ಮಜರ್ ಆಲಂ ಖಾನ್ ಅಧ್ಯಕತೆಯಲ್ಲಿ ನಗರದ ವಿನ್ಯಾಸ ಮಾಲೀಕರು, ಡೆವಲಪರ್ಸ್, ಬಿಲ್ಡರ್ಸ್ ಅವರೊಂದಿಗೆ ಸಭೆ

0
50

ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಇವರ ಅಧ್ಯಕ್ಷತೆಯಲ್ಲಿ ನಗರದ ಬಿಲ್ಡರ್ಸ್ ಡೆವಲಪರ್ಸ್ ಮತ್ತು ವಿನ್ಯಾಸದ ಮಾಲೀಕರವರೊಂದಿಗೆ ಸಭೆಯನ್ನು ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಭೆ ಜರುಗಿತು.

ಸಭೆಯಲ್ಲಿ ವಿನ್ಯಾಸದ ಮಾಲೀಕರು ವಿನ್ಯಾಸಗಳ ಅನುಮೋದನೆ, ಅಭಿವೃದ್ಧಿಪಡಿಸುವಲ್ಲಿ ಆಗುತ್ತಿರುವ ತೊಂದರೆಗಳನ್ನು ಪ್ರಮುಖವಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕಾಮಗಾರಿ ಪೂರ್ಣವಾದರೂ ಎನ್.ಓ.ಸಿ. ನೀಡುತ್ತಿಲ್ಲವೆಂದು ಮತ್ತು ವಾಟರ ಟ್ಯಾಂಕ್ ನಿರ್ಮಾಣಕ್ಕಾಗಿ ಪೆÇ್ರೀರೇಟಾ ಚಾರ್ಜ ಅನ್ನು ಪಾವತಿಸುವ ಬಗ್ಗೆ ತಿಳಿಸಿದರು.

Contact Your\'s Advertisement; 9902492681

ಇದರಿಂದ ವಿನ್ಯಾಸ ಅಭಿವೃದ್ಧಿಗೊಳಿಸುವಲ್ಲಿ ರ್ಥಿಕ ಹೊರೆ ಉಂಟಾಗುವುದಲ್ಲದೆ, ಅಂದಾಜು ಪಟ್ಟಿ ತಯಾರಿಸುವಲ್ಲಿ ಕೂಡಾ ವಿಳಂಬ ಆಗುತ್ತದೆ ಎಂದು ತಿಳಿಸಿದರು, ಹಾಗೂ 10 ಎಕರೆಗೂ ಹೆಚ್ಚಿನ ವಿಸ್ತೀರ್ಣದ ವಿನ್ಯಾಸಗಳಿಗೆ ಮಾತ್ರ ವಾಟರ ಟ್ಯಾಂಕ್ ನಿರ್ಮಾಣ ಮಾಡುವಂತೆ ನಿಯಮವನ್ನು ಮಾಡುವಂತೆ ಆಗ್ರಹಿಸಿದರು.

ಅಧ್ಯಕ್ಷರು, ಪ್ರಸ್ತಾಪಿಸಿ ಪೆÇ್ರೀ-ರೇಟಾ ಶುಲ್ಕ ಪಾವತಿಸುವ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಈಗಾಗಲೇ ಚರ್ಚಿಸಲಾಗಿದ್ದು, ವಿಷಯವನ್ನು ವಿನ್ಯಾಸದ ಮಾಲೀಕರು, ಡೆವಲಪರ್ಸ್ ರವರ ಹಿತವನ್ನು ಗಮನದಲ್ಲಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ವಲಯ ನಿಯಮಗಳ ತಿದ್ದುಪಡಿ ತರುವ ಬಗ್ಗೆ ಮುಖ್ಯವಾಗಿ ಕಟ್ಟಡದ ಎತ್ತರ ಪ್ರಸ್ತುತ 11.50 ಮೀಟರ ಸಾಮಾನ್ಯ ಸೆಟಬ್ಯಾಕ್ ಇರುವುದನ್ನು 15.00 ಮೀಟರ ಎತ್ತರಕ್ಕೆ ಹೆಚ್ಚಿಸಲು ಆಗ್ರಹಿಸಿದರು.

ವಿಷಯದ ಬಗ್ಗೆ ಪ್ರಸ್ತಾಪಿಸಿ ಈಗಾಗಲೇ ವಲಯ ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ, ಶೀಘ್ರದಲ್ಲಿಯೇ ವಲಯ ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಧ್ಯಕ್ಷರು ಪ್ರಸ್ತಾಪಿಸಿ, ಮಹಾನಗರದ ಸೌಂದರ್ಯಿಕರಣಕ್ಕಾಗಿ ವಿನ್ಯಾಸದ ಮಾಲೀಕರು, ಡೆವಲಪರ್ಸ್ ಮತ್ತು ಬಿಲ್ಡರ್ಸ್ ರವರು ಸಿ.ಎಸ್.ಆರ್. ಅಡಿಯಲ್ಲಿ ನಗರದಲ್ಲಿಯ ಉದ್ಯಾನವನ ಅಭಿವೃದ್ಧಿ, ವೃತ್ತಗಳ ಅಭಿವೃದ್ಧಿ ಮಾಡಲು ಹಾಗೂ ಅಭಿವೃದ್ಧಿಗೊಳಿಸಿ ಮೇಲ್ವಿಚಾರಣೆ ಮಾಡಲು ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ಕ್ರೆಡಾಯಿ ಸದಸ್ಯರು, ಇತರ ಡೆವಲಪರ್ಸ್ ರವರು ಉದ್ಯಾನವನ, ವೃತ್ತಗಳನ್ನು ನೀಡಿದಲ್ಲಿ ಅಭಿವೃದ್ಧಿಗೊಳಿಸಿ ಮೇಲ್ವಿಚಾರಣೆ ಮಾಡುವುದಾಗಿ ತಿಳಿಸಿದರು. ಈ ಸಭೆಯಲ್ಲಿ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here