ಭಾರತದಲ್ಲಿ ರಕ್ತದ ಕೊರತೆಯಿಂದ ಪ್ರತಿದಿನ 12,000 ಕ್ಕೂ ಹೆಚ್ಚು ರೋಗಿಗಳು ಸಾಯುತ್ತಾರೆ

0
24

ಕಲಬುರಗಿ; ಭಾರತದಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಪ್ರತಿದಿನ 12,000 ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ದೇಶದ ಬ್ಲಡ್‍ಬ್ಯಾಂಕ್ ಮತ್ತು ಆಸ್ಪತ್ರೆಗಳಲ್ಲಿ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ಬಹುದೊಡ್ಡ ಅಂತರವಿದೆ ಎಂದು ಖ್ಯಾತ ಮೂತ್ರಪಿಂಡಶಾಸ್ತ್ರಜ್ಞ ಮತ್ತು ಚಿರಾಯು ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ದೋಶೆಟ್ಟಿ ಹೇಳಿದರು.

ಮಂಗಳವಾರ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ-2024ರ ಸ್ಮರಣಾರ್ಥ, ರಕ್ತದಾನ ಕುರಿತು ಜಾಗೃತಿ ಉಪನ್ಯಾಸ ನೀಡಿದ ಡಾ. ದೋಶೆಟ್ಟಿ, ಇಂದು ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದ ಕೊರತೆ ತೀವ್ರವಾಗಿದೆ. ಇದು ದೇಶದ ಆಸ್ಪತ್ರೆಗಳಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು, ಪ್ರತಿ ದಿನ 1.46 ಕೋಟಿ ಯೂನಿಟ್ ರಕ್ತದ ಬೇಡಿಕೆಗೆ ವಿರುದ್ಧವಾಗಿ ಬ್ಲಡ್‍ಬ್ಯಾಂಕ್ ಮತ್ತು ಆಸ್ಪತ್ರೆಗಳಲ್ಲಿ ರಕ್ತದ ಲಭ್ಯತೆಯು ಕೇವಲ 1.25 ಕೋಟಿ ಯೂನಿಟ್ ಆಗಿದ್ದು, ಪ್ರತಿದಿನ ಸುಮಾರು 19 ಲಕ್ಷ ಯೂನಿಟ್‍ಗಳ ಕೊರತೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಮಯಕ್ಕೆ ಸರಿಯಾಗಿ ರಕ್ತವನ್ನು ಪಡೆಯುವಲ್ಲಿ ಆರೋಗ್ಯ ವೃತ್ತಿಪರರು ಹಾಗೂ ಕಾರ್ಯಕತ್ರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ, ರಕ್ತದಾನದ ಬಗ್ಗೆ ಅರಿವಿನ ಕೊರತೆಯಿದ್ದು, ಒಂದು ಅಂದಾಜಿನ ಪ್ರಕಾರ ಅರ್ಹರಲ್ಲಿ 90 ಪ್ರತಿಶತದಷ್ಟು ಜನರು ರಕ್ತದಾನ ಮಾಡುವುದಿಲ್ಲ ಎಂದು ಡಾ. ದೋಶೆಟ್ಟಿ ಒತ್ತಿ ಹೇಳಿದರು.

ಕ್ಯಾನ್ಸರ್‍ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು, ಕಳೆದ ಆರು ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರು, ಅನಿಯಂತ್ರಿತ ಅಧಿಕ ರಕ್ತದೊತ್ತಡ ಹೊಂದಿರುವವರು ಮತ್ತು ಇನ್ಸುಲಿನ್ ಅಗತ್ಯವಿರುವ ಮಧುಮೇಹ ರೋಗಿಗಳು ಹಾಗೂ ಅನಿಯಂತ್ರಿತ ಬಿಪಿ ಹೊಂದಿರುವವರು ಸೇರಿದಂತೆ ಇತರರು ರಕ್ತದಾನ ಮಾಡಲು ಅರ್ಹರಲ್ಲ ಎಂದು ಅವರು ತಿಳಿ ಹೇಳಿದರು. ಹಾಗೆಯೇ ನಿಯಂತ್ರಿತ ರಕ್ತದೊತ್ತಡ ಹಾಗೂ ಮಧುಮೇಹವುಳ್ಳವರು ಕೂಡ ರಕ್ತದಾನ ಮಾಡಬಹುದು ಎಂದು ಹೇಳಿದರು.

