ವಾಡಿ: ಕುಸ್ತಿ ಪಂದ್ಯಾವಳಿ: 50ಗ್ರಾಂ.ಬೆಳ್ಳಿ ಕಡಗ ವಿಜೇತ ಮಂಜುನಾಥ

0
173
ಇಂಗಳಗಿ ಹಜರತ್ ಸೈಯದ್ ಶೇರ್.ಖಾನ್.ವಲಿ ದುರ್ಗಾದ 621ನೇ ಜಾತ್ರಾ ಮಹೋತ್ಸವ

ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಹಜರತ್ ಸೈಯದ್ ಶೇರ್ ಖಾನ್.ವಲಿ ದರ್ಗಾದ 621 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಗ್ರಾಮೀಣ ಕ್ರೀಡೆಯಾದ ಕುಸ್ತಿ ಪಂದ್ಯಾವಳಿಯಲ್ಲಿ ಗ್ರಾಮದ ಯುವಕ ಮಂಜುನಾಥ ನಾಟೀಕಾರ ಬೊಮ್ಮನಳ್ಳಿ ಯುವಕನ ವಿರುದ್ಧ ಗೆಲವು ಸಾಧಿಸಿ 50ಗ್ರಾಂ.ಬೆಳ್ಳಿ ಕಡಗ, ನಗದು ಬಹುಮಾನ ಪಡೆದುಕೊಂಡರು.

3 ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಕೊನೆದಿನದಂದು ಕುಸ್ತಿ ಪಂದ್ಯಾವಳಿಯಾದ ಕಾರಣ ಜಿಲ್ಲೆಯ ವಿವಿಧ ತಾಲ್ಲೂಕಿನ ಜನರು ಕುಸ್ತಿ ವಿಕ್ಷೀಸಲು ಆಗಮಿಸಿದ್ದರು.

Contact Your\'s Advertisement; 9902492681

ಕುಸ್ತಿ ಅಖಾಡದಲ್ಲಿ ಪಟುಗಳು ಎದುರಾಳಿಯನ್ನು ಮಣಿಸಲು ತಂತ್ರ, ಪ್ರತಿತಂತ್ರ ಹಣಿಯುತ್ತಿದ್ದರೇ, ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತಾ ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು. ನೆಚ್ಚಿನ ಪೈಲ್ವಾನರು ನೆಲಕ್ಕುರುಳಿದಾಗ ಓಹೋ ಎಂದು ಉದ್ಗಾರ ತೆಗೆಯುತ್ತಿದ್ದ ದೃಶ್ಯ ಕಂಡು ಬಂತು.

ಕುಸ್ತಿ ಅಖಾಡದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕುಸ್ತಿ ಪಟು ಮಂಜುನಾಥ ನಾಟೀಕಾರ ಅವರನ್ನು ಗ್ರಾಮದ ಯುವಕರ ತಂಡ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅದ್ದೂರಿ ಸನ್ಮಾನಕ್ಕೆ ಸಾಕ್ಷಿಯಾತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಣ್ಣರಾವ ಪಾಟೀಲ, ಹಜರತ್ ಸೈಯದ್ ಶೇರ್.ಖಾನ್ ವಲಿ ದರ್ಗಾದ ಸಾಹೇಬ್ ಬಬಲು ಮುಲ್ಲಾ, ಪಂಚಾಯಿತಿ ಸದಸ್ಯರಾದ ಕಾಶೀನಾಥ್ ಚನ್ನಗುಂಡ, ನಬೀ ಪಠಾಣ, ಶರಣು ರಾವೂರ, ಕಾಂಗ್ರೆಸ್ ಮುಖಂಡ ಶ್ರೀಶೈಲ ನಾಟೀಕಾರ, ಮಲ್ಲಪ್ಪ ನಾಟೀಕಾರ, ಶಾಂತಪ್ಪ ಬರಗಲಚಾಳಿ, ಮೈನೊದ್ದಿನ್ ರಾವೂರ, ಅನೀಲ ನಾಟೀಕಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here