ನೀರಿನ ಪರೀಕ್ಷೆ ಏಳು ದಿನಗಳ ವಿಶೇಷ ಅಭಿಯಾನ: ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ ಚಾಲನೆ

0
6

ಸುರಪುರ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಳೆಗಾಲದ ಕಾರಣ ಕುಡಿಯುವ ನೀರಿನಿಂದ ಅನೇಕ ರೋಗಗಳು ಬರುವ ಸಾಧ್ಯತೆ ಇರುವ ಕಾರಣ ಕುಡಿಯುವ ನೀರಿನ ಮೂಲಗಳ ಪರೀಕ್ಷೆಗಾಗಿ ಏಳು ದಿನಗಳ ವಿಶೇಷ ಅಭಿಯಾನಕ್ಕೆ ನಗರದ ತಾಲೂಕು ಪಂಚಾಯತಿ ಕಚೇರಿ ಕಚೇರಿ ಸಭಾಂಗಣದಲ್ಲಿ ಚಾಲನೆ ನೀಡಲಾಗಿದೆ.

ಅಭಿಯಾನಕ್ಕೆ ತಾ.ಪಂ ಇಒ ಬಸವರಾಜ ಸಜ್ಜನ್ ಚಾಲನೆ ನೀಡಿ ಮಾತನಾಡಿ,ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತನೀರು ಸೇವೆನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಪ್ರಕರಣಗಳು ಕಂಡು ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಪುನರಾವರ್ತನೆಯಾಗುತ್ತಿರುವುದು ರಾಜ್ಯದಲ್ಲಿ ಮುಂಗಾರು ಮಳೆಯು ಪ್ರಾರಂಭವಾಗಿದ್ದು ಮಳೆಯ ನೀರು ಕಲುಷಿತ ನೀರಿನೊಂದಿಗೆ ಬೆರೆತು ನೀರಿನ ಮೂಲಗಳೊಂದಿಗೆ ಸೇರುವ ಸಾಧ್ಯತೆಯಿರುವುದರಿಂದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ ಎಲ್ಲಾ ಕುಡಿಯುವ ನೀರಿನ ಮೂಲಗಳಾದ ಅಂಗನವಾಡಿ ಕೇಂದ್ರಗಳು, ಶಾಲೆಗಳಿಗೆ ಸರಬರಾಜಾಗುವ ನೀರು,ಜಲಸಂಗ್ರಹಾರಗಳ ನೀರಿನ ಮಾದರಿಗಳನ್ನು ಗ್ರಾಮ ಪಂಚಾಯತಿ ಪ್ರಾಥಮಿಕ ಹಂತವಾಗಿ ಈieಟಜ ಖಿesಣ ಏiಣs & ಊ2S viಚಿಟs ಗಳನ್ನು ಉಪಯೋಗಿಸಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡು,ನೀರಿನ ಗುಣಮಟ್ಟವು ಸರಿ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು,ಒಂದು ವೇಳೆ ಯಾವುದಾದರೂ ನೀರಿನ ಮೂಲವು ಕಲುಷಿತ/ ಕುಡಿಯಲು ಯೋಗ್ಯವಲ್ಲವೆಂದು ಕಂಡುಬಂದರೆ ತಕ್ಷಣವೇ ಆ ನೀರಿನ ಮೂಲಗಳನ್ನು ತಕ್ಷಣವೇ ನಿಲ್ಲಿಸಿ,ಪರ್ಯಾಯ ಮೂಲಗಳಿಂದ ನೀರು ಸರಬರಾಜು ಮಾಡಲು ವ್ಯವಸ್ಥೆಗೊಳಿಸಿ, ಹೆಚ್ಚಿನ ಗುಣಮಟ್ಟ ಪರೀಕ್ಷೆಗಾಗಿ ಹತ್ತಿರದ ಪ್ರಯೋಗಾಲಯಗಳಿಗೆ ತಲುಪಿಸಿ ಏಳು ದಿನಗಳ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಲು ಸೂಚಿಸಿದರು.

Contact Your\'s Advertisement; 9902492681

ನಂತರ ಸುರಪೂರು ತಾಲೂಕು ಮಟ್ಟದ ಪ್ರಯೋಗಾಲಯದ ವಿಶ್ಲೇಷಣೆಗಾರರಾದ ಬಾಲರಾಜ್ ಚಂದುಕರ್ ರವರು ಎಫ್ಡಿಕೆ ವಾಯ್ಸ್ ಗಳನ್ನು ಉಪಯೋಗಿಸಿ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಹನಮಂತ್ರಾಯ ಪಾಟೀಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸುರಪುರ, ತಾಲೂಕಿನ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಪಂಪ್ ಆಪರೇಟರ್ಸ, ಹಾಗೂ ತಾಲೂಕ ಪಂಚಾಯತ ಸಿಬ್ಬಂದಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here