ಬೆಂಗಳೂರು: ಬೆಂಗಳೂರಿನ ಪ್ರಧಾನ ಕಚೇರಿ ನೇಮಕಾತಿ ವಲಯದ ಆಶ್ರಯದಲ್ಲಿ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳು ಹಾಗೂ ಬೆಂಗಳೂರು ನಗರದಿಂದ ಆಯ್ಕೆಯಾದ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅಗ್ನಿವೀರ್ ನೇಮಕಾತಿ ರ್ಯಾಲಿಯನ್ನು 2024 ನೇ ಜೂನ್ 27 ರಿಂದ ಜುಲೈ 02 ರವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ.
2024ನೇ 22 ಏಪ್ರಿಲ್ ನಿಂದ 07 ಮೇ ರವರೆಗೆ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆಯ ನಂತರ ಶಾರ್ಟ್‍ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ರ್ಯಾಲಿಯನ್ನು ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಆಫೀಸ್ ಅಸಿಸ್ಟೆಂಟ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‍ಮೆನ್ 10 ನೇ ಉತ್ತೀರ್ಣರು ಮತ್ತು ಅಗ್ನಿವೀರ್ 10 ನೇ ಉತ್ತೀರ್ಣರ ದಾಖಲಾತಿಗಾಗಿ ನಡೆಸಲಾಗುತ್ತಿದೆ.
ಸೇನೆಯಲ್ಲಿ ಅಭ್ಯರ್ಥಿಗಳ ವಿಭಾಗಗಳು/ಪ್ರವೇಶಗಳು ರ್ಯಾಲಿಯನ್ನು ಸುಗಮವಾಗಿ ನಡೆಸಲು ನಾಗರಿಕ ಆಡಳಿತವು ಪೂರ್ವಭಾವಿಯಾಗಿ ಎಲ್ಲಾ ಅಗತ್ಯ ಸಹಾಯವನ್ನು ಒದಗಿಸುತ್ತಿದೆ. ಸಿವಿಲ್ ಅಡ್ಮಿನಿಸ್ಟ್ರೇಷನ್ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ ಕರಿಯಪ್ಪ ಮೆಮೋರಿಯಲ್ ಹಾಲ್, ಮಡಿಕೇರಿಯಲ್ಲಿ ಎಲ್ಲಾ ಹೊರ ರಾಜ್ಯಗಳ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಪ್ರವೇಶ ಕಾರ್ಡ್‍ಗಳನ್ನು ಈಗಾಗಲೇ ಅವರ ನೋಂದಾಯಿತ ಇ-ಮೇಲ್ ಐಡಿಗೆ ಕಳುಹಿಸಲಾಗಿದೆ ಮತ್ತು ಅವರ ಬಳಕೆದಾರ ಹೆಸರು ಮತ್ತು ಪಾಸ್‍ವರ್ಡ್ ಮೂಲಕ ಲಾಗಿನ್ ಆಗಿ ಭಾರತೀಯ ಸೇನೆಯ ವೆಬ್‍ಸೈಟ್‍ನಲ್ಲಿ ಸಹ ಮಾಹಿತಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.