ಕಾರಾಗೃಹದ ಬಂದಿಗಳಿಗೆ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ

0
18

ಕಲಬುರಗಿ; ಕೇಂದ್ರ ಕಾರಾಗೃಹದಲ್ಲಿರುವ ಬಂದಿಗಳಿಗೆ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಜಿಮ್ಸ್ ಆಸ್ಪತ್ರೆ, ಕೇಂದ್ರ ಕಾರಾಗೃಹ ಮತ್ತು ಸುಧಾರಣೆ ಸೇವೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಲ್ಲರಿಗೂ ಮಾನಸಿಕ ಆರೋಗ್ಯ ಎಲ್ಲಡೆಯೂ ಮಾನಸಿಕ ಆರೋಗ್ಯ ಅಡಿಯಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಗೌ||  ಶ್ರೀನಿವಾಸ ನವಲೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿರವರು ನಮ್ಮೆಲ್ಲರ ಉಸಿರಾದ ಸಸಿಗೆ ನೀರು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಸ್ಕಿಜೋಫ್ರೀನಿಯಾ ಕಾಯಿಲೆ ಬಗ್ಗೆ ತಜ್ಞ ವೈದ್ಯರೆ ಸೂಕ್ತ ಮಾಹಿತಿ ಮತ್ತು ಚಿಕಿತ್ಸೆಯನ್ನು ನೀಡವರು, ಕಾನೂನಿನ ಅಡಿಯಲ್ಲಿ ಸ್ವಸ್ತ ಮತ್ತು ಅಸ್ವಸ್ತ ವ್ಯಕ್ತಿಯ ಬಗ್ಗೆ ವಿಭೀನ್ನ ನಿಲುವನ್ನು ನೀಡಲಾಗುತ್ತಿದೆ.

Contact Your\'s Advertisement; 9902492681

(ಉದಾ:- ಮನೆ ಖರೀದಿ ಮಾಡುವಾಗ ಅಥವಾ ಮಾರಾಟ ಮಾಡುವಾಗ ಅಸ್ವಸ್ತ ವ್ಯಕ್ತಿಗೆ ಅವಕಾಶ ಇರುವುದಿಲ್ಲ. ಏಕೆಂದರೆ ಆತನಿಗೆ ಅದರ ಸಂಪೂರ್ಣ ಅರಿವು ಇರುವುದಿಲ್ಲ. ಆದರೆ ಸ್ವಸ್ತ ವ್ಯಕ್ತಿಗೆ ಸದರಿ ವ್ಯವಹಾರ ಬಗ್ಗೆ ಸಂಪೂರ್ಣ ಅರಿವು ಇರುವುದರಿಂದ ವ್ಯವಹಾರವನ್ನು ಮಾಡಬಹುದು ಅಲ್ಲದೇ ಅಸ್ವಸ್ತ ವ್ಯಕ್ತಿಗೆ ಮದುವೆ ಮಾಡಿಕೊಳ್ಳಲು ಕಾನೂನಿನ ಅಡಿಯಲ್ಲಿ ಮಾನ್ಯತೆ ಇಲ್ಲ. 2017 ರಲ್ಲಿ ಮಾನಸಿಕ ಹೆಲ್ತ್ ಕೇರ್ ಜಾರಿಗೆ ತರಲಾಗಿದ್ದು, ಅದರ ಅಡಿಯಲ್ಲಿ ಮಾನಸಿಕ ಅಸ್ವಾಸ್ತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವುದು. ಅವರಿಗೆ ಹೊಡೆಯುವುದು ಬಡೆಯುವುದು, ಕಬ್ಬಿಣ ಸಲಾಕೆಯಿಂದ ಬಂದಿಸುವುದು ಇವು ಎಲ್ಲಾವು ಅವಕಾಶ ಇರುವುದಿಲ್ಲ ಎಂದು ಹೇಳಿದರು.3

