ಹಿರಿಯ ನಾಗರಿಕರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಅಗತ್ಯ: ಅರ್ಥಶಾಸ್ತ್ರಜ್ಞ ವಿಜಯ್ ದೇಶಮುಖ್

0
19

ಕಲಬುರಗಿ: ದೇಶದ ಹಿರಿಯ ನಾಗರಿಕರನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು ಹಿರಿಯ ನಾಗರಿಕರ ಸಚಿವಾಲಯವನ್ನು ಆರಂಭಿಸಬೇಕೆಂದು ಪುಣೆಯ ಅರ್ಥಕ್ರಾಂತಿ ಸಂಸ್ಥೆಯ ಅಧ್ಯಕ್ಷರು ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞರಾದ ವಿಜಯ ದೇಶಮುಖ್ ಪ್ರಸ್ತಾಪ ಮುಂದಿಟ್ಟಿದ್ದಾರೆ.

ಕಲಬುರಗಿಯಲ್ಲಿ ಜುಲೈ 4ರಂದು ಚೇಂಬರ್ ಸಭಾಂಗಣದಲ್ಲಿ ಡಾ. ಪಿ.ಎಸ್ ಶಂಕರ್ ಪ್ರತಿಷ್ಠಾನ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗು ಲಾಹೋಟಿ ಮೋಟರ್ಸ್ ಇವರ ಸಂಯುಕ್ತ ಆಶಯದಲ್ಲಿ ನಡೆದ ರಮೇಶ್ಚಂದ್ರ ಲಾಹೋಟಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ” ಹಿರಿಯ ನಾಗರಿಕರು ದೇಶದ ಸಂಪತ್ತು”ಎಂಬ ವಿಷಯದ ಕುರಿತಾಗಿ ಮಾತನಾಡಿದರು.

Contact Your\'s Advertisement; 9902492681

ದೇಶದಲ್ಲಿ ಎಪ್ಪತ್ತು ವರ್ಷ ದಾಟಿದ ಸುಮಾರು 14 ಕೋಟಿ ಹಿರಿಯ ನಾಗರಿಕರಿದ್ದು ಇವರಿಗಾಗಿ ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿ ಪಿಂಚಣಿ ವ್ಯವಸ್ಥೆ ಮಾಡಿದರೆ ಗೌರವ ಮತ್ತು ಸಮೃದ್ಧಿಯ ಜೀವನ ನೀಡಲು ಸಾಧ್ಯ. ಇದರಲ್ಲಿ ಎರಡರಿಂದ ಮೂರು ಕೋಟಿ ಹಿರಿಯ ನಾಗರಿಕರು ಸರಕಾರಿ ಹುದ್ದೆಯಿಂದ ನಿವೃತ್ತಿಯಾಗಿದ್ದು ಈಗಾಗಲೇ ಪಿಂಚಣಿ ಪಡೆಯುತ್ತಿದ್ದಾರೆ.

ಉಳಿದ ಸುಮಾರು 12ಕೋಟಿ ಹಿರಿಯರ ಕ್ಷೇಮ ಪಾಲನೆಗೆ ಪಿಂಚಣಿಯಿಂದ ನೆರವಾಗಲಿದೆ. ಹಿರಿಯರ ಉಪೇಕ್ಷೆ ಮತ್ತು ವೃದ್ಧಾಶ್ರಮಕ್ಕೆ ತಳ್ಳುವ ಪ್ರಮೇಯ ಬರುವುದಿಲ್ಲ. 70 ವಯಸ್ಸಿನವರೆಗೂ ರಾಷ್ಟ್ರಕ್ಕಾಗಿ ತಮ್ಮ ಮಕ್ಕಳನ್ನು ಉತ್ತಮ ಮಾನವ ಸಂಪನ್ಮೂಲವನ್ನಾಗಿಸುವ ಸೇವೆ ಮಾಡಿದ ಹಿರಿಯರನ್ನು ವೃದ್ಧಾಪ್ಯದಲ್ಲಿ ಗೌರವಿಸಿದಂತಾಗುವುದು. ಹಿರಿಯರು ವೋಟ್ ಬ್ಯಾಂಕ್ ಆಗಿ ರಾಜಕೀಯದ ದಿಕ್ಸೂಚಿ ಬದಲಿಸಬಲ್ಲ ಶಕ್ತಿಗಳಾಗುತ್ತಾರೆ ಎಂಬ ಪ್ರಸ್ತಾಪವನ್ನು ದೇಶಮುಖ್ ಮುಂದಿಟ್ಟಿದ್ದಾರೆ.

