರೀಶಿಲನೆ ನಡೆಸಿದರು. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here