ಕಲಬುರಗಿ: ತಮ್ಮ ಹುಟ್ಟಿನಿಂದ ಹಲವಾರು ಕಷ್ಟ ನೋವು ನಲಿವುಗಳನ್ನು ಉಂಡರು ಪಟ್ಟು ಬಿಡದೇ ಶಿಕ್ಷಣ ಕಲಿತು ಹಂತ ಹಂತವಾಗಿ ಪ್ರಾಥಮಿಕ ಶಿಕ್ಷಕರಾಗಿ ಪ್ರೌಢ ಶಾಲಾ ಶಿಕ್ಷಕರಾಗಿ,ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತಿಹೊಂದಿ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಅವರಂತೆ ಅವರ ಪತ್ನಿ ಮಹಾದೇವಿ ಬಂಧು ಅವರು ಶಿಕ್ಷಕಿಯಾಗಿ ಇಬ್ಬರು ದಂಪತಿಗಳು ಸಮಾಜ ಜೀವಿಯಾಗಿದ್ದಾರೆಂದು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ನುಡಿದರು.
ಸಿಐಬಿ ಕಾಲೋನಿಯ ನ್ಯೂ ಘಾಟಗೆ ಲೇಔಟ್ ನ ಸಿದ್ಧಾರ್ಥ ವಿಹಾರದಲ್ಲಿ ಜರುಗಿದ ಸಾಹಿತಿ ಡಾ.ಕೆ.ಎಸ್. ಬಂಧು ಮತ್ತು ಶ್ರೀಮತಿ ಮಹಾದೇವಿ ಬಂಧು ಅವರ ಮೂವತ್ತೇಳನೆಯ ವಿವಾಹ ವಾರ್ಷಿಕೋತ್ಸವದ ನಿಮಿತ್ಯ ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಏರ್ಪಡಿಸಿದ ಸಮಾರಂಭದಲ್ಲಿ ಮಾತನಾಡಿದ ಅವರು ಬುದ್ಧ,ಬಸವ,ಅಂಬೇಡ್ಕರ್ ಪ್ರೇ ರಣೆ ಪಡೆದುಕೊಂಡ ಇವರ ಕಾರ್ಯ ಅನುಕರಣೀಯ ಎಂದರು.
ಬುದ್ದವಿಹಾರ ಅಣದೂರಿನ ವರಜ್ಯೋತಿ ಬಂತೇಜಿ ಆಶೀರ್ವಚನ ನೀಡಿ ಮನುಕುಲ,ಸಮಾಜಕ್ಕೆ ಸತಿಪತಿ ಗಳ ತ್ಯಾಗ ಜೀವನವಿದೆ ಅವರು ಆದರ್ಶನೀಯರೆಂ ದರು.ಅಧ್ಯಕ್ಷತೆ ವಹಿಸಿದ ಬೌದ್ಧ ಪರಿಷತ್ತಿನ ರಾಜ್ಯಾಧ್ಯ ಕ್ಷ ಸುರೇಶ ಎಸ್.ಕಾನೇಕರ ಮಾತನಾಡಿ ಬುದ್ಧರ ತತ್ವ ಬಾಬಾಸಾಹೇಬರ ವಿಚಾರ ಅರಿತು ಬಾಳಬೇಕು. ಬಂಧು ಸರ್ ಅವರು ಬುದ್ದ ಬಾಬಾರ ವಿಚಾರದಲ್ಲಿ ನಡೆದು ಸಾಹಿತ್ಯ ಹೊರತಂದವರೆಂದರು. ಕೇಂದ್ರ ಸಾಹಿ ತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಮಾತನಾಡಿ ಬಾಲ್ಯ ದಿಂದಲೂ ಮಹಾದೇವಿಯವರು ಬಂಧು ಅವರನ್ನು ಕಂಡಿದ್ದೇನೆ ಅಂದಿನಿಂದ ಇಂದಿನ ತನಕ ಅದೇ ಮಾದರಿ ಅಲ್ಲದೇ ಭೀಮಗೀತೆ ಎಂಬ ಸಂಗ್ರಹ ಬಹು ಉಪಯು ಕ್ತ ಕೃತಿ ಬಂದು ಕೊಟ್ಟರೆ ; ಸಮಾಜಕ್ಕೆ ಒಳ್ಳೆಯ ಶಿಕ್ಷಣ ವಿದ್ಯಾರ್ಥಿಗಳಿಗೆ ಮಹಾದೇವಿ ನೀಡಿದವರೆಂದರು.
ಗೌರವ ಸ್ವೀಕ ರಿಸಿ ಮಾತನಾಡಿದ ಡಾ.ಕೆ.ಎಸ್. ಬಂಧು ಗಳು ನಾನು ಬಾಲ್ಯದಿಂದಲೂ ಕಷ್ಟಪಟ್ಟೆ ಆದರೆ ಬುದ್ಧ ಅಂಬೇಡ್ಕರ್ ನನಗೆ ದಾರಿ ತೋರಿ ಶಿಕ್ಷಣ ಕಲಿತು ಆದರ್ಶ ಜೀವನ ಕೈ ಗೊಳಲು ಸಾಧ್ಯವಾಯಿತು. ನನ್ನ ಪತ್ನಿ ನನ್ನ ಎಲ್ಲ ಸಹ ಕಾರಕ್ಕೆ ಕಾರಣ.ಬೆನ್ನ ಹಿಂದಿನ ಬೆಳಕು ಎಂದರು.
ಲಕ್ಮಣ ಪ್ರಾರ್ಥನೆ ಗೀತೆ ಹಾಡಿದರು ಪರಿಷತ್ತಿನ ಉಪಾ ಧ್ಯಕ್ಷ ಡಾ.ಚಿದಾನಂದ ಕುಡ್ಡನ್ ಸ್ವಾಗತಿಸಿದರು. ಲೇಖಕ ಡಾ.ಸಿದ್ಧಪ್ಪ ಹೊಸಮನಿ ನಿರೂಪಿಸಿದರು ಪರಿಷತ್ತಿನ ಕೋಶಾಧ್ಯಕ್ಷ ಡಾ.ರಾಜಕುಮಾರ ಮಾಳಗೆ ವಂದಿಸಿದರು.