ನಾಳೆ ಈಶಾನ್ಯ ಪದವೀಧರ ಮತದಾನ: ಕಲಬುರಗಿ ಜಿಲ್ಲೆಯಾದ್ಯಂತ 47 ಮತಗಟ್ಟೆ ಸ್ಥಾಪನೆ

0
22

ಕಲಬುರಗಿ; ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಾದ್ಯಂತ 41 ಮುಖ್ಯ, 6 ಹೆಚ್ಚುವರಿ ಸೇರಿ 47 ಮತಗಟ್ಟೆಗಳು ರಚಿಸಲಾಗಿದೆ ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ತಾಲೂಕುವಾರು ಮತಗಟ್ಟೆ ನೋಡಿದಾಗ, ಅಫಜಲಪೂರ-4, ಆಳಂದ-5, ಚಿಂಚೋಳಿ, ಚಿತ್ತಾಪುರ ಹಾಗೂ ಜೇವರ್ಗಿ ತಲಾ 3, ಶಹಾಬಾದ, ಕಾಳಗಿ ಹಾಗೂ ಯಡ್ರಾಮಿ ತಲಾ 1, ಕಲಬುರಗಿ ನಗರ-18, ಕಲಬುರಗಿ ಗ್ರಾಮೀಣ ಮತ್ತು ಕಮಲಾಪುರ ತಲಾ 2 ಹಾಗೂ ಸೇಡಂ ತಾಲೂಕಿನಲ್ಲಿ 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

Contact Your\'s Advertisement; 9902492681

ಮತಗಟ್ಟೆ ಎಲ್ಲೆಲ್ಲಿ?; ಅಫಜಲಪೂರ ತಾಲೂಕಿನಲ್ಲಿ ಅಫಜಲಪೂರ ತಹಶೀಲ್ದಾರ ಕಚೇರಿ, ಚೌಡಾಪೂರ ಮತ್ತು ಕರಜಗಿ ಗ್ರಾಮ ಪಂಚಾಯತಿ ಕಚೇರಿ ಹಾಗೂ ಮಲ್ಲಾಬಾದ ಸರ್ಕಾರಿ ಹಿ.ಪ್ರಾ.ಶಾಲೆ(ಪೂರ್ವ ಭಾಗ). ಆಳಂದ ತಾಲೂಕಿನಲ್ಲಿ ಅಳಂದ ಹಳೇ ತಹಶೀಲ್ದಾರ ಕಚೇರಿ, ಖಜೂರಿ, ಮಾದನಹಿಪ್ಪರಗಾ, ನರೋಣಾ ಹಾಗೂ ನಿಂಬರ್ಗಾ ಗ್ರಾಮ ಪಂಚಾಯತ್ ಕಚೇರಿ. ಚಿಂಚೋಳಿ ತಾಲೂಕಿನಲ್ಲಿ ಚಿಂಚೋಳಿ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆ, ಐನಾಪೂರ ಗ್ರಾಮ ಪಂಚಾಯತಿ, ಹಾಗೂ ಸುಲೆಪೇಟ್ ಸರ್ಕಾರಿ ಪಿ.ಯು. ಜ್ಯೂನಿಯರ್ ಕಾಲೇಜು. ಚಿತ್ತಾಪೂರ ತಾಲೂಕಿನಲ್ಲಿ ಚಿತ್ತಾಪೂರ ತಾಲೂಕ ಪಂಚಾಯತ್ ಕಚೇರಿ, ಗುಂಡಗುರ್ತಿ ಗ್ರಾಮ ಪಂಚಾಯತ್ ಹಾಗೂ ವಾಡಿ ಪಟ್ಟಣದ ಹೆಣ್ಣು ಮಕ್ಕಳ ಪ್ರೌಢ ಶಾಲೆ. ಶಹಾಬಾದ ತಾಲೂಕಿನಲ್ಲಿ ಸರ್ಕಾರಿ ಗಂಡು ಮಕ್ಕಳ ಪ್ರೌಢ ಶಾಲೆ ಶಹಾಬಾದ.

ಕಮಲಾಪೂರ ತಾಲೂಕಿನಲ್ಲಿ ಕಮಲಾಪೂರ ಸರ್ಕಾರಿ ಪಿ.ಯು. ಕಾಲೇಜು ಮತ್ತು ಮಹಾಗಾಂವ್ ಕ್ರಾಸ್ ಸರ್ಕಾರಿ ಕಿ.ಪ್ರಾ.ಶಾಲೆ. ಜೇವರ್ಗಿ ತಾಲೂಕಿನಲ್ಲಿ ಜೇವರ್ಗಿ ತಹಶೀಲ್ದಾರ ಕಚೇರಿ ಕೊಠಡಿ ಸಂಖ್ಯೆ-11, ಆಂದೋಲಾ ಮತ್ತು ನೆಲೋಗಿ ಗ್ರಾಮ ಪಂಚಾಯತ್ ಕಚೇರಿ. ಯಡ್ರಾಮಿ ತಾಲೂಕಿನಲ್ಲಿ ಯಡ್ರಾಮಿ ತಹಶೀಲ್ದಾರ ಕಚೇರಿ. ಸೇಡಂ ತಾಲೂಕಿನಲ್ಲಿ ಮುಧೋಳ ಸರ್ಕಾರಿ ಉರ್ದು ಹಿ.ಪ್ರಾ.ಶಾಲೆ, ಮುಧೋಳ ಸರ್ಕಾರಿ ಉರ್ದು ಹಿ.ಪ್ರಾ.ಶಾಲೆ (ಎಡ ಭಾಗ) ಹಾಗೂ ಸೇಡಂ ತಹಶೀಲ್ದಾರ ಕಚೇರಿ. ಕಾಳಗಿ ತಾಲೂಕಿನಲ್ಲಿ ಕಾಳಗಿ ಸರ್ಕರಿ ಪ್ರೌಢ ಶಾಲೆ.

