ವಿದ್ಯುತ್ ಸಮಸ್ಯೆ ಪರಿಹರಿಸಲು ಜಯ ಕರ್ನಾಟಕ ರಕ್ಷಣಾ ಸೇನೆ ಪ್ರತಿಭಟನೆ

0
22

ಸುರಪುರ: ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆ ಪರಿಹರಿಸಲು ಆಗ್ರಹಿಸಿ ನಗರದ ರಂಗಂಪೇಟೆಯ ಜೆಸ್ಕಾಂ ಇಲಾಖೆಯ ಉಪ-ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಸುರಪುರ ನಗರದ ವಾರ್ಡ್ ನಂಬರ್ 29 ದೀವಳಗುಡ್ಡದ ಕಟ್ಟಿಗೆ ಮಷೀನ್ ಎದುರುಗಡೆ ಇರುವ ಟಿಸಿಯು ಓವರ್ ಲೋಡ್ ಆಗಿ ಪದೇ ಪದೇ ಸುಟ್ಟು ಹೋಗುತ್ತಿದ್ದು ಇನ್ನೊಂದು ಟಿಸಿಯನ್ನು ಕೂಡಿಸಬೇಕು. ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಉಪಗಲ್ ಗ್ರಾಮದಲ್ಲಿ 1 ತಿಂಗಳಿಂದ ಟಿಸಿ ಸುಟ್ಟು ಹೋಗಿ ಗ್ರಾಮಸ್ಥರು ಕರೆಂಟ್ ಕುಡಿಯಲು ನೀರು ಕೂಡ ಇಲ್ಲದೆ ಪರದಾಡುವಂತಾಗಿದೆ, ದೇವಿಕೇರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ರೈತರ ಜಮೀನಿನ ಕಂಬಗಳಲ್ಲಿ ಲೈನಫಾಲ್ಟ್ ಆಗಿದ್ದ, ಈ ಬಗ್ಗೆ ಗ್ರಾಮಸ್ಥರು ದೂರು ನೀಡಿರುತ್ತಾರೆ ಆದರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿ ಲೈನ್ ಫಾಲ್ಟ್ ಇದ್ದಲ್ಲಿ ಜಂಪನ್ನು ತೆಗೆದು, ಲೈನ್ ಕ್ಲಿಯರ್ ಮಾಡದೇ ಹೋಗಿರುತ್ತಾರೆ ಹಲವಾರು ವಾರಗಳಿಂದ ರೈತರ ಜಮೀನಿಗೆ ನೀರು ಇಲ್ಲದಂತಾಗುತ್ತದೆ,ಬಿಜಸಪುರ ಗ್ರಾಮದಲ್ಲಿ ಮನೆಯ ಮುಂದೆ ಇರುವ ಕಂಬವು ಮುರಿದು ಹೋಗಿ ಕಬ್ಬಿಣ ತೇಲಿರುತ್ತದೆ ಮಳೆಗಾಲ ಇರುವುದರಿಂದ ಜನರಿಗೆ ಆತಂಕವಾಗಿದೆ,

Contact Your\'s Advertisement; 9902492681

ಇದರ ಬಗ್ಗೆ ಕಂಬವನ್ನು ಬದಲಾಯಿಸಲು ಹಲವಾರು ಬಾರಿ ದೂರು ನೀಡಿದರು ಸಹಿತ ಗಮನಹರಿಸದೇ ನಿರ್ಲಕ್ಷ ತೋರಿರುತ್ತಾರೆ.ತಾಲೂಕಿನಲ್ಲಿ ಇನ್ನು ಹಲವಾರು ಸಮಸ್ಯೆಗಳಿದ್ದರೂ ಇದರ ಬಗ್ಗೆ ಗಮನ ಹರಿಸದೆ ಅಧಿಕಾರಿಗಳು ತಮ್ಮ ಫೋನ್ ಗಳನ್ನು ನಾಟ್ ರೀಚಬಲ್ ಮಾಡಿ ಕಾರ್ಯ ಲೋಪವೆಸಾಗಿರುತ್ತಾರೆ,ಇತ್ತ ರೈತರು ಊರ ಜನರು ತಮ್ಮ ದೂರಗಳಿಗೆ ಸ್ಪಂದಿಸದ ಅಧಿಕಾರಿಗಳಿಂದ ಬೇಸತ್ತು ಹೋಗಿರುತ್ತಾರೆ,ಈ ಕೂಡಲೇ ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಸ್ಥಾನಿಕವಾಗಿ ಪರಿಶೀಲನೆ ಮಾಡಿ ಆಗಿರುವ ಸಮಸ್ಯೆಯನ್ನು ಮೂರು ದಿನದೊಳಗಾಗಿ ಪರಿಹರಿಸಬೇಕು ಒಂದು ವೇಳೆ ಮೂರು ದಿನದೊಳಗಾಗಿ ಸಮಸ್ಯೆ ಬಗೆಹರಿಯದೆ ಹೋದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ರಂಗಂಪೇಟ ಸುರಪುರ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕ ಅಧ್ಯಕ್ಷರಾದ ಮಲ್ಲು ಕಬಡಗೆರ, ಜಿಲ್ಲಾ ಕಾರ್ಯಕ್ಷರಾದ ಶರಣು ಬೈರಿಮರಡಿ, ತಾಲೂಕ ಕಾರ್ಯಧ್ಯಕ್ಷರಾದ ಶಿವರಾಜ ವಗ್ಗರ ದೀವಳಗುಡ್ಡ, ಕಾರ್ಯದರ್ಶಿಯಾದ ಕೃಷ್ಣ ಹಾವಿನ ಬಾದ್ಯಾಪುರ,ಆಟೋ ಚಾಲಕರ ಘಟಕದ ಅಧ್ಯಕ್ಷರಾದ ಹನುಮಂತ ರತ್ತಾಳ, ಗೋಣೆಪ್ಪ ಹಸುನಾಪುರ, ಶರಣು ಕೃಷ್ಣಾಪುರ, ಮುಖಂಡರುಗಳಾದ ತಿಪ್ಪಣ್ಣ ಪೋಲಿಸ ಪಾಟೀಲ್, ಶಿವಕುಮಾರ್ ದೀವಳಗುಡ್ಡ, ಅಮೋಲ್ ದೋತ್ರೆ, ಪ್ರವೀಣ ವಿಭೂತೆ, ದೇವು ವಗ್ಗರ, ರವಿ ಟರ್ಕಿ, ಮಲ್ಲಣ್ಣ ಮಕಾಶಿ ಕೂಪಗಲ್, ಬಸವರಾಜ್ ಮುಕಾಶಿ ಕುಪಗಾಲ್ , ಮೈಲಾರಪ್ಪ ದೇವಿಕೆರ,ಭೀಮರಾಯ ಬಿಜಾಸಪುರ ಮತ್ತು ಇನ್ನು ಹಲವಾರು ಮುಖಂಡರು ಮತ್ತು ರೈತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here