ಸಚಿವ ಸಂಪುಟ ಸಭೆಯಲ್ಲಿ ವಿವಿಧ ಬೇಡಿಕೆ ಈಡೇರಿಕ್ಕೆಗೆ ಆಗ್ರಹ

0
36

ಕಲಬುರಗಿ:ಸಚಿವ ಸಂಪುಟ ಸಭೆಯಲ್ಲಿ ಮುಖ್ಯವಾಗಿ ರಾಜ್ಯ ಸರಕಾರದ ವತಿಯಿಂದ ಕಲಬುರಗಿಯಲ್ಲಿ ತೊಗರಿ ಪಾರ್ಕ ಸ್ಥಾಪಿಸಬೇಕು, ಕಲಬುರಗಿ ಅಭಿವೃದ್ದಿ ಮಂಡಳಿಯನ್ನು ಕೆ.ಎಂ.ಎಫ್ ಮಾದರಿಯಲ್ಲಿ ಬಲಪಡಿಸಿ, ಜಿ.ಐಟ್ಯಾಗ್ ಪಡೆದಿರುವ ತೊಗರಿ ಬೆಳೆಯ ಸರ್ವೋತೊಮುಖ ಅಭಿವೃದ್ದಿಗಾಗಿ ತೊಗರಿ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ್ಣ ಎಸ್. ನಡಗೇರಿ ಆಗ್ರಹಿಸಿದರು..

ರೈತರ ಜಮೀನುಗಳಿಗೆ ನೀರು ಬರುವ ರೀತಿಯಲ್ಲಿ ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುμÁ್ಠನ ಆಗಬೇಕು, ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಪ್ರವಾಸಿ, ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೆ ವಿಶೇಷ ಒತ್ತು ನೀಡಬೇಕು, ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕಲಬುರಗಿಯಲ್ಲಿ 5 ಸ್ಟಾರ್ ಹೊಟೇಲ್ ನಿರ್ಮಿಸಬೇಕು, ಬೆಣ್ಣೆತೋರಾ ಜಲಾಶಯದಲ್ಲಿ ಕೆ.ಆರ್.ಎಸ್ ಮಾದರಿಯ ಉದ್ಯಾನವನ ನಿರ್ಮಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕು, ಕಲ್ಯಾಣ ಕರ್ನಾಟಕದ ಬಡತನ, ನಿರುದ್ಯೋಗ ಮತ್ತು ವಲಸೆ ನಿಯಂತ್ರಿಸಲು ಪ್ರತ್ಯೆಕ ಕೃಷಿ ಮತ್ತು ಕೈಗಾರಿಕಾ ನೀತಿಗಳನ್ನು ಜಾರಿಗೆತರಬೇಕು ಎಂದು ಮನವಿ ಮಾಡಿದ್ದರು

Contact Your\'s Advertisement; 9902492681

ಕೈಗಾರಿಕಾ ಪಾರ್ಕ ಸ್ಥಾಪಿಸಿ, ಹೂಡಕೆದಾರರ ಸಮಾವೇಶ ಮಾಡಬೇಕು, ಕಲಬುರಗಿಯಲ್ಲಿ 100 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ ಮತ್ತು ಕೇಂದ್ರ ಸರ್ಕಾರದ ಎಸ್.ಟಿ.ಪಿ.ಐ ಕೇಂದ್ರವನ್ನು ಸ್ಥಾಪಿಸಬೇಕು, ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಎಲ್ಲಾ ಕಛೇರಿಗಳನ್ನು ಒಂದೇ ಸೂರಿನಡಿ ತರಲು, ಕಛೇರಿಗಳ ಸ್ಥಳಾಂತರ ತಪ್ಪಿಸಲು ಹಾಗೂ ಪ್ರತಿ ವರ್ಷ ಸಚಿವ ಸಂಪುಟ ಸಭೆ ಮತ್ತು ಅಧಿವೇಶನ ನಡೆಸಲು ಕಲಬುರಗಿಯಲಿ ವಿಧಾನಸೌಧದ ಮಾದರಿಯಲ್ಲಿ ಕಲ್ಯಾಣ ಸೌಧ ನಿರ್ಮಾಣ ಮಾಡಬೇಕು ಎಂದರು.