ಹಿರಿಯ ನಾಗರಿಕರ ಸಚಿವಾಲಯವನ್ನು ತೆರೆದು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಿ ಬ್ಯಾಂಕ್ ಹಾಗು ಡಿಜಿಟಲ್ ವಿನಿಮಯದ ಮೇಲೆ ಮಾತ್ರ ತೆರಿಗೆ ವಿಧಿಸಿ ಇತರ ಎಲ್ಲಾ ತೆರಿಗೆಗಳನ್ನು ರದ್ದತಿ ಮಾಡುವ ಮೂಲಕ ಹಿರಿಯ ನಾಗರಿಕರಿಗೆ ಆರ್ಥಿಕ ಸಬಲೀಕರಣ ನೀಡುವ ಪ್ರಸ್ತಾಪವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು , ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ಕೇರಳ ಗುಜರಾತ್ ಮತ್ತು ರಾಜಸ್ಥಾನದ ರಾಜ್ಯಪಾಲರುಗಳಿಗೆ ಅರ್ಥ ಕ್ರಾಂತಿ ಸಂಸ್ಥೆಯ ಮೂಲಕ ಪ್ರಸ್ತಾಪವನ್ನು ಈಗಾಗಲೇ ಮಂಡಿಸಿ ಮೆಚ್ಚುಗೆ ವ್ಯಕ್ತವಾಗಿದೆ. ಯಾವುದೇ ಕ್ರಿಮಿನಲ್ ಅಪರಾಧವನ್ನು ಹೊಂದಿರದೆ 70 ವರ್ಷದ ಹಿರಿಯ ನಾಗರಿಕರು ವೀಸಾ ಇಲ್ಲದೆ ಜಗತ್ತಿನಾದ್ಯಂತ ಪ್ರವಾಸ ಮಾಡಲು ಅವಕಾಶ ಕಲ್ಪಿಸಿ ರಾಷ್ಟ್ರದ ಶಾಂತಿದೂತರನ್ನಾಗಿ ಅವರನ್ನು ಪರಿಗಣಿಸಬೇಕು ಎಂದು ದೇಶಮುಖ್ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ. ವೀರಭದ್ರಪ್ಪ ಡಾ. ಪಿ.ಎಸ್ ಶಂಕರ್, ಚೇಂಬರ್ ನ ಗೌರವ ಕಾರ್ಯದರ್ಶಿ, ಮಂಜುನಾಥ ಜೇವರ್ಗಿ, ಕೋಶಾಧಿಕಾರಿ ಸಿಎ ಉತ್ತಮ ಬಜಾಜ್, ಸಂಚಾಲಕರಾದ ಸಿಎ ಮಣಿಲಾಲ್ ಶಹಾ, ಉಪನ್ಯಾಸದ ಪ್ರಾಯೋಜಕರು ಹಾಗೂ ಉದ್ಯಮಿಗಳಾದ ಶ್ರೀಕಾಂತ ಲಾಹೋಟಿ, ಉಷಾ ಲಾಹೋಟಿ ಮತ್ತಿತರರು ಇದ್ದರು.ಡಾ. ಪಿ. ಎಸ್ ಶಂಕರ್ ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ನರೇಂದ್ರ ಬಡಶೇಶಿ ಕಾರ್ಯಕ್ರಮ ನಿರೂಪಿಸಿದರು. ಉಮಾ ಶರ್ಮಾ ಪ್ರಾರ್ಥನಾ ಗೀತೆಯನ್ನು ಹಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here