ಕಲಬುರಗಿ: ಹೂಗಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ ನೀಡುವುದರ ಜತೆಗೆ ಸಮಾಜದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅತಿ ಹಿಂದುಳಿದ ಹೂಗಾರ ಸಮಾಜದ ಬೇಡಿಕೆಗಳಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಸಮಾಜದ ಅಭಿವೃದ್ಧಿಗೆ ಕೂಡಲೆ ಹಣ ನೀಡಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಬೇಕು.
ಇಲ್ಲವಾದರೆ ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಸತ್ಯಾಗ್ರಹ ಆರಂಭಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಗುರುದೇವ ಶರಣರು, ಪ್ರಮುಖರಾದ ಬಿ.ಪಿ. ಹೂಗಾರ, ಪ್ರಕಾಶ ಫುಲಾರಿ, ಬಸವರಾಜ ಹೂಗಾರ, ದತ್ತರಾಜ ಹೂಗಾರ, ಚನ್ನಬಸಪ್ಪ ಹೂಗಾರ, ಬಸವರಾಜ ಹೂಗಾರ ಕೋಟನೂರ, ದಯಾನಂದ ಹೂಗಾರ, ಶ್ರೀಮಂತ ಹೂಗಾರ, ಶರಣಬಸಪ್ಪ ಹೂಗಾರ, ಮಲ್ಲಿನಾಥ ಹೂಗಾರ, ಪರಮಾನಂದ, ಶರಣಬಸಪ್ಪ ಹೂಗಾರ, ಪ್ರಭು ಹೂಗಾರ, ಆನಂದ ಹೂಗಾರ ಇತರರಿದ್ದರು.