ಕೌಶಾಲ್ಯಭಿವೃದ್ದಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು, ಚಿಂಚೋಳಿಯಲ್ಲಿ ಅರಣ್ಯಕಾಲೇಜು ಸ್ಥಾಪಿಸಬೇಕು, ಕಲಬುರಗಿಯಲ್ಲಿ ಐಐಟಿ ಮಾದರಿಯಲ್ಲಿ ಶ್ರೀ ಅಮೋಘವರ್ಷ ನೃಪತುಂಗ ತಾಂತ್ರಿಕ ಸಂಸ್ಥೆಯನ್ನು ಸ್ಥಾಪಿಸಬೇಕು. ಕಲಬುರಗಿಯಲ್ಲಿ 317 (ಜೆ) ಕಲಂನ ವಿಶೇಷ ಸಚಿವಾಲಯ ಮತ್ತು ನ್ಯಾಯಾಧಿಕರಣ ಸ್ಥಾಪನೆಯಾಗಬೇಕು. ಕರ್ನಾಟಕ ರಾಜ್ಯ ಕ್ರಿಕೇಟ್ ಸಂಸ್ಥೆಯ ಅಡಿಯಲ್ಲಿ ಕಲಬುರಗಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೇಟ್ ಸ್ಟೇಡಿಯಂ ನಿರ್ಮಾಣ ಮತ್ತು ಪ್ರತ್ಯೇಕ ರಾಷ್ಟ್ರಕೂಟ ರಣಜಿ ತಂಡದ ರಚನೆ ಹಾಗೂ ಕಲಬುರಗಿಗೆ ಪ್ರತ್ಯೇಕ ಕ್ರೀಕೆಟ ವಲಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ವಿಮಾನ ನಿಲ್ದಾಣಕ್ಕೆ ಶ್ರೀ ಅಮೋಘ ವರ್ಷ ನೃಪತುಂಗ ವಿಮಾನ ನಿಲ್ದಾಣ ಎಂದು ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಗುಲಬರ್ಗಾ ವಿಶ್ವವಿದ್ಯಾಲಯವನ್ನು ರಾಷ್ಟ್ರಕೂಟ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಬೇಕು. ಅದೆ ರೀತಿಯಾಗಿ ಕೇಂದ್ರ ಸರ್ಕಾರದ ವತಿಯಿಂದ ಕಲಬುರಗಿ ರೇಲ್ವೆ ವಿಭಾಗದ ಸ್ಥಾಪನೆ. ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ಏಮ್ಸ್ ಸ್ಥಾಪನೆ. ಕಲಬುರಗಿಗೆ 2ನೇ ವರ್ತುಲ್‍ರಸ್ತೆ ನಿರ್ಮಾಣ. ಬೀದರ-ಕಲಬುರಗಿ-ಲಿಂಗಸುಗೂರು-ಬಳ್ಳಾರಿ (ಎನ್.ಎಚ್-150ಎ) ನಡುವೆ ಚತುಸ್ಪತ್ ಹೆದ್ದಾರಿ ನಿರ್ಮಿಸಬೇಕು. ಕಲಬುರಗಿ ಮೇಘಾ ಟೇಕ್ಸಟೈಲ್ ಪಾರ್ಕನ್ ತ್ವರಿತ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಹೈದ್ರಾಬಾದ ನಗರಕ್ಕೆ ಪರ್ಯಾಯವಾಗಿ ಕಲಬುರಗಿ ನಗರವನ್ನು ಅಭಿವೃದ್ದಿ ಮಾಡಲು ಕಲಬುರಗಿ -ಸೇಡಂ-ಹೈದ್ರಾಬಾದ ನಗರಗಳ ನಡುವೆ ನೂತನ ಎಕ್ಸಪ್ರೇಸ್ ಹೆದ್ದಾರಿ ನಿರ್ಮಾಣ ಮಾಡಲು ಕೇಂದ್ರಕ್ಕೆ ಒತ್ತಾಯ ಮಾಡಬೇಕು.

ರಾಜ್ಯ ಸರ್ಕಾರವು ತನ್ನ ವತಿಯಿಂದ ಆಗಬೇಕಾದ ಕೆಲಸಗಳನ್ನು ತ್ವರಿತವಾಗಿ ಮಾಡಿ, ಕೇಂದ್ರ ಸರ್ಕಾರದಿಂದ ಆಗಬೇಕಾಗಿರುವ ಯೋಜನೆಗಳಿಗಾಗಿ ಕೇಂದ್ರದ ಬಳಿ ಸರ್ಕಾರವು ನಿಯೋಗ ಹೋಗಬೇಕು. ಸದರಿ ಕಲಬುರಗಿ ಸಚೀವ ಸಂಪುಟ ಸಭೆಯಲ್ಲಿ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಮೂಲಕ ನಿಜವಾದ ಕಲ್ಯಾಣ ಕರ್ನಾಟಕ ಮಾಡಲು ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಐತಿಹಾಸಿಕ ದಿನದಂದು ಕಲಬುರಗಿಯಲ್ಲಿ ಸಚಿವರ ಸಂಪುಟ ಸಭೆಯನ್ನು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ ಖರ್ಗೆ, ಶರಣಪ್ರಕಾಶ ಪಾಟೀಲ್, ಬಿ.ಆರ್. ಪಾಟೀಲ್, ಹಾಗೂ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ರವರಿಗೆ ಸಮಸ್ತ ಕಲ್ಯಾಣ ಕರ್ನಾಟಕದ ಜನರ ಪರವಾಗಿ ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ಪತ್ರಿಕಾಗೋಷ್ಟಿಯ ಮೂಲಕ ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ್ಣ ಎಸ್. ನಡಗೇರಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ್ಣ ಎಸ್. ನಡಗೇರಿ, ಬಾಬು ಮದನಕರ, ಜೈಭೀಮ ಮಾಳಗೆ, ಮೋಹನ ಸಾಗರ, ಮಲ್ಲಿಕಾರ್ಜುನ ದೊರೆ, ಅಶೋಕ ಕಾಳಮಂದರಗಿ, ಅರುಣ ಇನಾಂದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here