ಮುಂಗಾರು ಪೂರ್ವ ಮಳೆಗೆ ವಿವಿಧ ಕಡೆಗಳಲ್ಲಿ ಅಪಾರ ನಷ್ಟ;ಮುಖಂಡರ ಭೆಟಿ

0
44

ಸುರಪುರ: ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಬಿರುಗಾಳಿ ಸಹಿತ ಮುಂಗಾರು ಪೂರ್ವ ಮಳೆಗೆ ವಿವಿಧ ಗ್ರಾಮಗಳಲ್ಲಿ ದೊಡ್ಡ ಮಟ್ಟದಲ್ಲಿ ಹಾನಿಯುಂಟಾಗಿ ಜನರು ಹೈರಾಣಾಗಿದ್ದಾರೆ.

ತಾಲೂಕಿನ ದೇವಾಪುರ ಗ್ರಾಮದಲ್ಲಿ ಬುಧವಾರ ಸಂಜೆ ನೋಡ ನೋಡುತ್ತಿದ್ದಂತೆ ಬಿರುಗಾಳಿ ಮಳೆ ಆರಂಭವಾಗಿದ್ದು,ಗ್ರಾಮದಲ್ಲಿನ ಅನೇಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ಅಲ್ಲದೆ ಗ್ರಾಮದಲ್ಲಿ ಅನೇಕ ಮರಗಳು ಮುರಿದು ಬಿದ್ದು ದೊಡ್ಡ ಆವಾಂತರ ಸೃಷ್ಟಿಸಿದೆ.ಅಲ್ಲದೆ ಗ್ರಾಮದ ಬಳಿಯ ಬೀದರ-ಬೆಂಗಳೂರು ರಾಜ್ಯ ಹೆದ್ದಾರಿಯ ಮೇಲೆ ಬೃಹತ್ ಗಾತ್ರದ ಮರಗಳು ಮುರಿದು ಬಿದ್ದ ಪರಿಣಾಮ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದಾಗಿ ವಾಹನ ಸವಾರರು ಹೈರಾಣಾದರು.

Contact Your\'s Advertisement; 9902492681

ಗ್ರಾಮದಲ್ಲಿನ ಅನೇಕ ಮನೆಗಳಿಗೆ ಮೇಲ್ಛಾವಣಿಗೆ ಹಾಕಲಾಗಿದ್ದ ತಗಡುಗಳು ಹಾರಿ ಹೋಗಿದ್ದು ಮನೆಯಲ್ಲಿ ದಿನ ಬಳಕೆ ವಸ್ತುಗಳು,ಟಿ.ವಿ,ಫ್ರಿಜ್ ಸೇರಿದಂತೆ ಎಲೆಕ್ಟ್ರಿಕಲ್ ವಸ್ತುಗಳು ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.ಅಲ್ಲದೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಜನರು ಕುಡಿಯುವ ನೀರಿಗೂ ಪರದಾಡಿ ರಾತ್ರಿಯಿಡೀ ಜನರು ನಿದ್ದೆ ಇಲ್ಲದೆ ಹೈರಾಣಾಗುವಂತಾಗಿದೆ.

ಗ್ರಾಮದಲ್ಲಿ ಮಳೆ ಆವಾಂತರ ತಿಳಿಯುತ್ತಿದ್ದಂತೆ ಗುರುವಾರ ಬೆಳಿಗ್ಗೆ ಸುರಪುರ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹಾಗೂ ಕಂದಾಯ ಇಲಾಖೆ,ಜೆಸ್ಕಾಂ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಷ್ಟದ ಕುರಿತು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಲ್ಲಣ್ಣ ಸಾಹುಕಾರ,ಬಸನಗೌಡ ಪಾಟೀಲ್, ನಂದನಗೌಡ ಪಾಟೀಲ್,ಕಾಂಗ್ರೆಸ್ ಕಿಸಾನ ಘಟಕದ ತಾಲೂಕು ಅಧ್ಯಕ್ಷ ಚನ್ನಪ್ಪಗೌಡ ಜಕ್ಕನಗೌಡ್ರು ಸೇರಿದಂತೆ ಅನೇಕ ಮುಖಂಡರುಗಳಿದ್ದರು.

ದೇವತ್ಕಲ್ ಗ್ರಾಮ: ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ,ಅಲ್ಲದೆ ವಿದ್ಯುತ್ ಪರಿವರ್ತಕವೂ ನೆಲಕ್ಕುರುಳಿದೆ,ಕೆಲ ರೈತರು ಜಮೀನುಗಳಲ್ಲಿ ಬೆಳೆದಿದ್ದ ಪಪ್ಪಾಯ,ದಾಳಿಂಬೆ ಬೆಳೆ ನಷ್ಟವಾಗಿದೆ.ಅಲ್ಲದೆ ಗ್ರಾಮದಲ್ಲಿನ ಅನೇಕ ಮನೆಗಳ ಮೇಲ್ಛಾವಣಿಯ ತಗಡುಗಳು ಹಾರಿಹೋಗಿ ಮನೆಗಳಲ್ಲಿನ ಎಲ್ಲಾ ವಸ್ತುಗಳು ಸಂಪೂರ್ಣ ಹಾಳಾಗಿವೆ.ಅಲ್ಲದೆ ಮನೆಗಳ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದು ಅಪಾರ ನಷ್ಟವುಂಟು ಮಾಡಿದೆ.ಅನೇಕ ಅಂಗಡಿಗಳ ಮೇಲೆ ಹಾಕಲಾಗಿದ್ದ ತಗಡುಗಳು ಹಾರಿ ಹೋಗಿದ್ದರಿಂದ ಅಂಗಡಿಯಲ್ಲಿನ ಎಲ್ಲಾ ವಸ್ತುಗಳು ಹಾಳಾಗಿವೆ.ಅನೇಕ ಮರಗಳು ಮುರಿದು ಬಿದ್ದಿವೆ.ಟ್ರ್ಯಾಕ್ಟರ್ ಒಂದರ ಮೇಲೆ ಮರ ಮುರಿದು ಬಿದ್ದ ಪರಿಣಾಮ ಟ್ರ್ಯಾಕ್ಟರ್ ಸಂಪೂರ್ಣ ಜಖಂ ಆಗಿದೆ.

ಶುಕ್ರವಾರ ಬೆಳಿಗ್ಗೆ ಗ್ರಾಮಕ್ಕೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಭೇಟಿ ನೀಡಿದ್ದಾರೆ,ಈ ಸಂದರ್ಭದಲ್ಲಿ ಗ್ರಾಮದ ಮನೆ ಹಾನಿಗೊಳಗಾದ ಮಹಿಳೆಯರು ತಮಗೆ ಪರಿಹಾರ ಕೊಡಿಸುವಂತೆ ಕಣ್ಣೀರು ಸುರಿಸುತ್ತಾ ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಹಾನಿ ಸ್ಥಳಕ್ಕೆ ಭೇಟಿ ನೀಡಿದ ರಾಜಾ ಕುಮಾರ ನಾಯಕ,ಜಿಲ್ಲಾಧಿಕಾರಿಗಳಿಗೆ ಮತ್ತು ಸರಕಾರಕ್ಕೆ ಪರಿಹಾರ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.ಮುಖಂಡ ಭೀಮರಾಯ ಮೂಲಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಗ್ರಾಮಕ್ಕೆ ಕಂದಾಯ ಇಲಾಖೆ ಹಾಗೂ ಜೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಳೆಯಿಂದ ಉಂಟಾದ ನಷ್ಟದ ಕುರಿತು ಜನರಿಂದ ಮಾಹಿತಿ ಪಡೆದುಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here