ಕಲಬುರಗಿ; ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರ್ ಹೆಸರನ್ನು ನಾಮಕರಣ ಮಾಡಲು ಅಗ್ರಹಿಸಿ ಇಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರ್ಗಿ ಜಿಲ್ಲಾ ಸಮಿತಿ ವತಿಯಿಂದ ಮಾನ್ಯ ಪ್ರಧಾನ ಮಂತ್ರಿಗಳಿಗೆ ಪತ್ರ ಚಳುವಳಿ ಅಭಿಯಾನ ಮೂಲಕ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಪತ್ರ ಚಳುವಳಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಯಿತು.
ಈಗ ಪತ್ರ ಚಳುವಳಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಕಲ್ಯಾಣ್ ಕರ್ನಾಟಕದ ಮಠಾದಿಶರ ನೇತೃತ್ವದಲ್ಲಿ ಸಮುದಾಯದ ಮುಖಂಡರು ರಾಜಕೀಯ ದುರಿಣರ, ಸಚಿವರು ,ಸಂಸದರು ಮತ್ತು ವಿಧಾನ ಪರಿಷತ್ ಶಾಸಕರು ಮತ್ತು ಮಾಜಿ ಶಾಸಕರು ಒಲ್ಗೊಂಡತೆ ಒಂದು ನಿಯೋಗ ಮಾಡಿ ಪರಮ ಪೂಜ್ಯರ ನೇತೃತ್ವದಲ್ಲಿ ಕೇಂದ್ರ ಸಚಿವರಿಗೋ ಮನವಿ ಸಲ್ಲಿಸಲಾಗಿವದು ಮತ್ತು
ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಶರಣ್ಬಸವೇಶ್ವರ ಹೆಸರು ನಾಮಕರಣ ಆಗೋವರೆಗೂ ಹೋರಾಟ ನಿತ್ಯಾ ನಿರಂತರ ಹೋರಾಟವಿರುತ್ತದೆ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾ ಅಧ್ಯಕ್ಷ ದಯಾನಂದ ಪಾಟೀಲ್ ಮತ್ತು ಯುವ ಮುಖಂಡರಾದ ಶ್ರೀಧರ್ ಎಮ್ ನಾಗನಹಳ್ಳಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ. ಅಲ್ಲಮ ದೇಶಮುಖ, ಮುಖಂಡರಾದ್ ವಿನೋದ್ ಪಾಟೀಲ್ ಸರಡಗಿ, ಉಪಾಧ್ಯಕ್ಷ ಕಲ್ಯಾಣ್ರಾವ್ ಪಾಟೀಲ್ ಕಣ್ಣಿ, ಮಹೇಶ್ ಚಂದ್ರ ಪಾಟೀಲ್ ಕಣ್ಣಿ, ವೇದಿಕೆಯ ಸಂಘಟನ ಕಾರ್ಯದರ್ಶಿ ಆನಂದ್ ಕಣಸೂರ್, ಜಿಲ್ಲಾ ಸಂಚಾಲಕರಾದ ಗುರುರಾಜ್ ಅಂಬಾಡಿ, ಕಿರಣ್ ಕಣ್ಣಿ, ಆಕಾಶ ಕುಲಕರ್ಣಿ, ಸುನೀಲ್ ಮಹಾಗವಂಕರ್, ಪ್ರಭವ್ ಪಟ್ಟಣಕರ, ಅಭಿಷೇಕ್ ನಾಗನಹಳ್ಳಿ, ಗುರುರಾಜ್ ಸುಂಟನೂರ್ ಸೇರಿದಂತೆ ವೇದಿಕೆಯ ಸದ್ಯಸರು ಉಪಸ್ಥಿತರಿದ್ದರು.