ದೇಶದ ಎರಡು ಕೋಮುಗಳ ಘರ್ಷಣೆ ತಪ್ಪಿಸಿದ ಮಹಾನ್ ಸಂತ ಗಾಂಧಿಜೀ: ಪದ್ಮಾಕರ್ ಕುಲಕರ್ಣಿ

0
54

ಕಲಬುರಗಿ: ದೇಶದ ಎರಡು ಕೋಮುಗಳ ಘರ್ಷಣೆ ತಪ್ಪಿಸಲು ತನ್ನ ಇಡೀ ಜೀವಮಾನವನ್ನೇ ಮುಡಿಪಾಗಿಟ್ಟ ಮಹಾನ್ ಸಂತ ಮಹಾತ್ಮ ಗಾಂಧಿಯಾಗಿದ್ದಾರೆ ಎಂದು ಕಲಬುರಗಿ ವಿಭಾಗದ ವಾಣಿಜ್ಶ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಪದ್ಮಾಕರ್ ಕುಲಕರ್ಣಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಶಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಶಾಂತಿದೂತನಿಗೊಂದು ಭಾವನಮನ’ ಎಂಬ ವಿಷಯದ ಬಗ್ಗೆ ಉಪನ್ಶಾಸ ನೀಡಿದರು. ಗಾಂಧಿಯ ಬಹುಮುಖ್ಶ ಚಿಂತನೆಗಳು ಮರೆಯಾಗತ್ತಿವೆ. ದೇಶದ ಸಮಗ್ರ ಅಭಿವ್ರದ್ಧಿಗೆ ಸಂಪನ್ಮೂಲ ಅವಶ್ಶಕವಾಗಿದೆ. ಈ ಭೂಮಿ ನಮ್ಮ ಆಸೆಗಳನ್ನು ಪೂರೈಸುವಷ್ಟು ಸಮರ್ಥವಾಗಿದೆ ಆದರೆ ದುರಾಸೆಯನ್ನಲ್ಲ ಎನ್ನುವ ಮಾತು ಇಂದಿಗೆ ಪ್ರಸ್ತುತವಾಗಿದೆ. ಗಾಂಧಿಜೀಯ ಮೂಲ ಉದ್ದೇಶ ಮರೆತ ದೇಶ ಹಾಳು ಕೊಂಪೆಯಾಗಿದೆ. ಭಾರತದ ಬಡತನ ಕೊನೆಯಾಗಬೇಕೆಂದು ಗಾಂಧೀಜಿ ಬಯಸಿದ್ದರು ಎಂದರು.

Contact Your\'s Advertisement; 9902492681

ನಂತರ ಮಾತನಾಡಿದ ಪ್ರಭಾರ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ˌ ಸ್ವದೇಶ ವಸ್ತುಗಳುˌ ಬಟ್ಟೆಗಳು ಸೇರಿದಂತೆ ಸ್ವದೇಶಿಯ ವಸ್ತುಗಳು ಬಳಸುವಂತೆ ಕರೆ ನೀಡಿದ್ದಾರೆ. ಸತ್ಶಾಗ್ರಹˌ ಸ್ವರಾಜ್ಶˌ ಸರ್ವೋದಯ ಇವು ಸತ್ಶದ ಮೈಲುಗಂಬಗಳಾಗಿವೆ. ಸತ್ಶˌ ಅಹಿಂಸೆಗೆ ಗಾಂಧೀಜಿ ಅಂಟಿಕೊಂಡಿದ್ದರು. ಯಾವುದೇ ವಿಷಯವನ್ನು ಗಾಂಧೀಜಿ ಸತ್ಶದ ಮೂಲಕ ಅನ್ವೇಷಣೆ ಮಾಡುತ್ತಿದ್ದರು. ಸ್ವದೇಶಿˌ ಗುಡಿ ಕೈಗಾರಿಕೆಗಳು ದೇಶದಲ್ಲಿ ನೆಲೆಸಬೇಕೆಂಬ ಕನಸು ಹೊಂದಿದ್ದರು ಎಂದರು.

ಈ ಸಂದರ್ಭದಲ್ಲಿ ಕುಲಸಚಿವ ಪ್ರೊ.ಸಿ. ಸೋಮಶೇಖರˌ ಮೌಲ್ಶಮಾಪನ ಕುಲಸಚಿವ ಪ್ರೊ.ಡಿ.ಎಂ. ಮದರಿˌ ಕಾರ್ಯಕ್ರಮ ಸಂಯೋಜಕ ಪ್ರೋ.ಶಿವಕುಮಾರ ಛೇಂಗಟಿˌ ವಿತ್ತಾಧಿಕಾರಿ ಪ್ರೊ.ಬಿ.ವಿಜಯˌ ಕನ್ನಡ ಅಧ್ಶಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ.ಪೋತೆˌ ಮನೋವಿಭಾಗ ವಿಭಾಗದ ಪ್ರೊ. ಎಸ್.ಪಿ.ಮೇಲ್ಕೇರಿˌ ಪ್ರೊ.ವಿ.ಟಿ.ಕಾಂಬಳೆˌ ಪ್ರೊ.ಶ್ರಾವಣಕುಮಾರ ಗಾಯಕವಾಡˌ ಪ್ರೊ.ಎಸ್.ಎನ್. ಮೂಲಗೆˌ ಸೇರಿದಂತೆ ಅನೇಕರು ಇದ್ದರು. ಡಾ.ಎಂ.ಬಿ.ಕಟ್ಟಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here