ಇಬ್ಬರು ಕೊಲಿ ಕಾರ್ಮಿಕ ಮಹಿಳೆಯರ  ಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹ

0
52

ಕಲಬುರಗಿ; ನಗರದ ಹೊರ ವಲಯದ ತಾವರಗೇರಾ ಕ್ರಾಸ್ ಹತ್ತಿರ ಏಪ್ರೀಲ್ 07 ರಂದು ಕೂಲಿ ಇಬ್ಬರ ಕಾರ್ಮಿಕ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿ ಕೊಲೆ ಮಾಡಿ 03 ತಿಂಗಳು ಕಳೆದರು ಕೂಡ ಇಲ್ಲಿಯವರೆಗೆ ಆರೋಪಿಗಳನ್ನು ಬಂದಿಸಿಲ್ಲ. ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರುಪಡಿಸಬೇಕೆಂದು ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕೆರಮಗಿ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಕೆರಿ ಅಂಬಲಗಾ ಗ್ರಾಮದ ಶರಣಮ್ಮ ಗಂಡ ಅಣ್ಣಾರಾವ ಮತ್ತು ತಾಜ ಸುಲ್ತಾನಪೂರನ ಚಂದಮ್ಮ ಗಂಡ ಬಾಬುರಾವ ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಆರ್ಥಿಕವಾಗಿ ಬಡ ಕುಟುಂಬದವರಾಗಿದ್ದು, ದಿನನಿತ್ಯ ತಮ್ಮ ಕುಟುಂಬ ನಿರ್ವಹಣೆಗಾಗಿ ಗುಲಬರ್ಗಾ ನಗರದ ಗಂಜ ಬಸ್ಟಾಂಡ್ ಮಿಂಚಗೋರಿ ನಾಕಾ ಹತ್ತಿರ ದಿನಾಲು ಕೂಲಿ ಕೆಲಸಕ್ಕಾಗಿ ಬರುತ್ತಿದ್ದರು.  ಅಲ್ಲಿದ್ದ ಗುತ್ತಿಗೆದಾರರು ಕೆಲಸಕ್ಕೆ ಕರೆದುಕೊಂಡು ಹೊಗುವವರು ಬಂದು ಅವರು ಕೆಲಸ ಮಾಡಿ ದಿನನಿತ್ಯ ಮನೆಗೆ ಹೋಗುತ್ತಿದ್ದರು.

Contact Your\'s Advertisement; 9902492681

ತಾವರಗೇರಾ ಕ್ರಾಸ್ ಹತ್ತಿರ ಜಮೀನೊಂದರಲ್ಲಿ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ. ಜಿಲ್ಲೆಯ ಹಾಡು-ಹಗಲೆ ಕೊಲೆಗಳು ಆಗುತಿವೆ, ಕೊಲೆ ನಡೆದು 03 ತಿಂಗಳು ಕಳೆದರೂ ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ದಲಿತ ಮಹಿಳೆಯರ ಕೊಲೆಗೆ ಅಲಕ್ಷತೆ ತೊರುತ್ತಿರುವ ಕಂಡುಬರುತ್ತಿದೆ ಎಂದು ಪೊಲೀಸರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಬ್ಬರ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಗುರಣ್ಣ ಐನಾಪುರ, ಜಿ ಶಿವಶಂಕರ ಕಮಲಪೂರ್, ತಾಲೂಕ ಅಧ್ಯಕ್ಷ ಶ್ರೀನಿವಾಸ್ ಕೆಂಚೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here