ಸುರಪುರ: ಮಹಾತ್ಮ ಗಾಂಧಿಜಿ ಬಾಲ್ಯದಲ್ಲಿ ತುಂಬಾ ತುಂಟನಾಗಿದ್ದರು ನಂತರದ ಅವರ ಕಾರ್ಯ ಶ್ಲಾಘನಿಯವಾಗಿದೆ.ಅವರು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರೀತಿ ಹಾಗು ಅವರ ಶಾಂತ ಸ್ವಭಾವದ ವ್ಯಕ್ತಿತ್ವ ಜಗತ್ತಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ ಮಾತನಾಡಿದರು.
ನಗರದ ಸಗರಾಡು ಎಲೆಕ್ಟ್ರೀಕಲ್ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಯವರ ೧೫೦ ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ,ಗಾಂಧಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರಳು ಹೋರಾಟ ನಡೆಸಿದವರು.ಅಲ್ಲದೆ ದೇಶದ ಜನರು ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳನ್ನು ಹೊಂದುವ ವರೆಗೂ ಬಟ್ಟೆ ಧರಿಸದಿರುವುದಾಗಿ ಅದರಂತೆಯೇ ಬದುಕಿದ ಮಹಾನ್ ವ್ಯಕ್ತಿ.ಅವರು ಕೊಟ್ಟ ಸಂದೇಶ ಜಗತ್ತಿಗೆ ಆದರ್ಶ ನುಡಿಗಳಾಗಿವೆ ಎಂದು ಬಣ್ಣಿಸಿದರು.
ಮತ್ತೋರ್ವ ಅತಿಥಗಳಾಗಿದ್ದ ನಗರಸಭೆ ಪರಿಸರ ಅಭಿಯಂತರ ಸುನೀಲ ನಾಯಕ ಮಾತನಾಡಿ,ಗಾಂಧಿಜಿಯವರು ಗ್ರಾಮ ಸ್ವರಾಜ್ಯದ ಮೂಲಕ ಸ್ವಚ್ಛ ಭಾರತದ ಕನಸು ಕಂಡಿದ್ದರು.ಅವರ ಕನಸನ್ನು ನಾವೆಲ್ಲ ನನಸು ಮಾಡಲು ನಿರ್ಮಲ ಭಾರತ ನಿರ್ಮಾಣಕ್ಕೆ ಪಣ ತೊಡೋಣ.ಆ ಮೂಲಕ ಪರಿಸರ ಕಾಳಜಿ ಹೊಂದಿ ಪ್ಲಾಸ್ಟಿಕ್ ಮುಕ್ತ ದೇಶ ಮಾಡಲು ಇಂದೇ ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗೋಣ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮ ಗಾಂಧಿಜಿಯವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಬ್ದುಲ್ ರೌಫ್,ಖಂಡೆಪ್ಪ ಪೂಜಾರಿ,ಆನಂದ ಕಟ್ಟಿಮನಿ,ಅಬೀದ್ ಹುಸೇನ ಪಗಡಿ,ಅಮ್ಜದ್ ಹುಸೇನ,ಅಲ್ಲಾವುದ್ದೀನ್,ತಿಪ್ಪಣ್ಣ ಮಡಿವಾಳ,ವಿಷ್ಣು ಟೋಣಪೆ,ಬಂದೇನವಾಜ್,ಮಹ್ಮದ ಜಾವೇದ್,ಶಾಕೀರ್ ಪಗಡಿ ಸೇರಿದಂತೆ ಅನೇಕರಿದ್ದರು.