ದಾವಣಗೆರೆ ಶ್ರುತಿ ಸಾಂಸ್ಕೃತಿಕ ಕಲಾ ತಂಡದಿಂದ ಬೀದಿ ನಾಟಕ

0
48

ಫರಹತಾಬಾದ :ಕಲಬುರಗಿ ತಾಲೂಕಿನ ಸಿರನೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯ ಬೀದಿ ನಾಟಕ ಕಾರ್ಯಕ್ರಮವನ್ನು ದಾವಣಗೆರೆ ಶ್ರುತಿ ಸಾಂಸ್ಕೃತಿಕ ಕಲಾ ತಂಡದಿಂದ ಬೀದಿ ನಾಟಕ ಮಾಡಲಾಯಿತು.

ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ದೀಪ ಬೆಳಗಿಸಿ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ವತಿಯಿಂದ ಕರ್ನಾಟಕದ್ದಂತ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಹಲವಾರು ಯೋಜನೆಗಳು ತಂದಿದ್ದಾರೆ.

Contact Your\'s Advertisement; 9902492681

ನಿರ್ಗತಿಕರಿಗೆ ಶೂರು ನಿರ್ಮಾಣ. ಆರ್ಥಿಕವಾಗಿ ಹಿಂದುಳಿದವರಿಗೆ ಧನಸಾಯ ಮಹಿಳಾ ಸಂಘದ ಸದಸ್ಯರ ಮಕ್ಕಳಿಗೆ ಶಿಶುವೇತನ ಕೊಡುತ್ತಿರುವುದು ಶ್ಲಾಘನೀಯ ವ್ಯೆಕ್ತ ಪಡಿಸಿದರು. ಮಹಿಳೆಯರು ದಿನನಿತ್ಯ ಬಳಸುವ ಪ್ಲಾಸ್ಟಿಕ್ ಅನ್ನು ನೀರವಲಗಿ ಹಚ್ಚುವುದರಿಂದ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಲಾದ ರಿಯಾಜ ಅಕ್ತರ ಅವರು ಮಾತನಾಡಿ ಯೋಜನೆಯ ಶುದ್ಧ ಗಂಗಾ ಘಟಕ, ನಮ್ಮ ಊರು ನಮ್ಮ ಕೆರೆ, ಪರಿಸರ ಕಾರ್ಯಕ್ರಮ, ವಾತ್ಸಲ್ಯ ಕಾರ್ಯಕ್ರಮ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ದಾವಣಗೆರೆ ಶ್ರುತಿ ಸಾಂಸ್ಕೃತಿಕ ಕಲಾ ತಂಡದವರಿಂದ ನೀರು ಉಳಿಸಿ ಅಭಿಯಾನದಬಗ್ಗೆ, ಪರಿಸರ ಸಂರಕ್ಷಣೆ ಬಗ್ಗೆ, ಸ್ವಚ್ಛ ತೆ ಬಗ್ಗೆ, ಶೌಚಾಲಯ ಬಳಕೆಯ ಬಗ್ಗೆ, ಬಾಲ್ಯ ವಿವಾಹ ನಿಷೇದದಬಗ್ಗೆ. ಗ್ರಾಮ ಪಂಚಾಯತಿಯಿಂದ ಜನರಿಗೆ ಸಿಗುವ ಸೌಲಭ್ಯಗಳನ್ನು ಮಾಹಿತಿ ನೀಡಿದರು ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ lನಾಟಕ ಹಾಗೂ ಜಾಗೃತಿ ಗೀತೆ ಗಳ ಮೂಲಕ ಅರಿವು ಮೂಡಿಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ನಿಂಗಪ್ಪ ಗುತ್ತೇದಾರ, ವಲಯದ ಮೇಲ್ವಿಚಾರಕರಾದ ಅಮರ ಮೂಗಳೇ.ಜಿಲ್ಲಾ ಜ್ಞಾನ ವಿಕಾಸ ಮಹಿಳಾ ಸಮನ್ವಯಾಧಿಕಾರಿ ಶ್ರೀಮತಿ ಮಮತಾ ಪಿ ಸುವರ್ಣ ಅವರು ನಿರೂಪಿಸಿದರು. ಸೇವಾ ಪ್ರತಿನಿಧಿ ಪ್ರೀತಿ, ಕೇಂದ್ರದ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here