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ರಾಜಕುಮಾರ್ ಎ. ಕುಲಕರ್ಣಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ಕಲಬುರಗಿರವರು ಪ್ರಸ್ತಾವಿಕವಾಗಿ ಮಾತನಾಡುತ್ತಾ, ಸ್ಕಿಜೋಫ್ರೀನಿಯಾ ಕಾಯಿಲೆಯು ಸಾಮನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಒಳಗಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಬಗ್ಗೆ ಅರಿವು ಮತ್ತು ಚಿಕಿತ್ಸೆಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇನ್ರ್ನೋವ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕರು, ಡಾ|| ಪ್ರಭುಕಿರಣ್ ವಿ. ಗೋಗಿ ಮನೋವೈದ್ಯರು ಹಾಗೂ ಮುಖ್ಯಸ್ಥರು ಮನೋವೈದ್ಯಕೀಯ ವಿಭಾಗ ಜಿಮ್ಸ್ ಆಸ್ಪತ್ರೆ ಕಲಬುರಗಿರವರು ಮಾತನಾಡುತ್ತಾ, ಸ್ಕಿಜೋಫ್ರೀನಿಯಾ ಕಾಯಿಲೆ ಲಕ್ಷಣಗಳೆಂದರೆ ವಿಚಾರದಲ್ಲಿ ಬದಲಾವಣೆ, ಯಾರೋ ಮಾತನಾಡುವಂತೆ ದ್ವನಿ ಕೇಳಿಸುವುದು, ತಾನಾಗಿ ತಾನು ಮಾತನಾಡುವುದು, ನಗುವುದು, ಅನುಮಾನ, ಕೋಪ ಮಾಡಿಕೊಳ್ಳುವುದು, ಆಸಕ್ತಿ ರಹಿತರಾಗುವುದು ತನಗೆ ಕಾಯಿಲೆ ಇಲ್ಲ ಅನ್ನೀಸೊವುದು. ಈ ಕಾಯಿಲೆ ಸದ್ಯ ಚಿಕಿತ್ಸೆ ಅಂದರೆ ಮಾತ್ರೆ, ಸೂಜಿ ಮದ್ದಿನ ರೂಪದಲ್ಲಿ ನೀಡುವುದು, ಮನೆಯವರಿಂದ ಉತ್ತಮ ಸಹಕಾರ ನೀಡುವುದು. ರೋಗಿಯ ಸಮರ್ಥಕ್ಕೆ ಅನುಗುಣವಾಗಿ ಅತನಲ್ಲಿ ಆತ್ಮ ವಿಶ್ವಾಸ ಸ್ವಾವಲಂಬನೆ ಪ್ರೋತ್ಸಾಹಿಸುವುದು. ಮಧ್ಯ ಮಾದಕ ವಸ್ತುಗಳಿಂದ ದೂರು ಇಡುವುದು. ಸರಿಯಾದ ಸಮಯಕ್ಕೆ ಊಟ ನಿದ್ರೆ ಮಾಡುವಂತಹ ವಾತಾವರಣವನ್ನು ಕಲ್ಪಿಸುವುದು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ|| ಪಿ.ರಂಗನಾಥ್‍ರವರು ಮಾತನಾಡುತ್ತಾ, ಸಾಮನ್ಯವಾಗಿ ಎಲ್ಲರಲ್ಲೂ ಮಾನಸಿಕ ಲಕ್ಷಣಗಳು ಇರುತ್ತವೆ ಇವುಗಳ ಪ್ರಮಾಣ ಹೆಚ್ಚು ಮತ್ತು ಕಡಿಮೆ ಇರುತ್ತವೆ. ಯಾರು ಹೆಚ್ಚಾಗಿ ಒತ್ತಡಕ್ಕೆ ಒಳಗಾಗಿ ಈ ಕಾಯಿಲೆ ತುತ್ತಾಗುತ್ತಾರೆ. ಹಾಗಾಗಿ ಪ್ರತಿಯೊಬ್ಬರು ಮಾನಸಿಕ ಒತ್ತಡಕ್ಕೆ ಒಳಗಾಗದೇ ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ವ್ಯಾಕ್ತಪಡಿಸಿ ಪ್ರೀತಿ, ಕರುಣೆ, ಸಹಾನುಭೂತಿಯನ್ನು ನೀಡುವುದು ಉತ್ತಮ ಆರೋಗ್ಯಕ್ಕೆ ಓದು ಬರಹ ಒಳ್ಳೆಯ ಸ್ನೇಹಿತ ನಮ್ಮ ಸುತ್ತ-ಮುತ್ತ ಪರಿಸರವನ್ನು ಹಚ್ಚ ಹಸಿರಿನಿಂದ ಕಂಗೊಳ್ಳಿಸಿದ್ದೇ ಆದಲ್ಲಿ ಯಾವುದೇ ಮಾನಸಿಕ ಕಾಯಿಲೆಯು ನಮ್ಮ ಹತ್ತಿರ ಸುಳಿಯುವುದಿಲ್ಲ. ಅಲ್ಲದೇ ಈ ಕಾಯಿಲೆಯ ಘೋಷಣೆಯಾದ ಸಮಾಜದ ದಯಾಳು ತನದ ಶಕ್ತಿ ಆಚರಣೆಯನ್ನು ಎಲ್ಲಾರು ಪಾಲಿಸುವುದು ಸೂಕ್ತವೆಂದು ಹೇಳಿದರು.

ಅಧೀಕ್ಷಕರಾದ ಬಿ.ಎಂ. ಕೊಟ್ರೇಶ್, ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳಾದ ಡಾ|| ಶ್ರೀಮತಿ ಅರ್ಚನಾ, ಡಾ|| ಆನಂದ ಅಡಗಿ, ಸಹಾಯಕ ಅಧೀಕ್ಷಕರಾದ ಹುಸೇನಿ ಪೀರ್ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಕಾರಾಗೃಹ ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗದವರು ಭಾಗವಹಿಸಿದರು.

ಈ ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ, ನೆರವೇರಿಸಿಕೊಟ್ಟರು. ಪುಸ್ತಕ ನೀಡುವುದರ ಮೂಲಕ ಸ್ವಾಗತ ಕಾರ್ಯಕ್ರಮವನ್ನು ನಾಗರಾಜ ಬಿರಾದಾರ ಆರೋಗ್ಯ ಇಲಾಖೆ ಕಲಬುರಗಿರವರು ನಡೆಸಿಕೊಟ್ಟರು. ಸಂಸ್ಥೆಯ ಶಿಕ್ಷಾ ಬಂದಿಯಾದ ರಾಮಣ್ಣ ತಂದೆ ನರಸಪ್ಪ ಇವರಿಂದ ಪ್ರಾರ್ಥನಾ ಗೀತೆಗಳನ್ನು ಹಾಡಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here