ಕಮಲಾಪುರದಲ್ಲಿ ಚಾತುರ್ಮಾಸ್ಯ ವೃತಾನುಷ್ಠಾನ ಕೈಗೊಳ್ಳುವೆ: ವಿದ್ಯಾ ಕಣ್ವವಿರಾಜ ತೀರ್ಥ

0
8

ಸುರಪುರ: ಭಕ್ತರ ಆಪೇಕ್ಷೆ ಮತ್ತು ಅಭಿಮಾನದ ಮೇರೆಗೆ ಈ ಬಾರಿಯ ತಮ್ಮ ಪಂಚಮ ವರ್ಷದ ಚಾತುರ್ಮಾಸ್ಯ ವೃತಾನುಷ್ಠಾನವನ್ನು ವಿಜಯಪುರ ಜಿಲ್ಲೆಯ ಕಮಲಾಪುರದಲ್ಲಿ ಕೈಗೊಳ್ಳುತ್ತೇನೆ ಎಂದು ಕಣ್ವಮಠಾಧೀಶ ವಿದ್ಯಾ ಕಣ್ವವಿರಾಜ ತೀರ್ಥರು ತಿಳಿಸಿದರು.

ತಾಲ್ಲೂಕಿನ ಹುಣಸಿಹೊಳೆ ಗ್ರಾಮದ ಕಣ್ವಮಠದಲ್ಲಿ ವಿದ್ಯಾ ತಪೋನಿಧಿ ತೀರ್ಥರ ಮಧ್ಯಾರಾಧನೆಯಂದು ಅನುಗ್ರಹ ಸಂದೇಶ ನೀಡಿ,ಕಮಲಾಪುರದಲ್ಲಿ ನಮ್ಮ ಪರಂಪರೆಯ ಯತಿಗಳಾದ ವಿದ್ಯಾವಿರಾಜ ತೀರ್ಥರ ವೃಂದಾವನವಿದೆ. ಅಲ್ಲಿ ಅನುಷ್ಠಾನ ಕೈಗೊಳ್ಳುತ್ತಿರುವುದು ನಮಗೆ ಸಂತೋಷ ನೀಡಿದೆ. ಮಠದ ಅನುಯಾಯಿಗಳು, ಭಕ್ತರು ಈ ಸಮಯದಲ್ಲಿ ಕಮಲಾಪುರಕ್ಕೆ ಆಗಮಿಸಿ ಕೃತಾರ್ಥರಾಗಬೇಕೆಂದು ಹೇಳಿದರು.

Contact Your\'s Advertisement; 9902492681

ಕಣ್ವಮಠ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮನೋಹರ ಮಾಡಿಗೇರಿ ಮಾತನಾಡಿ, ಕಮಲಾಪುರದ ಭಕ್ತರ ಒತ್ತಾಸೆ ಮೇರೆಗೆ ಶ್ರೀಗಳು ಜುಲೈ 30 ರಿಂದ ಸೆಪ್ಟೆಂಬರ್ 18 ವರೆಗೆ ಚಾತುರ್ಮಾಸ್ಯ ಅನುಷ್ಠಾನ ಕೈಗೊಳ್ಳುವರು. ಸೇವೆ ಸಲ್ಲಿಸಲು ಇಚ್ಛಿಸುವವರು ಬೆಳಗಲ್ ದಿಲೀಪಾಚಾರ್ಯ ಮೋ. 9845421208 ಸಂಪರ್ಕಿಸಬಹುದು ಎಂದು ತಿಳಿಸಿದರು.

ಮಧ್ಯಾರಾಧನೆಯ ಪ್ರಯುಕ್ತ ಬೆಳಿಗ್ಗೆ ವಿಠಲಕೃಷ್ಣನ ಸಂಸ್ಥಾನ ಪೂಜೆ, ವಿದ್ಯಾ ತಪೋನಿಧಿ ತೀರ್ಥರ ವೃಂದಾವನಕ್ಕೆ ಅಲಂಕಾರ, ಪೂಜೆ, ಹಸ್ತೋದಕ, ಅನ್ನಸಂತರ್ಪಣೆ ನಡೆಯಿತು.

ಕಾಮನಟಗಿಯ ಛಾಯಾ ಭಜನಾ ಮಂಡಳಿ ವತಿಯಿಂದ ಭಜನೆ ನಡೆಯಿತು. ಪಾರಾಯಣ ಸಂಘದಿಂದ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಸಾಮೂಹಿಕ ಅಷ್ಠೋತ್ತರ ಶತನಾಮ ಪಾರಾಯಣ ಮಾಡಲಾಯಿತು.

ಅರುಣ ಜೋಷಿ ಅವರು ನಿತ್ಯ ಕರ್ಮಾನುಷ್ಠಾನದ ಕುರಿತು ಪ್ರವಚನ ನೀಡಿದರು.

ಔದುಂಬರÀಭಟ್ಟ ಜೋಷಿ, ಪ್ರಲ್ಹಾದ ಕನಸಾವಿ, ಸುರೇಶ ಕುಲಕರ್ಣಿ, ಪಾರ್ಥಸಾರಥಿ ಜೋಷಿ, ವಿನುತ್ ಜೋಷಿ, ರಾಘವೇಂದ್ರ ಕಾಮನಟಗಿ, ವಿರುಪಾಕ್ಷಭಟ್ಟ ಜೋಷಿ, ಕಮಲಾಕರ ದೇಶಪಾಂಡೆ, ನೀಲಕಂಠರಾವ ತಲೇಖಾನ್, ರಾಘವೇಂದ್ರ ಆಲಗೂರ, ಪ್ರಾಣೇಶಾಚಾರ್ಯ ಗೋಲಗೇರಿ, ರಾಘವೇಂದ್ರ ಕೊಡೇಕಲ್ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here