ನಿಯಮಿತವಾಗಿ ರಕ್ತದಾನ ಮಾಡುವವರು ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ಮತ್ತು ಅದರಿಂದ ಹೃದಯಾಘಾತ, ಪಾಶ್ರ್ವವಾಯು ಸಂಭವಿಸುವ ಸಾಧ್ಯತೆಗಳನ್ನು ಇಲ್ಲವಾಗಿಸಬಹುದು. ಅಲ್ಪಾವಧಿಯ ಕ್ಯಾಲೋರಿ ಇರುವವರು ಮತ್ತು ತನ್ನ ದೀರ್ಘಾವಧಿಯ ದೇಹ ತೂಕದಲ್ಲಿ ಕಡಿತವನ್ನು ಸಾಧಿಸಬಹುದು ಎಂದು ಅವರು ಹೇಳಿದರು.

ದಾನಿಗಳಿಂದ ರಕ್ತವನ್ನು ತೆಗೆದುಕೊಳ್ಳುವ ಮೊದಲು ದಾನಿಗಳನ್ನು, ಉಚಿತವಾಗಿ ಒಟ್ಟಾರೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತವನ್ನು ದಾನ ಮಾಡಬಹುದು ಮತ್ತು ರಕ್ತದ ಪ್ರಮುಖ ಅಂಶವಾದ ಕೆಂಪು ರಕ್ತ ಕಣಗಳು (ಆರ್‍ಬಿಸಿ) ಸಾಮಾನ್ಯ ಮಟ್ಟಕ್ಕೆ ಚೇತರಿಸಿಕೊಳ್ಳಲು ಮೂರು ವಾರಗಳ ಸಮಯ ತೆಗೆದುಕೊಳ್ಳುತ್ತದೆ. ಅದರಂತೆ ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್‍ಲೆಟ್‍ಗಳು ಮೊದಲಿನಂತೆ ಚೇತರಿಸಿಕೊಳ್ಳಲು ಕೆಲವೇ ಕೆಲವು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದರು.

ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ರಕ್ತದಾನ ಮಾಡಬಹುದಾದರೂ, ಅಪರೂಪದ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳು ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡುವುದನ್ನು ತಪ್ಪಿಸಬೇಕು. ಬ್ಲಡ್‍ಬ್ಯಾಂಕ್ ಮತ್ತು ಆಸ್ಪತ್ರೆಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಡಾ. ದೋಶೆಟ್ಟಿ ಹೇಳಿದರು. ಅಪರೂಪದ ರಕ್ತದ ಗುಂಪು ಹೊಂದಿರುವವರು ವೈದ್ಯಕೀಯ ತುರ್ತುಸಂಧರ್ಭಗಳಲ್ಲಿ ಬೇಡಿಕೆಯ ಮೇರೆಗೆ ರಕ್ತದಾನ ಮಾಡಬಹುದು ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯ ಮತ್ತು ಚಿರಾಯು ಆಸ್ಪತ್ರೆಯ ಜೀವನ್ ಆಧಾರ್ ರಕ್ತ ಕೇಂದ್ರವು ಜಂಟಿಯಾಗಿ ವಿಶ್ವವಿದ್ಯಾಲಯ ಆವರಣದಲ್ಲಿ ರಕ್ತದಾನ ಶಿಬಿರವನ್ನು ಬುಧವಾರ ಆಯೋಜಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here