ಶಹಾಬಾದ : ತಾಲ್ಲೂಕಿನಲ್ಲಿ ಸೋಮವಾರ ಈಶಾನ್ಯ ಪದವೀಧರ ಮತಕ್ಷೇತ್ರದಿಂದ ವಿಧಾನ ಪರಿಷತಗೆ ನಡೆದ ಚುನಾವಣೆಯ 71.32%. ಮತದಾನದೊಂದಿಗೆ ಶಾಂತಿಯುತವಾಗಿ ನಡೆಯಿತು ಬೆಳಗಿನ 8 ಗಂಟೆಗೆ ಮತದಾನ ಆರಂಭಗೊಂಡಿದ್ದರೂ , ರವಿವಾರ ರಾತ್ರಿಯೆಲ್ಲಾ ಹಾಗೂ ಬೆಳಗ್ಗೆ 9 ಗಂಟೆವರೆಗೆ ಸುರಿದ ಮಳೆಯಿಂದ ಮತದಾನ ಪ್ರಕ್ರಿಯೆ ನೀರಸವಾಗಿತ್ತು. ಮಧ್ಯಾಹ್ನದ ವೇಳೆಗೆ ಮತದಾನ ಬಿರುಸು ಗೊಂಡಿತು.
ಪದವೀಧರರು ಮತಗಟ್ಟೆಗೆ ತೆರಳಿ, ಸಾಲಿನಲ್ಲಿ ನಿಂತು ಗುರುತು ಚೀಟಿ ಹಿಡಿದು ಮತದಾನ ಮಾಡಿದರು.
ನಗರದ ಸರಕಾರಿ ಬಾಲಕರ ಪ್ರೌಢಶಾಲೆಯ ಮತ ಕೇಂದ್ರದ ಹೊರಗೆ ವಿವಿಧ ಪಕ್ಷಗಳ ಏಜೆಂಟರು ಮತದಾರರಿಗೆ ತಮ್ಮ ಅಭ್ಯರ್ಥಿಗಳ ಪರ ಕೊನೆ ಹಂತದ ಮನವೊಲಿಕೆ ಪ್ರಯತ್ನ ಮಾಡುತ್ತಿರುವುದು ಕಂಡುಬಂತು. ತಾಲೂಕಿನಲ್ಲಿ ಒಟ್ಟು 1083 ಮತದಾರರಿದ್ದು, ಅದರಲ್ಲಿ 426 ಪುರುಷ ಮತದಾರರು ಹಾಗೂ 347 ಮಹಿಳಾ ಮತದಾರರು ಸೇರಿದಂತೆ ಒಟ್ಟು 773 ಮತದಾರರು ಮತದಾನ ಮಾಡಿದರು.
ಮತದಾನ ಕೇಂದ್ರದ ಸುತ್ತಲೂ ಹಾಗೂ ಹೊರಗಡೆ ಪಿಐ ನಟರಾಜ್ ಲಾಡೆ ಹಾಗೂ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.