ಬುಡಕಟ್ಟು ಕಲಾವಿದರು ಸಂಸ್ಕೃತಿ ರಕ್ಷಕರು: ಡಾ.ಎಸ್.ಎಸ್.ಗುಬ್ಬಿ ಅಭಿಮತ

0
58

ಯಾದಗಿರ: ಬುಡಕಟ್ಟು ಕಲಾವಿದರು ತಲಾಂತರಗಳಿಂದ ನಮ್ಮ ದೇಶದ ಕಲೆ, ಸಂಸ್ಕೃತಿ, ಪರಂಪರೆಯನ್ನು ರಕ್ಷಿಸಿ, ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮೂಲಕ ಸಂಸ್ಕೃತಿಯ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಕಲಬುರಗಿಯ ಖ್ಯಾತ ವೈದ್ಯ, ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಅಭಿಮತ ವ್ಯಕ್ತಪಡಿಸಿದರು.

ಅವರು ನಗರದ ’ಬಾಲಾಜಿ ಪದವಿ ಕಾಲೇಜಿ’ನಲ್ಲಿ ಮಂಗಳವಾರ ’ಕನ್ನಡ ಜಾನಪದ ಪರಿಷತ್’ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ’ವಿಶ್ವ ಬುಡಕಟ್ಟು ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಹಿತಿ ಪ.ಮಾನುಸಾಗರ ಮಾತನಾಡಿ, ಬುಡಕಟ್ಟು ಕಲಾವಿದರ ಕೊಡುಗೆ ಅನನ್ಯ. ಮೇಣದ ದೀಪ ತನ್ನ ಮೈ ಸುಟ್ಟು ಬೇರೆಯವರಿಗೆ ಬೆಳಕನ್ನು ನೀಡುವಂತೆ, ಬುಡಕಟ್ಟು ಕಲಾವಿದರು ತಮ್ಮ ಕಷ್ಟದ ಪರಿಸ್ಥಿತಿಯಲ್ಲಿಯೂ ಜನರಿಗೆ ಮನರಂಜನೆಯನ್ನು ನೀಡುವ ಮೂಲಕ ಸಂತೋಷ ಪಡೆಸುತ್ತಾರೆ. ಅವರ ಬದುಕು ಹಸನಾಗಬೇಕು. ಸರ್ಕಾರ ಅವರಿಗೆ ಸೂಕ್ತ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಕಜಾಪ ಹಂಗಾಮಿ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಪಶು-ಪಕ್ಷಿ, ಹಸು-ನಾಯಿ, ದೇಹದ ಒಂದೊಂದು ಅಂಗಕ್ಕೂ ದಿನಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ, ಸಮಾಜಕ್ಕೆ ಅನೇಕ ವರ್ಷಗಳಿಂದ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿರುವ ಬುಡಕಟ್ಟು ಕಲಾವಿದರ ಬಗ್ಗೆ ಸಮಾಜದಲ್ಲಿ ಗೌರವ ದೊರಕಿಸಿ ಕೊಡುವ ಮೂಲಕ ಅವರ ಬಾಳನ್ನು ಕಟ್ಟಿಕೊಡುವ ಕಾರ್ಯವಾಗಬೇಕೆಂಬ ಉದ್ಧೇಶದಿಂದ ಕಜಾಪವು ನಿರಂತರವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿಯನ್ನು ಮೂಡಿಸುತ್ತಿದೆಯೆಂದು ನುಡಿದರು.

ಬುಡಕಟ್ಟು ಕಲಾವಿದರಾದ ಈರಣ್ಣ ರುದ್ರಾಕ್ಷಿ ಗಿರಿನಗರ, ಮಹಾದೇವಪ್ಪ ರಾಮತೀರ್ಥ, ಶಂಕ್ರೆಮ್ಮ ರಾಮತೀರ್ಥ ಸೇರಿದಂತೆ ಮುಂತಾದ ಕಲಾವಿದರಿಗೆ ಸತ್ಕರಿಸಿ ಗೌರವಿಸಲಾಯಿತು. ನಂತರ ಕಲಾ ಪ್ರದರ್ಶನ ಜರುಗಿತು.
ಕಾರ್ಯಕ್ರಮದಲ್ಲಿ ಪ್ರೊ.ಭೀಮರಾಯ, ಸುಜಾತಾ ಕುಲಕರ್ಣಿ, ರಾಮಕೃಷ್ಣ, ಚೆನ್ನಾರೆಡ್ಡಿ ಸೇರಿದಂತೆ ಕಜಾಪ ಪದಾಧೀಕಾರಿಗಳು, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಮಲ್ಲಮ್ಮ, ಭಾಗ್ಯಶ್ರೀ ಪ್ರಾರ್ಥಿಸಿದರು. ಶಿವರಾಜ ಸ್ವಾಗತಿಸಿದರು. ಶ್ರೀನಿವಾಸ ನಿರೂಪಣೆ ಮಾಡಿದರು. ಡಾ.ರಾಮಲಿಂಗಪ್ಪ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here