ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷರಾಗಿ ಡಾ.ಗವಿಸಿದ್ಧಪ್ಪ ಪಾಟೀಲ ನೇಮಕ

0
28

ಕಲಬುರಗಿ: ರಾಜ್ಯ ಸಿರಿಗನ್ನಡ ವೇದಿಕೆಯ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಸಾಹಿತಿ,ಚಿಂತಕ ಡಾ.ಗವಿಸಿದ್ಧಪ್ಪ ಎಚ್.ಪಾಟೀಲ ಅವರನ್ನು ರಾಜ್ಯಾಧ್ಯ ಕ್ಷರಾದ ಜಿ.ಎಸ್.ಗೋನಾಳ ಅವರ ಆದೇಶದಂತೆ ನೇಮಕ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಸಿ. ಎನ್. ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಡಾ.ಗವಿಸಿದ್ಧಪ್ಪ ಪಾಟೀಲ ಅವರು ಸಾಹಿತಿ,ಕವಿ, ಲೇಖಕ,ಸಂಘಟಕರಾಗಿ ಇದುವರೆಗೂ ನೂರು ಪುಸ್ತಕ ಪ್ರಕಟಿಸಿದ್ದಾರೆ.ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕನ್ನಡ ಅಂಕಿ ಬಳಕೆ, ಕನ್ನಡಮ್ಮನ ಸೇವೆ ಮಾಡಲು,ತಾಲೂಕು ಘಟಕಗಳ ನೇಮಕ ಮಾಡಿ ಕಾರ್ಯ ಪ್ರವೃತ್ತರಾಗಲು ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here