ಮಕ್ಕಳ ಸೃಜನಶೀಲತೆ ಅನಾವರಣಗೊಳಿಸಿದ ಮಣ್ಣೆತ್ತಿನ ಸ್ಪರ್ಧೆ

0
153

ರಾವೂರ: ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಮಣ್ಣೆತ್ತಿನ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಣ್ಣೇತ್ತು ಮಾಡುವ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕೈಚೆಳಕ ತೋರಿಸಿದರು. ತಮಗೆ ಬೇಕಾದಷ್ಟು ಮಣ್ಣನ್ನು ತಂದು ನಿಗದಿ ಪಡಿಸಿದ ಸಮಯದಲ್ಲಿ ಇತ್ತುಗಳನ್ನು ಮಾಡಿ ಅದಕ್ಕೆ ಬೇಕಾದ ಬಣ್ಣ, ಅಲಂಕಾರವಾಗುವಂತೆ ಮಾಡಿ ತಮ್ಮ ಸೃಜನಶಿಲತೆಯನ್ನು ಮೆರೆದರು.

ನಂತರ ಬಹುಮಾನ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಮೂಡಿಸಲು ಪಠ್ಯದ ಜೊತೆಯಲ್ಲಿ ಇಂತಹ ಚಟುವಟಿಕೆ ಹಮ್ಮಿಕೊಳ್ಳುವ ಅಗತ್ಯವಿದೆ. ಇದರಿಂದ ಮಕ್ಕಳ ಪ್ರತಿಭೆ ಗುರುತಿಸಲು ಸಾಧ್ಯವೆಂದು ಹೇಳಿದರು.

Contact Your\'s Advertisement; 9902492681

ಸ್ಪರ್ಧೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗದಿಂದ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಉತ್ತಮ ಮಣ್ಣೇತ್ತು ತಯಾರಿಸಿದ ಪ್ರೌಢ ವಿಭಾಗದ ಪ್ರಥಮ :ಸಂತೋಷ /ಗುಂಡಪ್ಪ, ದ್ವಿತೀಯ -ಶರಣ / ರವಿ, ತೃತೀಯ -ಭಾಗೇಶ / ಮಲ್ಲಪ್ಪ ಪ್ರಾಥಮಿಕ ವಿಭಾಗ : ಪ್ರಥಮ -ಪ್ರದೀಪ / ಮಲ್ಲಣ್ಣ, ದ್ವಿತೀಯ – ವಿಗ್ನೇಶ್ / ರಾಜೇಂದ್ರ. ತೃತೀಯ – ಅಭಿಷೇಕ / ಚಂದ್ರಶೇಖರ.ಅವರಿಗೆ ನಗದು ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಈಶ್ವರಗೌಡ ಪಾಟೀಲ್, ಶಿವಕುಮಾರ ಸರಡಗಿ, ಈರಣ್ಣ ಹಳ್ಳಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಭುವನೇಶ್ವರಿ ಎಂ, ವಿರೇಶ ಬಾಳಿ, ಬಸವರಾಜ ರಾಥೋಡ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here