ಚಿತ್ತಾಪುರ: ಮನೆಯ ಮೇಲ್ಛಾವಣಿಯಿಂದ ಇಳಿದು ಹಾಡಹಗಲೇ ಮನೆ ಕಳ್ಳತನ

0
24

ವಾಡಿ: ಹಾಡಹಗಲೇ ಮನೆಯ ಮೇಲ್ಚಾವಣಿ ಕಿತ್ತು ಮನೆಯಲ್ಲಿದ್ದ ಒಡವೆ ಹಾಗೂ ನಗದು ಹಣ ದೋಚಿದ ಪ್ರಕರಣ ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದ ಸಾಮ್ರಾಟ್ ಅಶೋಕ್ ಚಕ್ರವರ್ತಿ ಬಡಾವಣೆಯಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಗ್ರಾಮದ ಮಲ್ಲಪ್ಪ ಮಾಂಗ್ ಅವರ ಪುರಕಲ್ಲು ಮನೆಯ ಮೇಲ್ಚಾವಣಿ ಕಿತ್ತು ಒಳ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ 45 ಗ್ರಾಂ ಚಿನ್ನ ಹಾಗೂ 5000 ನಗದು ಹಣ ದೋಚಿದ್ದಾರೆ.

Contact Your\'s Advertisement; 9902492681

ಕೃಷಿ ಕೆಲಸಕ್ಕಾಗಿ ಜಮೀನಿಗೆ ಕುಟುಂಬಸ್ಥರು ತೆರಳಿದ್ದ ಸಂದರ್ಭ ಬಳಸಿಕೊಂಡು ಈ ಕೃತ್ಯ ಎಸಗಲಾಗಿದೆ. ಕುಟುಂಬ ಸದಸ್ಯರು ಸಂಜೆ ಮನೆಗೆ ಮರಳಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.

ಮಲ್ಲಪ್ಪ ಮಾಂಗ್ ನೀಡಿದ ದೂರಿನ ಮೇರೆಗೆ ಚಿತ್ತಾಪುರ ಪಿಎಸ್ಐ ಶ್ರೀಶೈಲ್ ಅಂಬಾಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ದೂರು ದಾಖಲಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here