ಕಲಬುರಗಿ ನಗರದಲ್ಲಿನ ಇಂದಿರಾ ಕ್ಯಾಂಟೀನ್ ಗಳನ್ನು ಪುನರಾರಂಭಿಸಿ; ಡಿ.ಸಿ. ಬಿ.ಫೌಜಿಯಾ ತರನ್ನುಮ್

0
19

ಕಲಬುರಗಿ; ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಬಡ ಜನರ ಹೊಟ್ಟೆ ತಣ್ಣಾಗಿಸುವ ಇಂದಿರಾ ಕ್ಯಾಂಟೀನ್ ಮುಂದಿನ ಒಂದು ವಾರದೊಳಗೆ ಪುನರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನು್ಮ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪೌರ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿಲ್ಲೆಯಲ್ಲಿ ಈ ಹಿಂದೆ ಮೊದಲನೇ ಹಂತದಲ್ಲಿ ಆರಂಭಗೊಂಡು ನಾನಾ ಕರಾಣದಿಂದ ಸ್ಥಗಿತಗೊಂಡಿರುವ ಕಲಬುರಗಿ ನಗರದಲ್ಲಿನ ಜಿಮ್ಸ್ ಆಸ್ಪತ್ರೆ, ಪಾಲಿಕೆ ಕಚೇರಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ಎ.ಪಿ.ಎಂ.ಸಿ ಕಚೇರಿ ಹೀಗೆ 7 ಇಂದಿರಾ ಕ್ಯಾಂಟೀನ್ ಗಳನ್ನು ವಾರದಲ್ಲಿ ಪುನರ್ ಆರಂಭಿಸಬೇಕು ಎಂದರು.

Contact Your\'s Advertisement; 9902492681

ಇನ್ನು ಎರಡನೇ ಹಂತದಲ್ಲಿ ಕಲಬುರಗಿ ನಗರದ ಜಯದೇವ ಆಸ್ಪತ್ರೆ ಮತ್ತು ಕಣ್ಣಿ ಮಾರ್ಕೆಟ್, ಅಫಜಲಪೂರ, ಆಳಂದ, ಶಹಾಬಾದ, ಯಡ್ರಾಮಿ, ಜೇವರ್ಗಿ, ವಾಡಿ ಹಾಗೂ ಸೇಡಂನಲ್ಲಿ ಪ್ರಾರಂಭಿಸಲಾಗುತ್ತಿದೆ. ಈಗಾಗಲೆ ಸೇಡಂ, ಅಫಜಲಪೂರದಲ್ಲಿ ಪ್ರಿ ಕಾಸ್ಟ್ ಸ್ಟ್ರಕ್ಚರ್ ನಡಿ ಕ್ಯಾಂಟೀನ್ ನಿರ್ಮಿಸಲಾಗಿದ್ದು, ಎಲೆಕ್ಟ್ರಿಕಲ್, ಪ್ಲಂಬಿಂಗ್ ಕೆಲಸ ಬಾಕಿ ಇದೆ. ಅದು ಸಹ ಬೇಗ ಮುಗಿಸುವಂತೆ ತಿಳಿಸಿದ ಡಿ.ಸಿ. ಅವರು, ಇನ್ನುಳಿದ ಕಡೆ ನಿವೇಶನವನ್ನು ಕೂಡಲೆ ಕ್ಯಾಂಟೀನ್ ನಿರ್ಮಾಣ ಜವಾಬ್ದಾರಿ ಹೊತ್ತಿಕೊಂಡಿರುವ ಎಕ್ಸಲ್ ಏಜೆನ್ಸಿಗೆ ಹಸ್ತಾಂತರಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬರುವ ಜುಲೈ 8 ಮತ್ತು 9 ರಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಸಿ.ಇ.ಓ ಗಳ ಕಾನ್ಫೆರೆನ್ಸ್ ನಡೆಯಲಿದ್ದು, ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ ನಡೆದ ಸಭೆಯಲ್ಲಿನ ತೀರ್ಮಾನಕ್ಕೆ ಅನುಪಾಲನಾ ವರದಿಯನ್ನು ಸೋಮವಾರದೊಳಗೆ ಈ ಕಚೇರಿಗೆ ಸಲ್ಲಿಸಬೇಕೆಂದು ತಿಳಿಸಿದಲ್ಲದೆ ಪ್ರಗತಿ ವರದಿಯನ್ನು ಸಿ.ಎಂ. ಕಚೇರಿಯಿಂದ ನೀಡಲಾದ ಸ್ಪ್ರೆಡ್ ಶೀಟ್ ನಂತೆ ತಂತ್ರಾಂಶದಲ್ಲಿ ನಿಖರವಾಗಿ ಅಪಡೇಟ್ ಸಹ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಸ್ವಚ್ಚ ಭಾರತ ಮಿಷನ್ 1.0 ಮತ್ತು 2.0 ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನೆ‌ ಪರಾಮರ್ಶಿಸಲಾಯಿತು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ ಮಾತನಾಡಿ, ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್ ಗಳ ಸ್ಥಿತಿಗತಿ ವಿವರಿಸುತ್ತಾ ಮೊದಲನೇ ಹಂತದಲ್ಲಿ ಆರಂಭವಾದ 9 ಕ್ಯಾಂಟೀನ್ ಪೈಕಿ ಚಿತ್ತಾಪುರ ಮತ್ತು ಚಿಂಚೋಳಿ ಇಂದಿರಾ ಕ್ಯಾಂಟೀನ್ ಚಾಲ್ತಿಯಲ್ಲಿದ್ದು, ಬಡವರಿಗೆ ಅಲ್ಪ ರೂಪಾಯಿಯಲ್ಲಿಯೆ ಉಪಹಾರ, ಊಟ ಒದಗಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕ್ಲಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಕಲಬುರಗಿ ಮಹಾನಗರ ಪಾಲಿಕೆಯ ಇ.ಇ. ಶಿವಣಗೌಡ ಪಾಟೀಲ ಸೇರಿದಂತೆ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here