ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಶಾಸಕ ಆರ್.ವಿ ನಾಯಕ ಸ್ಥಳ ಪರಿಶೀಲನೆ

0
5

ಸುರಪುರ: ನಗರದಲ್ಲಿ ಸರಕಾರದ ಯೋಜನೆಯಾದ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಶಾಸಕ ರಾಜಾ ವೇಣುಗೊಪಾಲ ನಾಯಕ ಮುಂದಾಗಿದ್ದು,ನಗರದ ತಹಸೀಲ್ದಾರ್ ಕಚೇರಿ ರಸ್ತೆಯಲ್ಲಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮನವಿ ಮಾಡುತ್ತಿದ್ದರು,ಅದರಂತೆ ಈಗ ಶಾಸಕರು ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಆಸಕ್ತಿ ತೋರಿದ್ದು,ನಗರದ ತಹಸಿಲ್ದಾರ್ ಕಚೇರಿ ರಸ್ತೆಯ ಮೀನುಗಾರಿಕೆ ಕಚೇರಿ ಬಳಿಯಲ್ಲಿನ ಜಾಗವನ್ನು ವೀಕ್ಷಣೆ ಮಾಡಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಸ್ಥಳ ಸೂಕ್ತವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಾ ವಾಸುದೇವ ನಾಯಕ,ಹಾಲಿ ಅಧ್ಯಕ್ಷ ಪ್ರಕಾಶ ಗುತ್ತೇದಾರ,ನಗರಸಭೆ ಪ್ರಭಾರಿ ಪೌರಾಯುಕ್ತರಾದ ಶಾಂತಪ್ಪ,ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಜೆ.ಇ ಮಹೇಶ ಹಾಗೂ ಮುಖಂಡರಾದ ವೆಂಕೋಬ ಯಾದವ್,ರಾಜಾ ಸಂತೋಷ ನಾಯಕ,ರಾಜಾ ಕುಮಾರ ನಾಯಕ,ರಾಜಾ ಸುಶಾಂತ ನಾಯಕ,ಸೂಗುರೇಶ ವಾರದ್,ವಿರೇಶ ದೇಶಮುಖ,ಹಣಮಂತ್ರಾಯ ಮಕಾಶಿ,ಶಿವರಾಜ ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here