ಸತ್ಯಂ ಶಿವಂ ಸುಂದರಂ: ದೇವರ ಸ್ವರೂಪ ಕಟ್ಟಿಕೊಟ್ಟ ಶರಣರು

0
50

ನಮ್ಮ ಬದುಕಿನಲ್ಲಿ ಸಾಧನೆಯಿಲ್ಲದೆ ಪ್ರತಿಫಲ ಪಡೆಯುವುದು ಕಷ್ಟ. ಹೀಗಾಗಿ ನಾವು ವಚಿಸುವ ನುಡಿ ಶುದ್ಧವಾಗಿರಲಿ. ನಾಲಿಗೆಯ ಮೇಲೆ ಸತ್ಯ ಮೂಡಿ ಬರಲಿ. ‘ಸತ್ಯವೇವ ಜಯತೆ’ ಎಂದು ಬಾಳಬೇಕು.

ಶರಣರು, ಮಹಾನುಭಾವರು ‘ ಸತ್ಯಂ ವದ, ದರ್ಮಂ ಚರ’ ಎಂದು ಹೇಳಿದ್ದಾರೆ. ಸತ್ಯವನ್ನೇ ಹೇಳು, ಧರ್ಮದಿಂದ ಬಾಳು ಎಂಬುದು ಇದರರ್ಥ. ಸತ್ಯಂ ಶಿವಂ ಸುಂದರಂ ಮಾತುಗಳನ್ನು ಹೇಳುವ ಮೂಲಕ ದೇವರ ಸ್ವರೂಪವನ್ನು ಸ್ಪಷ್ಟವಾಗಿ ಕಟ್ಟಿಕೊಟ್ಟಿದ್ದಾರೆ.

Contact Your\'s Advertisement; 9902492681
ಅರ್ಥರೇಖೆಯಿದ್ದು ಫಲವೇನು?
ಆಯುಷ್ಯರೇಖೆ ವಿಲ್ಲದನ್ನಕ್ಕರ ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು?
ಅಂಧಕನ ಕೈಯಲ್ಲಿಬದರ್ಪಣವಿದ್ದು ಫಲವೇನು?
ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?
ನಮ್ಮ ಕೂಡಲಸಂಗಮ ಶರಣರನರಿಯದವರ ಕೈಯಲ್ಲಿ ಲಿಂಗವಿದ್ದು ಫಲವೇನು?
ಶಿವಪಥವನ್ನರಿಯದಕ್ಕರ

ಶರಣರು ಬಾಯಿ ಮಾತಿನಲ್ಲಿ ಸಂದೇಶ ಕೊಡಲಿಲ್ಲ. ಅವರು ಮಾತಿಗಿಂತ ಶಬ್ದದೊಳಗಣ ನಿಶ್ಯಬ್ದಕ್ಕೆ ಹೆಚ್ಚಿನ ಮಹತ್ವ ಕೊಟ್ಟರು. ಶರಣರ ಇಂತಹ ಎತ್ತರದ ಸಾಧನೆಯನ್ನು ನಮ್ಮದಾಗಿಸಿಕೊಳ್ಳಬೇಕು. ನಾವು ಆಡುವ ಮಾತುಗಳು ಶಬ್ದಾಡಂಬರವಾಗದೆ, ಮಾತೆಂಬುದು ಜ್ಯೋತಿರ್ಲಿಂಗವಾಗಬೇಕು ಎಂದು ಅವರು ಹೇಳುತ್ತಾರೆ.

ನಾವಾಡುವ ಮಾತುಗಳು ಮಾತಿನ ಇತಿ ಮಿತಿ ಕಳೆದುಕೊಂಡು ಆನುಭಾವಿಕ ನೆಲೆಯಲ್ಲಿ ನಾಂಸಿಯಾಗಬೇಕು. ಜ್ಯೋತಿಯಿಂದ ಬರುವ ಅಮಿತ ಪ್ರಕಾಶ ಮಹತ್ವದ್ದು. ಸೀಮಿತವಾದ ಮಾತು ಸೀಮಾತೀತವಾಗಬೇಕಾದರೆ ಸ್ವರದಿಂದ ಬರುವ ಮಾತು ಪರತತ್ವವಾಗಿರಬೇಕಾಗುತ್ತದೆ.

ಶರಣ ಧ್ವನಿ ಮೌನ ಧ್ವನಿಯಾಗಿ ಎಲ್ಲರ ಹೃದಯದಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ. ಶರಣರು ಲೋಕಕ್ಕಾಗಿ ಮಾನವ ಸಂದೇಶ ನೀಡಿದರು. ನಿಜದ ನೆಲೆಯ ಗತಿ ಶರಣರಿಗೆ ಗೊತ್ತಿತ್ತು.

ಶಬ್ದಾಡಂಬರ, ಶಬ್ದಜಾಲದಲ್ಲಿ ಸಿಲುಕಿಕೊಂಡಿರುವ ನಾವುಗಳು ಇಂದು ತಳಮಳದಲ್ಲಿದ್ದೇವೆ. ಕಳವಳದಲ್ಲಿದ್ದೇವೆ. ಗೊಂದಲದ ಈ ಬದುಕಿಗೆ ಶರಣರ ಸೂಳ್ನುಡಿಗಳೆ ನುಡಿಗಡಣಗಳಾಗಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here