ಗಾಂಧಿ ಜಯಂತಿ: ಸ್ವಚ್ಛ ಭಾರತ್ ಅಭಿಯಾನ್

0
56

ಕಲಬುರಗಿ: ಮಹಾತ್ಮ ಗಾಂಧಿಜೀಯವರ ೧೫೦ನೇ ಜನ್ಮ ದಿನದದ ಅಂಗವಾಗಿ ನಗರದ ಶರಣಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಕಾಲೇಜು ವಿದ್ಯಾರ್ಥಿಗಳು ಮತ್ತು ಎನ್‌ಎಸ್‌ಎಸ್ ಸ್ವಯಂ ಸೇವಕರ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಸಹಯೋಗದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕ್ಯಾಂಪಸ್ ಸೇರಿದಂತೆ ಈ ಭಾಗದ ಐತಿಹಾಸಿಕ ಶರಣಸವೇಶ್ವರ ದೇವಾಲಯದ ಆವರಣದಲ್ಲಿ ಸ್ವಚ್ಛ ಭಾರತ್ ಅಭಿಯಾನ ಮಾಡಲಾಯಿತು.

ವಿವಿಯ ಕುಲಪತಿ ಡಾ,ನಿರಂಜನ್ ನಿಷ್ಠಿ, ವಿವಿ ಕುಸಚಿವ ಡಾ.ಅನೀಲಕುಮಾರ ಬಿಡವೆ, ವಿವಿ.ಮೌಲ್ಯಮಾಪನ ಕುಲಸಚಿವ ಡಾ.ಲಿಂಗಾರಾಜ ಶಾಸ್ತ್ರೀ, ಡೀನ್ ಲಕ್ಷ್ಮೀ ಮಾಕಾ, ಡಾ. ಬಸವರಾಜ ಮಠಪತಿ, ವಿವಿ ಆಡಳಿತ ವರ್ಗದ ಅಧಿಕಾರಿಗಳು ಹಾಗೂ ಬೋಧನ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ವಿವಿಯ ಎನ್‌ಎಸ್‌ಎಸ್ ಎರಡು ಘಟಕದ ಮಹಿಳಾ ಸ್ವಯಂ ಸೇವಕರ ತಂಡ, ಸ್ವಯಂ ಸೇವಕರ ಸಹ ಶಿಕ್ಷಣದ ನೂರಾರು ವಿದ್ಯಾರ್ಥಿಗಳ ತಂಡವು ದೇವಾಲಯದ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ ರಾಷ್ಟ್ರಪೀತಗೆ ಗೌರವ ಸಲ್ಲಿಸಿದರು.

Contact Your\'s Advertisement; 9902492681

ದೇವಾಲಯ ಸ್ವಚ್ಛತೆ ಮಾಡಿದ ನಂತರ ವಿದ್ಯಾರ್ಥಿಗಳು ಮತ್ತು ಬೋಧನ ಮತ್ತು ಬೋಧಕೇತರ ಸಿಬ್ಬಂದಿ ಶರಣಬಸವ ವಿಶ್ವವಿದ್ಯಾಲಯ ಕ್ಯಾಂಪಸ್‌ಕ್ಕೆ ಜಾತಾ ಮೂಲಕ ಬಂದರು. ರಸ್ತೆಯಲ್ಲಿ ಬಿದ್ದ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಚೀಲವನ್ನು ತೆಗೆಯಲಾಯಿತು. ಹಾಗೂ ವಿವಿಯ ಇಡೀ ಕ್ಯಾಂಪಸ್ ಆವರಣ ಸ್ವಚ್ಛತೆಗೊಳಿಸಿದರು. ಜಲಶಕ್ತಿ ಅಭಿಯಾನ ಮಹಾತ್ಮ ಗಾಂಧಿ ಜನ್ಮದಿನ ವಾರ್ಷಿಕೋತ್ಸವದ ಅಂಗವಾಗಿ ಜಲಶಕ್ತಿ ಅಭಿಯಾನದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಶರಣಬಸವ ವಿದ್ಯಾವರ್ಧಕ ಸಂಘದ ಆಡಳಿತ ವರ್ಗವು ಭಾಗವಹಿಸಿ ಪ್ರತಿ ಹನಿ ನೀರನ್ನು ಸಂರಕ್ಷಿಸುವ ಮತ್ತು ಅಂತರ್ಜಲ ಮಹತ್ವದ ಬಗ್ಗೆ ತಿಳಿಸಿದರು.

ಪ್ರೊ.ಶಿವರಾಜ ಶಾಸ್ತ್ರೀ, ಪ್ರೊ.ಕಿರಣ ಮಾಕಾ, ಪ್ರೊ.ವಾಣಿಶ್ರಿ, ಶಿವದತ್ತ ಹೊನ್ನಳ್ಳಿ, ಪ್ರೊ.ಸುಜಾತಾ, ಪ್ರೊ.ಹರಿಷ್, ಪ್ರೊ.ಶಿತಲ್ ಬಿರೆದಾರ್, ಪ್ರೊ.ಶಿವಕುಮಾರ ರಾಚೊಟಿ, ಪ್ರೊ ಯರಗೊಳ, ಪ್ರೊ ಶ್ರೀಧರ್ ಅಣಕಲ್, ಪ್ರೊ.ಶಶಿಕಲ, ಶಿವುಕುಮಾರ ಜವರಗಿ,ಪ್ರೊ ಮಡಿವಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here