ಸುರಪುರ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಕರ್ನಾಟಕ ಶಿಕ್ಷಕರ ಮತದಾರರ ಪಟ್ಟಿಯ ಪರಿಷ್ಕರಣೆ ಅವಕಾಶ ನೀಡಲಾಗಿದೆ ಎಂದು ತಹಸೀಲ್ದಾರ ಸುರೇಶ ಅಂಕಲಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪ್ರಾದೇಶಿಕ ಆಯುಕ್ತರು ಕಲಬುರಗಿ ಹಾಗು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗೆ ಅರ್ಹತೆಯುಳ್ಳ ವ್ಯಕ್ತಿ, ಅಂದರೆ ಭಾರತದ ಪ್ರಜೆಯಾಗಿದ್ದು ಆಯಾ ಮತಕ್ಷೇತ್ರದ ವ್ಯಪ್ತಿಯಲ್ಲಿನ ಸಾಮಾನ್ಯ ನಿವಾಸಿಯಾಗಿರುವ ಹಾಗು ೧ನೇ ನವಂಬರ್ ೨೦೧೯ಕ್ಕೆ ಮೊದಲು ೬ ವರ್ಷಗಳ ಅವಧಿಯಲ್ಲಿ ಪ್ರೌಢ ಶಾಲೆಗಿಂತ ಕಡಿಮೆಯಿಲ್ಲದ ನಿರ್ದಿಷ್ಠಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಕನಿಷ್ಠ ೩ ವರ್ಷ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಅರ್ಹತಾ ದಿನಾಂಕ ೧ ನವಂಬರ್ ೨೦೧೯ಕ್ಕೆ ಸಂಬಂಧಿಸಿದಂತೆ ಮತದಾರರ ನೊಂದಣಿ ನಿಯಮಗಳು ೧೯೬೦ರ ಅನುಸಾರ ನಮೂನೆ-೧೯ರಲ್ಲಿ ಅರ್ಜಿಯನ್ನು ಭರ್ತಿಮಾಡಿ ಸಲ್ಲಿಸಬಹುದಾಗಿದೆ.
ಈ ಹಿಂದಿನ ಶಿಕ್ಷಕರ ಮತದಾರರ ಪಟ್ಟಿಯು ರದ್ದಾಗಿರುವುದರಿಂದ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಈ ಹಿಂದೆ ಸೇರ್ಪಡೆಗೊಂಡಿರುವ ಪ್ರತಿಯೊಬ್ಬರು ಹಾಗೂ ಅರ್ಹರು ಹೊಸದಾಗಿ ನಮುನೆ-೧೯ರಲ್ಲಿ ಸೂಕ್ತಿ ದಾಖಲೆಗಳನ್ನು ಲಗತ್ತಿಸಿ ದಿನಾಂಕ ೦೬ ನವಂಬರ್ ೨೦೧೯ರ ಒಳಗಾಗಿ ಮುಖ್ಯ ಚುನಾವಣಾಧಿಕಾರಿಗಳು ನೇಮಿಸಿರುವ ಅಧಿಕಾರಿಗಳಾದ ಸುರೇಶ ಅಂಕಲಗಿ ಸಹಾಯಕ ಚುನಾವಣಾಧಿಕಾರಿಗಳು ಹಾಗು ತಹಸೀಲ್ದಾರರು ಸುರಪುರ, ಸುರೇಶ ಚವಲ್ಕರ್ ತಹಸೀಲ್ದಾರರು ಹುಣಸಗಿ,ಸೋಫಿಯಾ ಸುಲ್ತಾನ ಗ್ರೇಡ-೨ ತಹಸಿಲ್ದಾರರು ತಹಸೀಲ್ ಕಚೇರಿ ಸುರಪುರ,ಶ್ರೀಧರ್ ಪವಾರ್ ಉಪ ತಹಸೀಲ್ದಾರರು ಹುಣಸಗಿ,ಮಲ್ಲಿಕಾರ್ಜುನ ಉಪ ತಹಸೀಲ್ದಾರ ಕೆಂಭಾವಿ,ಮಹಾದೇವಪ್ಪಗೌಡ ಉಪ ತಹಸೀಲ್ದಾರ ಕೊಡೇಕಲ್ ಇವರುಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.