ಕಲಬುರಗಿ ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ; ಶಂಕರರಾವ ದೇಶಮುಖ

0
31

ಆಳಂದ: ಕಲಬುರಗಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಜಗದೇವ ಗುತ್ತೇದಾರ ವಿಧಾನ ಪರಿಷತ್ತು ಸದಸ್ಯರಾಗಿ ನೇಮಕಗೊಂಡ ನಂತರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವಕ್ಷನಿಷ್‌, ಸಂಘಟನೆ ಹಾಗೂ ಕ್ಷೇತ್ರವಾರು ಪ್ರಾತಿನಿಧ್ಯದ ಆಧಾರದಲ್ಲಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಎಂದು ಹಿರಿಯ ಕಾಂಗ್ರೇಸ್ ಮುಖಂಡ ಶಂಕರರಾವ ದೇಶಮುಖ ತಿಳಿಸಿದರು.

ಸೋಮವಾರ ಆಳಂದ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಮಲಾಪುರ ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿ ೧೯೮೩ರಿಂದಲೂ ಕಾಂಗ್ರೇಸ್‌ದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ, ಹಿರಿಯ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಹಾಗೂ ಜಿ.ರಾಮಕೃಷ್ಣ ಅವರ ಬೆಂಬಲಿಗರಾಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ತಾಪಂ ಸದಸ್ಯರಾಗಿ ೪೦ ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ದುಡಿದ್ದೇನೆ ಎಂದರು.

Contact Your\'s Advertisement; 9902492681

ಜಿಲ್ಲಾಧ್ಯಕ್ಷ ಸ್ನಾನವು ಇವರಗೆ ಸೇಡಂ, ಚಿತ್ತಾಪುರ,ಚಿಂಚೋಳಿ, ಜೇವರ್ಗಿ ತಾಲ್ಲೂಕಿಗೆ ಸೀಮಿತವಾಗಿವೆ, ಆಳಂದ ತಾಲ್ಲೂಕಿಗೆ ಒಮ್ಮೆಯೂ ಅಧ್ಯಕ್ಷ ಸ್ಥಾನ ದೊರೆತಿಲ್ಲ, ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಿರಿತನ ಹಾಗೂ ಸಂಘಟನಾಶಕ್ತಿ ಆಧರಿಸಿ ತಮ್ಮನ್ನು ಪರಿಗಣಿಸಲು ಪಕ್ಷದ ಮುಖಂಡರಿಗೂ, ಶಾಸಕರಿಗೂ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೂ ಮನವಿ ಮಾಡಲಾಗುವುದು ಎಂದರು.

ದೇಶಮುಖರಿಗೆ ಸೂಕ್ತ ಸ್ಥಾನಕ್ಕೆ ಮನವಿ: ಆಳಂದ ತಾಲ್ಲೂಕಿನ ಹಿರಿಯ ಕಾಂಗ್ರೇಸ್ ಮುಖಂಡರಾಗಿರುವ ಶಂಕರರಾವ ದೇಶಮುಖ ಅವರಿಗೆ ಪಕ್ಷದ ಜಿಲ್ಲಾಧ್ಯಕ್ಷ ಇಲ್ಲವೇ ಸರ್ಕಾರದ ವಿವಿಧ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ ಚಿತಲಿ ಒತ್ತಾಯಿಸಿದರು.

ಮುಖ್ಯಮಂತ್ರಿ ಸಲಹೆಗಾರರು, ಶಾಸಕ ಬಿ.ಆರ್.ಪಾಟೀಲ ಅವರ ಗಮನಕ್ಕೂ ತರಲಾಗುವದು, ೪೦ ವರ್ಷದಿಂದ ಕಾಂಗ್ರೇಸ್ ಪಕ್ಷದ ನಿಷ್ಠೆಯ ಕಾರ್ಯಕರ್ತರಾಗಿ, ನಾಯಕರಾಗಿ ಪಕ್ಷದ ಸಂಘಟನೆಯಲ್ಲಿ ದುಡಿದಿರುವ ಶಂಕರರಾವ ದೇಶಮುಖ ಅವರಿಗೆ ಸೂಕ್ತ ಸ್ಥಾನ ನೀಡಲು ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರಲ್ಲಿ ಒತ್ತಾಯಿಸಲಾಗುವುದು ಎಂದರು.ಮುಖಂಡ ಸಂಜಯ್‌ ನಾಯಕ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here