ಕಲಬುರಗಿ ನಗರದಲ್ಲಿ ಸರ್ಕಾರಿ ಐ.ಟಿ.ಐ. ತರಬೇತಿ ಕೇಂದ್ರ (ಬಲ ಭಾಗ), ತಾಲೂಕ ಪಂಚಾಯ್ ಕಚೇರಿ, ವಿ.ಜಿ.ಮಹಿಳಾ ಕಾಲೇಜು (ಬಲ ಭಾಗ), ಜಿಲ್ಲಾ ತರಬೇತಿ ಕೇಂದ್ರ (ಪೂರ್ವ ಭಾಗ), ಆದರ್ಶ ನಗರ ಸರ್ಕಾರಿ ಹಿ.ಪ್ರಾ.ಶಾಲೆ(ಬಲ ಭಾಗ), ಜಯನಗರ ಸರ್ಕಾರಿ ಹಿ.ಪ್ರಾ.ಶಾಲೆ (ಬಲ ಭಾಗ), ಅಯ್ಯರವಾಡಿ ಸರ್ಕಾರಿ ಹಿ.ಪ್ರಾ.ಶಾಲೆ, ಸರ್ಕಾರಿ ಬಾಲಕರ ಪಿ.ಯು. ಕಾಲೇಜು, ರೋಜಾ ಪ್ರದೇಶದ ಮಹೆಬೂಬ್ ನಗರ ಕಾಲೋನಿಯ ಸರ್ಕಾರಿ ಹಿ.ಪ್ರಾ.ಶಾಲೆ, ಹಳೇ ಎಸ್.ಪಿ. ಕಚೇರಿ ಮುಂಭಾಗದಲ್ಲಿರುವ ಸರ್ಕಾರಿ ಬಾಲಕೀಯರ ಪಿ.ಯು. ಕಾಲೇಜು, ನೆಹರು ಗಂಜ್ ಪ್ರದೇಶದ ನಗರೇಶ್ವರ ಬಾಲ ವಿಕಾಸ ಮಂದಿರ, ನೂತನ ವಿದ್ಯಾಲಯ ಕನ್ಯಾ ಶಾಲೆ(ಬಲ ಭಾಗ), ರಾಯಲ್ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾ ನಗರದಲ್ಲಿನ ಅಲ್ ಅಮೀನ್ ಉರ್ದು ಹಿ.ಪ್ರಾ.ಶಾಲೆ, ಗುಲಬರ್ಗಾ ವಿ.ವಿ. ಕ್ಯಾಂಪಸ್‍ನಲ್ಲಿನ ಸರ್ಕಾರಿ ಕಿ.ಪ್ರಾ.ಶಾಲೆ, ಕಲಬುರಗಿ ತಹಸೀಲ್ದಾರ ಕಚೇರಿ ಹಾಗೂ ಕಲಬುರಗಿ ಗ್ರೇಡ್-2 ತಹಶೀಲ್ದಾರ ಕೊಠಡಿ.

ತಪ್ಪದೆ ಮತ ಚಲಾಯಿಸಿ: ಎಲ್ಲಾ ಮತದಾರರು ತಪ್ಪದೆ ಸಂವಿಧಾನಬದ್ಧ ಹಕ್ಕಾದ ಮತದಾನ ಚಲಾಯಿಸಬೇಕು. ಏನೇ ಕೆಸಲವಿದ್ದರು ಅದನ್ನು ಸ್ವಲ್ಪ ಹೊತ್ತಿಗೆ ಬದಿಗೊತ್ತಿ ಮತಗಟ್ಟೆಗೆ ಹೋಗಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಮತ ಅಮಾನ್ಯವಾಗದಂತೆ ಎಚ್ಚರ ವಹಿಸಿ: ದ್ವೈವಾರ್ಷಿಕ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಪೋಸ್ಟಲ್ ಬ್ಯಾಲೆಟ್ ಮೂಲಕ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದ್ದು, ಸಾಮಾನ್ಯ ಚುನಾವಣೆಗ್ಗಿಂತ ಇದು ಭಿನ್ನವಾಗಿದೆ. ಮತದಾನ ಕೇಂದ್ರದಲ್ಲಿ ಚುನಾವಣಾ ಆಯೋಗವು ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರ ಆದ್ಯತಾ ಮತವನ್ನು ಸಂಖ್ಯಾತ್ಮಕವಾಗಿ ನಮೂದಿಸಬೇಕು. ಆದ್ಯತಾ ಸಂಖ್ಯೆ ನಮೂದಿಸುವಾಗ ಒಂದೇ ಭಾಷೆ ಬಳಸಬೇಕು. ಅಕ್ಷರದಲ್ಲಿ ಬರೆಯಬಾರದು. ಸ್ಕೆಚ್ ಪೆನ್ ಹೊರತುಪಡಿಸಿ ಇತರೆ ಪೆನ್ ಬಳಸಿ ಮತ ಚಲಾಯಿಸಿದಲ್ಲಿ ಅಂತಹ ಮತಗಳು ಅಸಿಂಧುಗೊಳ್ಳಲಿದೆ ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here