ಶ್ರೀಪ್ರಭು ಕಾಲೇಜ್ ಸಮಾಜಶಾಸ್ತ್ರ ವಿಭಾಗ ವಿದ್ಯಾರ್ಥಿಗಳ ಹೆಳವರ ಅಧ್ಯಯನ

0
80

ಸುರಪುರ: ನಗರದ ಶ್ರೀ ಪ್ರಭು ಮಹಾವಿಧ್ಯಾಲಯದ ಸಮಾಜಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ರಾಯಚೂರು ವಿಶ್ವವಿದ್ಯಾಲಯದ ಆದೇಶದಂತೆ ಬಿ. ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕ್ಷೇತ್ರಾಧ್ಯಯನ ಕಡ್ಡಾಯವಾಗಿ ಕೈಗೊಳ್ಳಬೇಕೆನ್ನುವ ಆದೇಶದ ಭಾಗವಾಗಿ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹೆಳವ ಸಮುದಾಯದ ಸಂಸ್ಕೃತಿ ಎನ್ನುವ ವಿಷಯದ ಕುರಿತು ಅಧ್ಯಯನ ಕೈಗೊಂಡು ಇದಕ್ಕಾಗಿ ಸುರಪುರದ ಕುಂಬಾರಪೇಟೆಯ ಹೊರವಲಯದಲ್ಲಿ ತಂಗಿರುವ ಹೆಳವ ಸಮುದಾಯದ ಜನರನ್ನು ಸಂಧರ್ಶಸಿ ಸಮಗ್ರ ಮಾಹಿತಿಯನ್ನು ಕಲೆಹಾಕಲಾಯಿತು.

ಈ ಕ್ಷೇತ್ರಾಧ್ಯಯನ ಮಹತ್ವದ ಕುರಿತು ಅಭಿಪ್ರಾಯವನ್ನು ಹಂಚಿಕೊಂಡ ವಿಭಾಗದ ಮುಖ್ಯಸ್ಥರಾದ ಡಾ. ಸಾಯಿಬಣ್ಣ ಮುಡಬುಳರವರು ಶೈಕ್ಷಣಿಕ ಸಂಸ್ಥೆಗಳು ಹಮ್ಮಿಕೊಳ್ಳುವ ಕ್ಷೇತ್ರಾಧರಿತ ಅಧ್ಯಯನಗಳು ಅತ್ಯಂತ ಸತ್ವಪೂರ್ಣ, ಯತವತ್ತಾದ ಮಾಹಿತಿಯ ಆಗರಗಳಾಗಿವೆ. ಭಿನ್ನ ನೆಲೆಯ ಪರಿಭಾವನೆಯೊಂದಿಗೆ ಇಡಿಯಾದ ವಸ್ತುನಿಷ್ಠ ಚಿತ್ರಣವನ್ನು ಸಮಾಜಕ್ಕೆ ಮತ್ತು ಆಡಳಿತಗಾರರಿಗೆ ಇಂತಹ ಅಧ್ಯಯನಗಳು ಒದಗಿಸುತ್ತವೆ. ಪ್ರಸ್ತುತ ಅಧ್ಯಯನವು ಸಹ ಹೆಳವ ಸಮುದಾಯದ ಸಮಸ್ಯೆ ಮತ್ತು ಸವಾಲುಗಳನ್ನು ಹೊರಹಾಕುತ್ತವೆ.

Contact Your\'s Advertisement; 9902492681

ಅಲೆಮಾರಿ ಸಮುದಾಯದ ಸಂಕಷ್ಟಗಳನ್ನು ಸಮಾಜಕ್ಕೆ ಬಿತ್ತರಿಸುವಂತಹ ಅನನ್ಯವಾದ ಕಾರ್ಯಗಳನ್ನು ಈ ತರಹದ ಸಂಶೋಧನಾ ಮಾಡುತ್ತವೆ. ಆಧುನಿಕರಣ, ನಗರಿಕರಣ, ಜಾಗತಿಕರಣದದ ಪ್ರಭಾವದಿಂದ ಅನೇಕ ಸಮುದಾಯಗಳು ಪರಿವರ್ತನೆಯ ಕಕ್ಷೆಗೆ ಮರಳುತ್ತಿವೆ, ಇಂತಹ ಆಧುನಿಕ ಆತಂಕಗಳನ್ನು ಮೀರಿ ಇಂದಿಗೂ ಕೂಡಾ ಹೆಳವ ಸಮುದಾಯ ತನ್ನ ವೃತ್ತಿಯನ್ನು ಮುಂದುವರೆಸುತ್ತಿರುವದು ಬರುತ್ತಿದೆ. ಮನೆತನವೊಂದರ ಇತಿಹಾಸವನ್ನು ತಮ್ಮ ಕಡತಗಳಲ್ಲಿ ಸುಭದ್ರವಾಗಿಟ್ಟುಕೊಂಡು ಅವರ ಇತಿಹಾಸದ ಕುರುಹಗಳ ಕುರಿತು ದಿಗ್ದರ್ಶನ ಮಾಡುವ ಅಪರೂಪ ಕಾಯಕದ ಇವರ ಸಂಸ್ಕೃತಿ ವಿಶೇಷವಾಗಿದೆ ಎಂದರು.

ಇದೆ ಸಂಧರ್ಭದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾದ ನಿಂಗಯ್ಯ ಪೂಜಾರಿ ಚೌಡೇಶ್ವರಿಹಾಳ ಅವರು ತಮ್ಮ ನುಡಿಗಳನ್ನು ಹಂಚಿಕೊಳ್ಳುತ್ತಾ,ಹೆಳವ ಸಮುದಾಯವು ಆಧುನಿಕ ವಿಸ್ಮಯವಾಗಿದೆ. ಮಾಹಿತಿ ತಂತ್ರಜ್ಞಾನದ ಇಂತಹ ದಿನಗಳಲ್ಲೂ ತಮ್ಮ ಆಚಾರ ವಿಚಾರಗಳ ಮೂಲಕ ಸಮಾಜಕ್ಕೆ ಮಹತ್ತರವಾದ ಸಂದೇಶ ನೀಡುತ್ತಿದೆ ಎಂದರು.

ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಹೆಳವ ಸಮುದಾಯದ ಜನರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here