ಯಾಜ್ಞವಲ್ಕ್ಯ ಜಯಂತಿ ಶೋಭಾ ಯಾತ್ರೆ

0
4

ಸುರಪುರ: ಯಾಜ್ಞವಲ್ಕ್ಯರನ್ನು ಬ್ರಹ್ಮದೇವನ ಅವತಾರವೆಂದು ಪರಿಗಣಿಸಲಾಗಿದೆ ಹೀಗಾಗಿ ಅವರನ್ನು ಬ್ರಹ್ಮಋಷಿ ಎಂದು ಕರೆಯಲಾಗುತ್ತದೆ ಎಂದು ವೇ.ಮೂ ಭೀಮಶೇನಾಚಾರ್ಯ ಜೋಷಿ ಮಂಗಳೂರ ತಿಳಿಸಿದರು.

ನಗರದ ಮುಜುಂದಾರ ಗಲ್ಲಿಯ ಮಧ್ವ ಮಂಟಪದಲ್ಲಿ ನಡೆದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಯಜ್ಞವಲ್ಕ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಯಾಜ್ಞವಲ್ಕ್ಯರು ವಿದ್ವಾಂಸರು,ವಾಗ್ಮಿಗಳು,ಅನೇಕ ಮಂತ್ರಗಳನ್ನು ಬರೆದರು ಮತ್ತು ಅಪಾರ ಜ್ಞಾನವನ್ನು ಹೊಂದಿದ್ದರು ಭಗವಾನ ಸೂರ್ಯದೇವನಿಂದ ಆಶೀರ್ವಾದ ಪಡೆದು ಯಜುರ್ವೇದದ ಮಂತ್ರಗಳ ಜ್ಞಾನವನ್ನು ಪಡೆದ ಮಹನೀಯರು ಆಗಿದ್ದಾರೆ.ವೈಶಂಪಾಯನರ ಶಿಷ್ಯರಾಗಿದ್ದ ಯಾಜ್ಞವಲ್ಕ್ಯರು ಸಂಪೂರ್ಣ ಯಜುರ್ವೇದವನ್ನು ಅಧ್ಯಯನ ಮಾಡಿದ್ದರು ತಮ್ಮ ತಪೋಬಲದ ಮೂಲಕ ಶುಕ್ಲ ಯಜುರ್ವೇದವನ್ನು ಸಾಕ್ಷಾತ್ಕರಿಸಿಕೊಂಡಿದ್ದರು ಯಾಜ್ಞವಲ್ಕ್ಯರು ಬರೆದ ಸ್ಮøತಿಯನ್ನು ಯಾಜ್ಞವಲ್ಕ್ಯ ಸ್ಮøತಿ ಎಂದು ಹೆಸರಾಗಿದೆ ಎಂದು ತಿಳಿಸಿದ ಅವರು ವಿಪ್ರ ಬಾಂಧವರು ಇಂತಹ ಮಹಾನ್ ಪುರುಷರ ಇತಿಹಾಸ ಹಾಗೂ ತತ್ವ ಸಿದ್ಧಾಂತಗಳನ್ನು ಅರಿತುಕೊಳ್ಳಬೇಕು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಪ್ರತಿನಿತ್ಯ ಸಂಧ್ಯಾವಂದನೆ, ಪೂಜೆ ಇತ್ಯಾದಿ ನಮ್ಮ ಧಾರ್ಮಿಕ ಪದ್ಧತಿಗಳನ್ನು ತಪ್ಪದೇ ಪಾಲಿಸಬೇಕು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ನಮ್ಮ ಬ್ರಾಹ್ಮಣ್ಯವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಂಘ ಹಾಗೂ ಕಾತ್ಯಾಯನಿ ಮಹಿಳಾ ಭಜನಾ ಮಂಡಳಿಯವರಿಂದ ಶ್ರದ್ಧಾ-ಭಕ್ತಿಯಿಂದ ಪೂಜೆ ಕೈಂಕರ್ಯ ನೆರವೇರಿಸಿ ನಂತರ ಭಜನೆಯೊಂದಿಗೆ ಯಾಜ್ಞವಲ್ಕ್ಯ ಗುರುಗಳ ಭಾವಚಿತ್ರದ ಶೋಭಾಯಾತ್ರೆಯ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ನಡೆಯಿತು

ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಂಡಳಿ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಪ್ರಮುಖರಾದ ಕೃಷ್ಣಾಚಾರ್ಯ ದೇವರು, ರಾಘವೇಂದ್ರಾಚಾರ್ಯ ಪುರೋಹಿತ, ಪ್ರಾಣೇಶರಾವ ಕುಲಕರ್ಣಿ, ಮಲ್ಲಾರಾವ ಸಿಂದಗೇರಿ,ಲಕ್ಷ್ಮೀಕಾಂತರಾವ ಅಮ್ಮಾಪುರ, ಶ್ರೀನಿವಾಸ ದೇವಡಿ, ಬಲಭೀಮರಾವ ಶೆಳ್ಳಗಿ,ಗುರುನಾಥರಾವ ಹಂದ್ರಾಳ,ಗುಂಡುರಾವ ಅರಳಹಳ್ಳಿ, ಮಲ್ಲಾರಾವ ದೇವತ್ಕಲ್, ಚಂದ್ರಕಾಂತ ನಾಡಗೌಡ, ವೆಂಕಟೇಶ ಕುರಿಹಾಳ, ಗೋವಿಂದಾಚಾರ್ಯ ದೇವರು,ರಮೇಶ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಪ್ರವೀಣ ಕುಲಕರ್ಣಿ, ವೆಂಕಟೇಶ ರಾಯನಪಾಳ್ಯಾ, ರಾಘವೇಂದ್ರರಾವ ಮುನಮುಟಗಿ, ದತ್ತುರಾವ ಏವೂರ, ಪ್ರಲ್ಹಾದ ದೀಕ್ಷಿತ,ಮಾಧವಾಚಾರ್ಯ ದೇವಾಪುರ ಹಾಗೂ ಕಾತ್ಯಾಯನಿ ಮಹಿಳಾ ಭಜನಾ ಮಂಡಳಿ ಸದಸ್ಯರು ಇದ್ದರು.

ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿ ಯಾಜ್ಞವಲ್ಕ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು,ಈ ಸಂದರ್ಭದಲ್ಲಿ ಯೋಗಿಶ್ವರ ಯಾಜ್ಞವಲ್ಕ್ಯ ಸಂಘದ ವತಿಯಿಂದ ಶಾಸಕರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here