ರೈತ ಕುಟುಂಬಕ್ಕೆ ಬಾಕಿ ಉಳಿದ ಪರಿಹಾರ ವಿತರಣೆಗೆ ಆಗ್ರಹ

0
24

ಕಲಬುರಗಿ: ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಪರಿಹಾರ ವಿತರಣೆಯಾಗಿದ್ದು, ಜಿಲ್ಲೆಯ 46 ರೈತ ಕುಟುಂಬಕ್ಕೆ ಪರಿಹಾರ ವಿತರಣೆ ಬಾಕಿಯಿದ್ದು, ಕೂಡಲೇ ಅವರಿಗೂ ವಿತರಣೆ ಮಾಡುವಂತೆವಕರ್ನಾಟಕ ರಾಜ್ಯ ರೈತ ಕಾರ್ಮಿಕರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುನಿಲ್ ಮಾನ್ಪಡೆ ಆಗ್ರಹಿಸಿದರು.

ಬರದ ಛಾಯೆ ಆವರಸಿರುವ ಕಲಬುರಗಿ ಜಿಲ್ಲೆಯಲ್ಲಿ ಅನ್ನದಾತರು ನೇಣಿಗೆ ಕೊರಳೊಡ್ಡುವುದು ಮುಂದುವರಿದಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ 84 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 55 ಜನ ಆಕಸ್ಮಿಕ ಮರಣ ಹೊಂದಿದ್ದಾರೆ. ಒಟ್ಟು 139 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 86 ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ. ಇನ್ನುಳಿದ 53 ಪ್ರಕರಣಗಳಲ್ಲಿ ಪರಿಹಾರ ಚೆಕ್ ನೀಡಬೇಕಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

Contact Your\'s Advertisement; 9902492681

ಬಿಜೆಪಿ ಅಧಿಕಾರಾವಧಿಯಲ್ಲಿ ಬಾಕಿ ಉಳಿದಿರುಬ ಈ ರೈಥ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಪರಿಹಾರ ವಿತರಣೆ ಮಾಡದೆ ವಿಳಂಬ ನೀತಿ ಅನುಸರಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಚಂದು ಜಾಧವ, ಶಾಂತಪ್ಪ ಪಾಟೀಲ, ಮಹಾನಿಂಗಪ್ಪ ಪಾಟೀಲ ಇತರರಿದ್ದರು.

ಬರದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here