ಅಭಿವೃದ್ಧಿಗೆ ಕೌಶಲ್ಯಗಳು ಅವಶ್ಯಕ: ಡಾ. ಎಂ ಎ ಬಷೀರ

0
8

ಕಲಬುರಗಿ: ಉಪನ್ಯಾಸಕರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಆಧುನಿಕತೆಗೆ ತಕ್ಕಂತೆ ಅಪ್ಡೇಟ್ ಆಗಬೇಕಾದರೆ ಅಧ್ಯಾಪಕರ ಅಭಿವ್ರದ್ಧಿ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ಕೆಬಿಎನ್ ವಿವಿಯ ಐಕ್ಯೂಎಸಿ ನಿರ್ದೇಶಕರಾದ ಡಾ. ಎಂ ಎ ಬಷೀರ ನುಡಿದರು.

ಕೆಬಿಎನ್ ವಿವಿಯ ಗ್ಯಾಲರಿ ಹಾಲ್ ದಲ್ಲಿ ಎಂಜಿನಿಯರಿಂಗ್ ವಿಭಾಗˌ ಗಣಕ ವಿಜ್ಞಾನ ಮತ್ತು ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗಗಳು ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ ಅಂಡ್ ಡೇಟಾ ಸೈನ್ಸ್ : ಇಂಸೈಟ್ಸ್, ಪ್ರಾಕ್ಟಿಸಸ್ ಅಂಡ್ ಅಪ್ಲಿಕೇಷನ್ಸ್ ವಿಷಯದ ಮೇಲೆ 2 ವಾರಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಯಾಗಿ
ಶನಿವಾರ ಅವರು ಮಾತನಾಡಿದರು.

Contact Your\'s Advertisement; 9902492681

ಇಂತಹ ಕಾರ್ಯಕ್ರಮಗಳು ವಿವಿಯಲ್ಲಿ ಸದಾ ನಡೆಯುತ್ತಿರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತುಂಬಾ ಬೇಡಿಕೆ ಹೊಂದಿದೆ. ಅಲ್ಲದೇ ಎಲ್ಲ ಕ್ಷೇತ್ರಗಳಲ್ಲಿ ಲಗ್ಗೆ ಇಟ್ಟಿದೆ. ಆದ್ದರಿಂದ ಅದರ ಬಗ್ಗೆ ತಿಳಿಯುವುದು ಮುಖ್ಯ. ಎಐ ತಂತ್ರವನ್ನು ತುಂಬಾ ಜಾಣ್ಮೆಯಿಂದ ಬಳಸಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಿಂದ ಗಳಿಸಿದ ಜ್ಞಾನದಿಂದ ಆತ್ಮವಿಶ್ವಾಸ ಕೊಡುತ್ತದೆ. ರೋಬೋಟಿಕ ಸರ್ಜರಿ, ಸ್ಯಾಂಪಲ್ ಕಲೆಕ್ಷನಗಾಗಿ ಎಐ ಬಳಕೆ ಎಲ್ಲ ವರದಾನವೇ ಸರಿ. ಕೆಬಿಎನ್ ವಿವಿಯ ಆಡಳಿತ ಮಂಡಳಿಯು ವಿವಿಯಯಲ್ಲಿ ಕೌಶಲ್ಯ ಕಾರ್ಯಕ್ರಮಗಳಿಗೆ ಸದಾ ಸಿದ್ಧವಾಗಿದೆ. ಗೌರವನ್ವಿತ ವಿವಿಯ ಕುಲಾಧಿಪತಿ, ಸಮಾಕುಲಾಧಿಪತಿ, ಉಪ ಕುಲಪತಿಯವರಿಗೆ ಧನ್ಯವಾದಗಳನ್ನು ತಿಳಿಸಿದರು.

ಸಂಪನ್ಮೂಲ ವ್ಯಕಿ ಡಾ. ಎ ವಿ ನರಸಿಂಹದನ ಮತ್ತು ಕೆ. ನವೀನ ಕುಮಾರ ಮಾತನಾಡಿ ಕೆಬಿಎನ್ ವಿವಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ ಕಮಾಲ ಮೊಹಮ್ಮದ ಅಜಾಮ ಇವರು ಮಾತನಾಡುತ್ತ, 15 ದಿನಗಳ ಕಾಲ ನೀಡಿದ ಉಪನ್ಯಾಸಗಳು ಪ್ರಾಧ್ಯಾಪಕರ ಕೌಶಲ್ಯ ಗಳನ್ನು ಹೆಚ್ಚಿಸಿವೆ. ಕಾರ್ಯಕ್ರಮದ ನೋಂದಣಿ ಸರಳ ಆದರೆ ಕಾರ್ಯಕ್ರಮದ ನಿಯೋಜನೆ ಕಷ್ಟ. ನಮ್ಮ ಕೆಬಿಎನ್ ಆಡಳಿತ ಮಂಡಳಿಯ ಪ್ರೋತ್ಸಾಹ ಮತ್ತು ನಮ್ಮ ಟೀಮ್ ಸದಸ್ಯರ ಕಠಿಣ ಪರಿಶ್ರಮದಿಂದ ಈ ಕಾರ್ಯಕ್ರಮ ಸರಾಗವಾಗಿ ಸಾಗಿತು. ವಿವಿಯ ಉಕುಲಪತಿ ನಮ್ಮ ಕಾರ್ಯಕ್ರಮಕ್ಕೆ ತುಂಬಾ ಬೆಂಬಲ ನೀಡಿದರು. ಮುಂದಿನ ದಿನಗಳಲ್ಲಿ ಇಂಜಿನಿಯರ ನಿಕಾಯದಲ್ಲಿ ಮತ್ತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಕಠಿಣ ಪರಿಶ್ರಮ ಪಟ್ಟ ಎಲ್ಲ ಟೀಮಗಳಿಗೆ ಧನ್ಯವಾದಗಳನ್ನು ತಿಳಿಸಿದರು.

14 ದಿನಗಳ ಕಾರ್ಯಕ್ರಮ ನೋಂದಾಯಿಸಿದ ಎಲ್ಲ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಅಭ್ಯರ್ಥಿಗಳಾದ ಡಾ. ಅಸ್ಮಾ ಅಂಜುಮ, ಮಾರುಕ ಫಾತಿಮಾ, ಡಾ. ನದೀಮ ಪಾಷಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಡಾ. ಮೊಹಮ್ಮದ ನಝರುದ್ದಿನ ಪ್ರಾರ್ಥಿಸಿದರೆ, ಡಾ ನಸೀರ ಅಲಿ ಸ್ವಾಗತಿಸಿದರು. ಡಾ ವಿಶಾಲದತ್ತ ಕೊಹಿರ ವರದಿ ಸಲ್ಲಿಸಿದರು. ಪ್ರೊ. ಜೂಹರಾ ಬೇಗಂ ಪರಿಚಯಿಸಿದರು. ಡಾ ಸಮೀನಾ ಬಾನು ವಂದಿಸಿದರು. ಮೊಹಮ್ಮದ ಯೂಸುಫ ನಿರೂಪಿಸಿದರು. ಎಂಜಿನಿಯರಿಂಗ್ ವಿಭಾಗದ ಎಲ್ಲ ಪ್ರಾಧ್ಯಾಪಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here