ಸರ್ಕಾರದಿಂದ ಬೀಜಗಳ ಬೆಲೆ ಹೆಚ್ಚಳಕ್ಕೆ ಪ್ರಶಾಂತಗೌಡ ಮಾಲಿ ಪಾಟೀಲ ವಿರೋಧ

0
36

ಕಲಬುರಗಿ: ಹತ್ತಿ ತೊಗರಿ ಹೆಸರು ಉದ್ದು ಹಾಗೂ ಇನ್ನಿತರ ಬಿತ್ತನೆ ಬೀಜಗಳ ಬೆಲೆಯನ್ನು ಶೇಕಡ 60.ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತಗೌಡ ಆರ್ ಮಾಲಿಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ ಸರಕಾರವು ಬೀಜ ಗೊಬ್ಬರಗಳ ಬೆಲೆಯು ಗಗನಕ್ಕೇರಿಸಿದ್ದರಿಂದ ಸರಕಾರ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸಕ್ಕೆ ಮುಂದಾಗಿದೆ ಈಗಾಗಲೇ ಮುಂಗಾರು ಆರಂಭವಾಗಿರುವುದರಿಂದ ರೈತರು ಬೀಜ ಗೊಬ್ಬರ ಖರೀದಿಗೆ ಮುಂದಾಗುತ್ತಿದ್ದಾರೆ ಆದರೆ ಕೆಲವು ಕಡೆ ಕಳಪೆ ಬೀಜ ಗೊಬ್ಬರದ ಹಾವಳಿ ಹೆಚ್ಚಾಗಿದೆ ಮತ್ತು ನೆರೆಯ ಆಂಧ್ರದಿಂದ ಕಳಪೆ ಮಟ್ಟದ ಹತ್ತಿ ಬೀಜಗಳು ಕರ್ನಾಟಕಕ್ಕೆ ಲಗ್ಗೆ ಇಟ್ಟಿವೆ ಆದರೆ ಸಂಬಂಧಿಸಿದ ಕೃಷಿ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Contact Your\'s Advertisement; 9902492681

ಸರ್ಕಾರವು ರೈತ ಸಂಪರ್ಕ ಕೇಂದ್ರದಿಂದ ಕಡಿಮೆ ದರದಲ್ಲಿ ಗೊಬ್ಬರ ಬೀಜಗಳನ್ನು ವಿತರಿಸಬೇಕು ಮತ್ತು ಕಳಪೆ ಬೀಜ ಗೊಬ್ಬರದ ಹಾವಳಿಯನ್ನು ತಡೆಯುವ ಜೊತೆಗೆ ಸಮರ್ಪಕ ಬೀಜ ಗೊಬ್ಬರಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಕಾರ್ಯದರ್ಶಿ ಸಂಗಣ್ಣ ಸಾಹು ಮುಡಬುಳ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಪಾಟಿಲ್ ಗೂಡುರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಮಠ, ಅಫಜಲಪೂರ ತಾಲೂಕ ಅಧ್ಯಕ್ಷ ಸದಾಶಿವ ಗೌರ ಜೇವರ್ಗಿ, ತಾಲೂಕು ಅಧ್ಯಕ್ಷ ಪಂಚಯ್ಯ ಹಿರೇಮಠ, ಸೇಡಂ ತಾಲೂಕು ಅಧ್ಯಕ್ಷ ರಾಜಾರಾಂ ಸಿಂಗ್ ಇವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here