ಕಲಬುರಗಿ: ಜಿಲ್ಲೆಯ ಕಮಲಾಪೂರ, ಓಕಳಿ ಆಲಗೂಡ್ ಗ್ರಾಮಗಳಲ್ಲಿ ಗುಲಾಬಿ ಗಿಡದ ಎಲೆಗಳಲ್ಲಿ ಎಲೆ ಚುಕ್ಕಿ ರೋಗ ಕಂಡು ಬಂದಿದ್ದು, ಇದರಿಂದಾಗಿ ಎಲೆಗಳ ರಚೆನ, ಹೂವುಗಳ ಗಾತ್ರ, ಇಳುವರಿ ಕುಂಟಿತ ತಡೆಯಲು ಕಾರ್ಬನ್‍ಡೈಜಿಂ 1 ಗ್ರಾ. ಅಥವಾ ಡೈಪನ್‍ಕೋನೊಜ್ವಾಲ್ 1 ಮೀ. ಅಥವಾ ಪ್ರೋಬಿಕನೋಜೋಲ್ 1 ಮೀ. ಪ್ರತಿ ಲೀಟರ್ ನೀರಿನಲ್ಲಿ ಬರೆಸಿ ಸಿಂಪಡಿಸಬೇಕೆಂದು ಕೆವಿಕೆ, ಕಲಬುರಗಿಯ ಸಸ್ಯರೋಗ ವಿಜ್ಞಾನಿಗಳಾದ ಡಾ. ಜಹೀರ್ ಅಹ್ಮದ್ ತಿಳಿಸಿದ್ದಾರೆ.
ಮುಂಗಾರು ಮಳೆ ಸಾಧಾರಣದಿಂದ ಉತ್ತಮವಾಗಿದ್ದು, ಗಿಡಗಳಿಗೆ ಯೋಗ್ಯ ಪೋಷಕಾಂಶ ಹಾಗೂ ಚಾಚನೆ ಸಮಯ ಗುಲಾಬಿ ರೈತರು ಸಮರ್ಪಕವಾಗಿ ಕೈಗೊಳ್ಳಬೆಕೆಂದು ಕೆವಿಕೆಯ ತೋಟಗಾರಿಕೆಯ ವಿಜ್ಞಾನಿಗಳಾದ ಡಾ. ಸನ್ಮತಿ ನಾಯಕ್ ರವರು ತಿಳಿಸಿದರು. ರೈತ ಮಹಾದೇವಪ್ಪಾ, ಬಸವರಾಜ, ರೇವಣಸಿದ್ದಪ್ಪಾ, ಸುಲೋಚನಾ ಮತ್ತು ಆನಂದ ಉಪಸ್ಥಿತರಿದ್ದರು.
ಕಲಬುರಗಿಯಲ್ಲಿ ಗುಲಾಬಿ ಕೃಷಿಗೆ ಉತ್ತಮ ಬೇಡಿಕೆ ಇದ್ದು, ರೈತರು ನೂತನ ತಳಿಗಳನ್ನು ಬೆಳೆಸಿದ್ದಲ್ಲಿ ಹಾಗೂ ಯೋಗ್ಯ ಸಸ್ಯ ಸಂರಕ್ಷಣೆ ಕೈಗೊಂಡಲ್ಲಿ ಹೈದ್ರಾಬಾದ್ ಮಾರುಕಟ್ಟೆಗೆ ಗುಣಮಟ್ಟದ ಗುಲಾಬಿ ಹೂವು ಸಂಪರ್ಕ ಸಾಧ್ಯ ಎಂದು ಕೆವಿಕೆ ಮುಖ್ಯಸ್ಥರಾದ ಡಾ. ರಾಜು ತೆಗ್ಗೆಳ್ಳಿ ತಿಳಿಸಿದರು.