ರಾಜಕೀಯಕ್ಕಾಗಿ ಮಠಾಧೀಶರು ನೀತಿ ಬಿಟ್ಟು ಜಾತಿವಂತರಾಗಿದ್ದಾರೆ; ಅರ್ಜುನ ಭದ್ರೆ

0
28

ಸುರಪುರ: ರಾಜಕೀಯಕ್ಕಾಗಿ ಇಂದು ಕೆಲವು ಮಠಾಧೀಶರು ಮುಖ್ಯಮಂತ್ರಿ ಹುದ್ದೆ ತಮ್ಮ ಜಾತಿ ಅಥವಾ ತಮ್ಮ ಸಮುದಾಯದವರಿಗೆ ನೀಡುವಂತೆ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ನೀತಿ ಬಿಟ್ಟು ಜಾತಿವಂತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಆರೋಪಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ರಾಜ್ಯದಲ್ಲಿ ಇದುವರೆಗೆ ಆಡಳಿತ ನಡೆಸಿರುವ ಪಕ್ಷಗಳು ದಲಿತ ಮುಖ್ಯಮಂತ್ರಿ ಮಾಡಲು ಮುಂದಾಗಿಲ್ಲ,ದಲಿತರು ಕೇವಲ ಪಕ್ಷಗಳ ಗೆಲುವಿಗೆ ಮಾತ್ರ ಸೀಮಿತ ಎನ್ನುವಂತಾಗಿದೆ.ಬಿಜೆಪಿ ಕೋಮುವಾದದ ವಿರುದ್ಧ ದಲಿತರು ಮತ ಹಾಕಿದ್ದರಿಂದ ಇಂದು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ,ಆದರೆ ದಲಿತರು ಮುಖ್ಯಮಂತ್ರಿ ಆಗಲಿ ಎನ್ನುವುದಿಲ್ಲ ಎಂದರು.

Contact Your\'s Advertisement; 9902492681

ಹಿಂದಿನಿಂದಲೂ ಮಲ್ಲಿಕಾರ್ಜುನ ಖರ್ಗೆಯವರಾದಿಯಾಗಿ ಅನೇಕರು ಕಾಂಗ್ರೆಸ್ ಪಕ್ಷದ ಏಳಿಗೆಗೆ ದುಡಿದಿದ್ದಾರೆ,ಆದರೆ ಮುಖ್ಯಮಂತ್ರಿ ಮಾಡಿಲ್ಲ,ಈಗ ಮಠಾಧೀಶರು ತಮ್ಮ ಜಾತಿಯರು ಅಥವಾ ತಮ್ಮ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ,ಹಿಂದುಳಿದವರು,ಒಕ್ಕಲಿಗರು,ಲಿಂಗಾಯತರು ಮುಖ್ಯಮಂತ್ರಿ ಆಗಿದ್ದಾರೆ,ಆದರೆ ದಲಿತರು ಆಗಿಲ್ಲ.ಮಠಾಧೀಶರು ಕಾವಿ ಧರಿಸಿ ಆಧ್ಯಾತ್ಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಬದಲು ತಮ್ಮ ಜಾತಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಹೇಳಿಕೆ.

ನೀಡುವ ಮೂಲಕ ಜಾತಿವಂತರಾಗಿದ್ದಾರೆ.ಇಂತಹ ನಡೆಯನ್ನು ನಾವು ವಿರೋಧಿಸುತ್ತೇವೆ.ಅಲ್ಲದೆ ಮಠಾಧೀಶರಲ್ಲಿ ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯ ಮಾಡುತ್ತಿದ್ದು ಈಗ ರಾಜ್ಯದಲ್ಲಿನ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ,ಹೆಚ್.ಸಿ ಮಹಾದೇವಪ್ಪ,ಕೆ.ಹೆಚ್.ಮುನಿಯಪ್ಪ,ಜಿ.ಪರಮೇಶ್ವರ ಸೇರಿದಂತೆ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸುತ್ತೇವೆ,ಅಲ್ಲದೆ ಮಠಾಧೀಶರಿಗೂ ಮನವಿ ಮಾಡುತ್ತಿದ್ದು ತಾವು ಕೂಡ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಕಾಂಗ್ರೆಸ್ ನಾಯಕರಿಗೆ ತಿಳಿಸುವಂತೆ ವಿನಂತಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು. ಮುಖಂಡರಾದ ಅಜೀಜಸಾಬ್ ಐಕೂರ,ಮಾನಪ್ಪ ಬಿಜಾಸಪುರ,ರಾಮಣ್ಣ ಶೆಳ್ಳಗಿ,ತಾಲೂಕ ಸಂಚಾಲಕ ಬಸವರಾಜ ದೊಡ್ಮ,ನಿ,ವಕೀಲ ಮಲ್ಲಿಕಾರ್ಜುನ ತಳ್ಳಳ್ಳಿ,ಮೂರ್ತಿ ಬೊಮ್ಮನಹಳ್ಳಿ,ಮರಿಲಿಂಗಪ್ಪ ಹುಣಸಗಿ,ಮಹೇಶ ಯಾದಗಿರಿ,ಹುಲಗಪ್ಪ ಶೆಳ್ಳಗಿ,ಮರೆಪ್ಪ ಕೋನ್ಹಾಳ,ಹಣಮಂತ ದೊರೆ ನರಸಿಂಗಪೇಟ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here