ನಾಳೆ ಶರಣಬಸವ ವಿಶ್ವವಿದ್ಯಾಲಯದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ನಿಂgದ ಅಪ್ರೆಂಟಿಸ್ಶಿ ಪ್ ಕ್ಯಾಂಪಸ್ ಆಯ್ಕೆ

0
25

ಕಲಬುರಗಿ; ಕರ್ನಾಟಕದಲ್ಲಿರುವ ಕೋಲಾರ ಮೂಲದ ಕಂಪನಿಯಾದ ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸೊಲ್ಯೂಷನ್ಸ್, ಜುಲೈ 06ರಂದು ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‍ನಲ್ಲಿ ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಪೆÇ್ರಮೋಷನ್ ಸ್ಕೀಮ್ (ಓಂPS) ಮತ್ತು ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಟ್ರೈನಿಂಗ್ ಸ್ಕೀಮ್ (ಓಂಖಿS) ಅಡಿಯಲ್ಲಿ ಒಂದು ವರ್ಷದ ಅಪ್ರೆಂಟಿಸ್‍ಶಿಪ್‍ಗಾಗಿ ಕ್ಯಾಂಪಸ್ ಆಯ್ಕೆಯನ್ನು ನಡೆಸಲಿದೆ.

10 ಹಾಗೂ 12ನೇ ತರಗತಿಯ ಶೈಕ್ಷಣಿಕ ಅರ್ಹತೆ ಹೊಂದಿರುವ ಅಥವಾ IಖಿI ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಓಂPS ಅಡಿಯಲ್ಲಿ ಆಯ್ಕೆಗೆ ಅರ್ಹರಾಗಲಿದ್ದಾರೆ. ಡಿಪೆÇ್ಲಮಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಓಂಖಿS ಗೆ ಆಯ್ಕೆಗೆ ಅರ್ಹರಾಗಿರುತ್ತಾರೆ. ಓಂPS ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು 12,000 ರೂಪಾಯಿಗಳನ್ನು ಸ್ಟೈಫಂಡ್ ಪಡೆಯಲು ಅರ್ಹರಾಗುತ್ತಾರೆ ಅದೇ ರೀತಿ ಓಂಖಿS ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 13,500 ರೂಪಾಯಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

Contact Your\'s Advertisement; 9902492681

ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ವಸತಿ, ಸಾರಿಗೆ ಮತ್ತು ಆಹಾರ ಸೇರಿದಂತೆ ಉಚಿತ ಆಸ್ಪತ್ರೆ ಮತ್ತು ವೈದ್ಯಕೀಯ ವಿಮೆಯನ್ನು ಆಯ್ಕೆಯಾದ ಪ್ರತಿ ಅಭ್ಯರ್ಥಿಗಳಿಗೂ ವೈಯುಕ್ತಿಕವಾಗಿ 2ಲಕ್ಷ ರೂ. ವರೆಗೆ ಒದಗಿಸಲಾಗುವುದರ ಜೊತೆಗೆ ಕೆಲಸಗಾರರ ಪರಿಹಾರ ವಿಮೆಯನ್ನು ಒದಗಿಸಲಾಗುವುದು. ಮೂರು ಪಾಳಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ದೃಢವಾದ ಭದ್ರತಾ ವ್ಯವಸ್ಥೆಯೊಂದಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಾತರಿಪಡಿಸಲಾಗುತ್ತದೆ.

18 ರಿಂದ 22 ವರ್ಷದೊಳಗಿನ ಅಭ್ಯರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಹೆಚ್ಚಿನ ವಿವರಗಳಿಗಾಗಿ ಡಾ. ಶಿವಕುಮಾರ್ ಕಾಗಿ 9632574447 ಇವರನ್ನು ಸಂಪರ್ಕಿಸಬಹುದಾಗಿದೆ. ಕ್ಯಾಂಪಸ್ ಆಯ್ಕೆಯನ್ನು ಜುಲೈ 06 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ನಡೆಸಲಾಗುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here